ಬಿಗ್ ಬ್ರೇಕಿಂಗ್ : ಅಪ್ಪನಾಗುತ್ತಿದ್ದಾರೆ ಕೊಹ್ಲಿ, ಸಿಹಿಸಿದ್ದಿ ಕೊಟ್ಟ ವಿರುಷ್ಕಾ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಆ.27- ಈ ಬಾರಿ ಐಪಿಎಲ್ ಗೆದ್ದು ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡುವ ಕಾತರದಲ್ಲಿರುವ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ನೀಡಲು ಹೊರಟಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್‍ನಲ್ಲಿ ಈ ಸಂತಸದ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಲಕ್ಷಾಂತರ ಟ್ವಿಟ್ಟಿಗರು ಆ ಸುದ್ದಿಯನ್ನು ಓದಲು ಮುಗಿಬಿದ್ದಿದ್ದಾರೆ.

ವಿರಾಟ್ ಪತ್ನಿ ಅನುಷ್ಕಾ ತಮ್ಮ ಟ್ವಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ವಿರಾಟ್‍ರ ಫೋಟೋ ಪ್ರಕಟಿಸಿ ನಾವೀಗ ಇಬ್ಬರಲ್ಲ ಮೂವರು ಎಂದು ಬರೆಯುವ ಮೂಲಕ ಸಂತಸದ ಸುದ್ದಿಯನ್ನು ಹೊರಹಾಕುವ ಕೊರೊನಾ ಫ್ರೀ ಟೈಮ್‍ನಲ್ಲೇ ತಂದೆಯಾಗುವ ಸೂಚನೆ ನೀಡಿದ್ದಾರೆ.

ನಾನು ಹಾಗೂ ವಿರಾಟ್ ಕೊಹ್ಲಿ ಮದುವೆಯಾದ ನಂತರ ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆವು, ಅದಕ್ಕೆ ಈಗ ಸಕಾಲವಾಗಿದ್ದು 2021ರ ಆರಂಭದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳುವ ಮೂಲಕ ವಿರಾಟ್ ಹಾಗೂ ಅನುಷ್ಕಾರ ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿದ್ದಾರೆ.

Facebook Comments

Sri Raghav

Admin