ಎಪಿಎಂಸಿ ಮಳಿಗೆಗಳ ಶೆಟರ್ ಮುರಿದು ಸರಣಿ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.3- ಮೈಸೂರು-ಊಟಿ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಎಪಿಎಂಸಿಯಲ್ಲಿನ 10 ಮಳಿಗೆಗಳ ಶೆಟರ್‍ಗಳನ್ನು ತೆರೆದು ಒಳನುಗ್ಗಿರುವ ಕಳ್ಳರು 20 ಸಾವಿರಕ್ಕೂ ಹೆಚ್ಚು ಹಣ ಹಾಗೂ ವಸ್ತುಗಳನ್ನು ದೋಚಿದ್ದಾರೆ.

ಇಂದು ಬೆಳಗಿನ ಜಾವ ಲಾರಿಗಳವರು ಲೋಡಿಂಗ್ ಮಾಡಲು ಬಂದಾಗ ಶೆಟರ್‍ಗಳನ್ನು ತೆರೆದಿರುವುದು ಗೊತ್ತಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ತಕ್ಷಣ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments