ಡ್ರಗ್ಸ್ ಕೇಸ್ : ಸಿಸಿಬಿ ಮುಂದೆ ಹಾಜರಾದ ಅನುಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಸೆ. 26- ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಅವರು ಇಂದು ವಿಚಾರಣೆಗೆ ಹಾಜರಾದರು.

ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಮಂಗಳೂರು ಪೊಲೀಸರು ಡ್ಯಾನ್ಸರ್ ಕಿಶೋರ ಶೆಟ್ಟಿ ಹಾಗೂ ತರುಣ್‍ನನ್ನು ಬಂಧಿಸಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ನಿರೂಪಕಿ ಅನುಶ್ರೀ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇವರ ಜೊತೆಗಿನ ಪರಿಚಯದ ಬಗ್ಗೆ ಸಿಸಿಬಿ ಪೊಲೀಸರು ಅನುಶ್ರೀಯವರನ್ನು ವಿಚಾರಣೆ ಮಾಡುತ್ತಿದ್ದಾರೆ.

ಬೆಂಗಳೂರಿನ ಅವರ ನಿವಾಸಕ್ಕೆ ಬಂದ ಮಂಗಳೂರು ಪೊಲೀಸರು ಅನುಶ್ರೀ ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಈ ಸಂಬಂಧ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಜಾಲ ಸಂಬಂಧ ಸಿಸಿಬಿ ಪೊಲೀಸರ ಜೊತೆ ಎನ್‍ಸಿಬಿ ಪೊಲೀಸರು ಕೂಡ ಅನುಶ್ರೀ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ನೀವು ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರೇ, ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲಿದ್ದೀರಿ, ಮಂಗಳೂರಿನಲ್ಲಿದ್ದೀರೇ ಒಂದು ವೇಳೆ ಮಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಹೋಗಿದ್ದರೆ ಅಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತೇ, ಅ ಪಾರ್ಟಿಗಳಲ್ಲಿ ನಟ- ನಟಿಯರು, ಸಂಗೀತ ನಿರ್ದೇಶಕರರು ಇನ್ನಿತರರು ಪಾಲ್ಗೊಂಡಿದ್ದರೇ ಎಂಬಿತ್ಯಾದಿ ಪ್ರಶ್ನೆಗಳನ್ನು ಅನುಶ್ರೀ ಅವರಿಗೆ ಸಿಸಿಬಿ ಪೆÇಲೀಸರು ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ.

ಮಾದಕ ಲೋಕದ ನಂಟಿನ ಬಗ್ಗೆ ಅನುಶ್ರೀ ಅವರು ಯಾವ ಯಾವ ವಿಚಾರಗಳನ್ನು ಸಿಸಿಬಿ ಪೆÇಲೀಸರಿಗೆ ಹೇಳುತ್ತಾರೋ ಕಾದು ನೋಡಬೇಕಿದೆ. ನಿನ್ನೆ ವಿಚಾರಣೆಗೆ ಅನುಶ್ರೀ ಹಾಜರಾಗುತ್ತಾರೆಂದು ಹೇಳಲಾಗಿತ್ತು. ಆದರೆ ಹಾಜರಾಗಿರಲಿಲ್ಲ. ಇಂದು ಸಿಸಿಬಿ ಪೆÇಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

Facebook Comments