ಕೊರೊನಾ ಸೋಂಕು ಕಲಿಸಿದ ಪಾಠದಿಂದ ಎಚ್ಚೆತ್ತುಕೊಳ್ಳಬೇಕಿದೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.15-ಕೊರೊನಾ ಸೋಂಕು ಪಾಲುದಾರ ರಾಷ್ಟ್ರಗಳೊಂದಿಗೆ ಫಲಪ್ರದ ಅಭಿವೃದ್ಧಿಗೆ ಕೈ ಜೋಡಿಸುವ ಮಹತ್ವವನ್ನು ಎತ್ತಿ ತೋರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಭಿಪ್ರಾಯಪಟ್ಟರು. ಎಫ್‍ಐಸಿಸಿಐ ಆಯೋಜಿಸಿದ್ದ ಭವಿಷ್ಯದ ಭಾರತ ಕುರಿತ ಕಾರ್ಯಾಗಾರವನ್ನು ವರ್ಚುಯಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನಾಯಕತ್ವ, ಶ್ರೇಷ್ಠತೆ, ಹೊಂದಾಣಿಕೆ, ವೈವಿಧ್ಯತೆ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿಕೊಂಡಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗವು ನಾವು ನಮ್ಮ ಭವಿಷ್ಯವನ್ನು ಮರು ರೂಪಿಸಿಕೊಳ್ಳಬೇಕು ಮತ್ತು ನಮ್ಮ ಪ್ರಯತ್ನಗಳನ್ನು ಪುನರ್‍ರಚಿಸಬೇಕು ಎಂಬುದರ ಅರಿವು ಮಾಡಿಕೊಟ್ಟಿದೆ.

ಇದು ಆರೋಗ್ಯಕರ ದೇಹ, ಸ್ವಚ್ಚ ಪರಿಸರ ಮತ್ತು ಅಂತರ್ಗತ ಸಮಾಜವನ್ನು ಹೊಂದುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಇದಕ್ಕಾಗಿ ನಾವು ಫಲಪ್ರದ ಅಭಿವೃದ್ದಿಗೆ ನಾವು ನಮ್ಮ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

Facebook Comments