ಅಂತ್ಯೋದಯ ಎಕ್ಸ್ ಪ್ರೆಸ್ ಹಳಿ ತಪ್ಪಿ ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜು.18 (ಪಿಟಿಐ)- ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಮುಂಬೈ-ಗೋರಖ್‍ಪುರ್ ಅಂತ್ಯೋದಯ ಎಕ್ಸ್‍ಪ್ರೆಸ್ ರೈಲಿನ ಬೋಗಿ ಹಳಿ ತಪ್ಪಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೇಂದ್ರ ರೈಲ್ವೆ ವಲಯದ ಕಸಾರ ಮತ್ತು ಇಗಟ್‍ಪುರಿ ವಿಭಾಗಗಳ ಪರ್ವತಮಯ ಪ್ರದೇಶದಲ್ಲಿ 3.50ರ ನಸುಕಿನಲ್ಲಿ ರೈಲಿನ ಎರಡನೆ ಕೋಚ್ ಹಳಿ ತಪ್ಪಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಂತ್ಯೋದಯ ಎಕ್ಸ್‍ಪ್ರೆಸ್ ಛತ್ರಪತಿ ಶಿವಾಜಿ ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖ್‍ಪುರ್‍ಗೆ ತೆರಳುತ್ತಿತ್ತು. ರೈಲಿನ ಬೋಗಿ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಇತರ ರೈಲುಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು.

Facebook Comments