ನಟಿ ಅನುಪ್ರಭಾಕರ್‌ಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.21- ಸ್ಯಾಂಡಲ್‍ವುಡ್‍ನ ನಟಿ ಅನುಪ್ರಭಾಕರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಇಂದು ತಮ್ಮ ಇನ್ಸಾಟಾಗ್ರಾಮ್‍ನಲ್ಲಿ ್ನ ಖಚಿತಪಡಿಸಿದ್ದಾರೆ.  ನನಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಂಡು ಮನೆಯಲ್ಲೇ ಐಸೋಲೇಷನ್‍ಗೆ ಒಳಗಾಗಿದ್ದು, ಶೀಘ್ರ ಗುಣಮುಖರಾಗುವ ಆತ್ಮವಿಶ್ವಾಸದ ಮಾತುಗಳನ್ನು ಬರೆದಿದ್ದಾರೆ.

ಪತಿ ಹಾಗೂ ನಟ ರಘುಮುಖರ್ಜಿ ಸೇರಿದಂತೆ ಕುಟುಂಬದ ಎಲ್ಲಾ ವರದಿಯೂ ನೆಗೆಟಿವ್ ಬಂದಿದೆ ಎಂದು ಕೂಡ ಅನುಪ್ರಭಾಕರ್ ತಿಳಿಸಿದ್ದಾರೆ.
ಕೊರೊನಾ 2ನೆ ಅಲೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಹೇಳಿರುವ ಅನುಪ್ರಭಾಕರ್ ನನ್ನ ಸಂಪರ್ಕಕ್ಕೆ ಬಂದಿರುವವರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಕರೆ ನೀಡಿದ್ದಾರೆ.

Facebook Comments