ದೆಹಲಿಗೆ ಗುರಿ ಇಡಬಹುದು ಎಂದಿದ್ದ ಪಾಕ್ ಅಣುಬಾಂಬ್ ತಯಾರಕ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಮಾಬಾದ್, ಅ.10- ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್‍ನ ಜನಕ ಅಬ್ದುಲ್ ಖದೀರ್ ಖಾನ್ (85) ವಯೋ ಸಹಜ ಕಾಯಿಲೆಗಳಿಂದ ಇಂದು ಮುಂಜಾನೆ ಮೃತರಾಗಿದ್ದಾರೆ. ಎ.ಕ್ಯೂ.ಖಾನ್ ಎಂದೇ ಖ್ಯಾತರಾಗಿದ್ದ ಅವರು ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ತಯಾರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2004ರಲ್ಲಿ ನ್ಯೂಕ್ಲಿಯರ್ ತಂತ್ರಜ್ಞಾನ ಅಭಿವೃದ್ದಿಯ ಜವಾಬ್ದಾರಿ ವಹಿಸಿಕೊಂಡಿದ್ದ ಖಾನ್, ಅದಕ್ಕಾಗಿ ಗೃಹ ಬಂಧನದಲ್ಲಿಯೂ ಕಾಲ ಕಳೆದಿದ್ದರು.

1936ರಲ್ಲಿ ಅವಿಭಜಿತ ಭಾರತದ ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಜನಿಸಿದ್ದ ಖಾನ್, 1947ರಲ್ಲಿ ದೇಶ ವಿಭಜನೆಯಾದಾಗ ಪೋಷಕರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಶ್ವಾಶಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಇಂದು ಮುಂಜಾನೆ ಖಾನ್ ಸಂಶೋಧನಾ ಕೇಂದ್ರದ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಆ ವೇಳೆಗೆ ಅವರ ಶ್ವಾಶಕೋಶದಲ್ಲಿ ಸ್ರಾವವಾಗಿ ಆರೋಗ್ಯ ಹದಗಟ್ಟಿತ್ತು. ಕೊನೆಗೆ ಶ್ವಾಶಕೋಶ ನಿಷ್ಕ್ರೀಯಗೊಂಡು ಇಂದು 7 ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಜ್ಞಾನಿಯನ್ನು ಉಳಿಸಿಕೊಳ್ಳುವ ಸತತ ಪ್ರಾಮಾಣಿಕ ಪ್ರಯತ್ನ ಫಲ ನೀಡಲಲಿಲ್ಲ ಎಂದು ಆತಂಕರಿಕ ಸಚಿವ ಶೇಕ್ ರಷೀದ್ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಇಸ್ಲಮಾಬಾದ್‍ನ ಮಸೀದಿಯಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ.

ಖಾನ್ ಸಾವಿಗೆ ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂತಾಪ ಸೂಚಕ ಸಂದೇಶದಲ್ಲಿ, ವಿಜ್ಞಾನಿ ಡಾ.ಖಾನ್ ದೇಶವನ್ನು ಪ್ರೀತಿಸುತ್ತಿದ್ದರು. ಪಾಕಿಸ್ತಾನ ಇಂದು ನ್ಯೂಕ್ಲಿಯರ್ ಶಕ್ತಿ ಹೊಂದುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಹೆಚ್ಚು ನ್ಯೂಕ್ಲಿಯರ್ ಶಕ್ತಿ ಹೊಂದಿರುವ ನೆರೆಯ ದೇಶದ ಎದರು ಪಾಕಿಸ್ತಾನದ ಭದ್ರತೆ ಖಾತ್ರಿ ಪಡಿಸುವಲ್ಲಿ ಖಾನ್ ಸಂಶೋಧನೆಗಳು ನೆರವಾಗಿದ್ದವು ಎಂದಿದ್ದಾರೆ..

ಪಾಕಿಸ್ತಾನದ ರೆಡಿಯೋ ವರದಿಯ ಪ್ರಕಾರ ಜನರಲ್ ಪರ್ವೇಝ್ ಮುಶ್ರಫ್ ಮಿಲಿಟರಿ ಆಡಳಿತದಲ್ಲಿ ಡಾ.ಖಾನ್‍ರನ್ನು ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನಲ್ಲಿಡಲಾಗಿತ್ತು. ಗೃಹ ಬಂಧನದ ಬಗ್ಗೆ ತೀವ್ರ ಅಸಮಧಾನ ಹೊಂದಿದ್ದ ಅವರು ಈ ದೇಶದಲ್ಲಿ ವಿಜ್ಞಾನಿಗಳಿಗೆ ಅವರ ಅರ್ಹತೆ ತಕ್ಕಂತೆ ಗೌರವ ಸಿಗುವುದಿಲ್ಲ ಎಂದು ವಿಷಾದಿಸಿದ್ದರು.

2009ರಲ್ಲಿ ಇಸ್ಲಮಾಬಾದ್ ಹೈಕೋರ್ಟ್ ಡಾ.ಖಾನ್‍ರನ್ನು ಗೃಹ ಬಂಧನದಿಂದ ಮುಕ್ತಿಗೊಳಿಸಿ, ದೇಶದ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಸಂಚರಿಸಲು ಅವರು ಸ್ವತಂತ್ರರು ಎಂದು ತೀರ್ಪು ನೀಡಿತ್ತು.

2016ರಲ್ಲಿ ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ನ್ಯೂಕ್ಲಿಯರ್ ಶಕ್ತಿ ಹೊಂದಿದೆ. ಸಂಶೋಧನಾ ಕೇಂದ್ರ ಇರುವ ರಾವಲ್‍ಪಿಂಡಿ ಸಮೀಪದ ಕಹುಟಾದಿಂದ ಭಾರತದ ದೆಹಲಿಗೆ ಐದು ನಿಮಿಷದಲ್ಲಿ ಗುರಿ ಇಡುವ ಸಾಮಥ್ರ್ಯ ಹೊಂದಿದೆ ಎಂದು ಡಾ.ಖಾನ್ ಹೇಳಿಕೆ ನೀಡಿದ್ದರು. ಯಾಂತ್ರಿಕ ಬಾಂಬ್‍ಗಳನ್ನು ಖಾನ್ ತಯಾರಿಸಿ ಮತ್ತಷ್ಟು ವಿವಾದಕ್ಕೆ ಸಿಲುಕಿದ್ದರು.

Facebook Comments