ಗೋಲಿ ಮಾರೋ : ಕೇಂದ್ರ ಸಚಿವ ವಿವಾದಿತ ಹೇಳಿಕೆಗೆ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.28- ವಿವಾದಾತ್ಮಕ ಹೇಳಿಕೆಗಳಿಂದ ಕೇಂದ್ರ ಸಚಿವರು ಪದೇ ಪದೇ ವಿವಾದಕ್ಕೆ ಸಿಲುಕುತ್ತಿರುವ ಪರಿಪಾಠ ಮುಂದುವರೆದಿದೆ.  ದೆಹಲಿ ವಿಧಾನಸಭಾ ಚುನಾವಣೆ ಅಂಗವಾಗಿ ಸಾರ್ವಜನಿಕ ಭಾಷಣ ಮಾಡಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೆರೆದಿದ್ದ ಸಭಿಕರಿಗೆ ದೇಶದ್ರೋಹಿಗಳನ್ನು ಗುಂಡಿಕ್ಕಿ ಸಾಯಿಸಬೇಕೆಂಬ ಘೋಷಣೆ ಕೂಗಲು ಹೇಳಿ ಠಾಕೂರ್ ವಿವಾದದಲ್ಲಿ ಸಿಲುಕಿದ್ದಾರೆ. ಸಿಎಎ ವಿರೋಧಿ ಪ್ರತಿಭಟನಾ ನಿರತರನ್ನು ಟೀಕಿಸಿರುವ ಅನುರಾಗ್ ಠಾಕೂರ್ ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದು, ನೆರೆದಿದ್ದ ಸಭಿಕರು ಗುಂಡಿಕ್ಕಿ ಎಂದು ಕೂಗಿದ್ದಾರೆ.

ಸಮಾರಂಭವೊಂದರಲ್ಲಿ ಸಭಿಕರಿಗೆ ಇನ್ನು ಹಿಂಸಾತ್ಮಕ ಮಾರ್ಗಕ್ಕಾಗಿ ಪ್ರಚೋದಿಸಿದರೆನ್ನಲಾದ ಕೇಂದ್ರ ಸಚಿವರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು , ಕಾನೂನು ಕ್ರಮ ಜರುಗಿಸುವ ಬಗ್ಗೆ ಪರಿಶೀಲಿಸುತ್ತದೆ.

Facebook Comments