ಅರಬ್ಬೀ ಸಮುದ್ರದಲ್ಲಿ ನೌಕಾಪಡೆಗಳ ಸಮರಾಭ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.22- ಅರಬ್ಬೀ ಸಮುದ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ತ್ರಿ ರಾಷ್ಟ್ರಗಳ ನೌಕಾ ಸಮಾರಾಭ್ಯಾಸ ಸಿಟ್ ಮೆಕ್ಸ್-2020 ಆರಂಭವಾಗಿದೆ. ಭಾರತ , ಸಿಂಗಾಪುರ್ ಮತ್ತು ಥೈಲ್ಯಾಂಡ್‍ನ ನೌಕಾಪಡೆಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಿವೆ. ಇಂಡೋ ಫೆಸಿಫಿಕ್ ಜಲ ಪ್ರಾಂತ್ಯದಲ್ಲಿ ಚೀನಾದ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮೂರು ರಾಷ್ಟ್ರಗಳ ನೌಕಾ ಸಮರಾಭ್ಯಾಸ ಪ್ರಾಮುಖ್ಯತೆ ಪಡೆದುಕೊಂಡಿದೆ.

ಭಾರತ, ಸಿಂಗಾಪುರ್ ಮತ್ತು ಥೈಲ್ಯಾಂಡ್‍ನ ಸಮರ ನೌಕೆಗಳು ಜಲಾಂತರ್ಗಾಮಿಗಳು ಮತ್ತು ನೌಕಾ ಪಡೆಯ ಯುದ್ಧಾಸ್ತ್ರಗಳು ಈ ತಾಲೀಮಿನಲ್ಲಿ ಭಾಗವಹಿಸಿವೆ. ಕಳೆದ ವಾರವಷ್ಟೇ ಬಂಗಾಳ ಕೊಲ್ಲಿಯಲ್ಲಿ ಭಾರತ, ಆಸ್ಟ್ರೇಲಿಯಾ, ಜಪಾನ್ ದೇಶಗಳು ಜಂಟಿ ಸಮರಾಭ್ಯಾಸ ನಡೆಸಿದ್ದವು. ಇಂಡೋ ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಚೀನಾದ ಬೇಹುಗಾರಿಕೆ ಹಡಗು ಮತ್ತು ಅದಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ತೀವ್ರವಾಗುತ್ತಿದ್ದು, ಅಕ್ಕ ಪಕ್ಕದ ರಾಷ್ಟ್ರಗಳಿಗೆ ಆತಂಕ ಉಂಟು ಮಾಡಿವೆ.

ಈ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿ, ಅರಬ್ಬೀ ಸಮುದ್ರಗಳಲ್ಲಿ ನಡೆಯುತ್ತಿ ರುವ ಸಮರಾಭ್ಯಾಸಗಳಲ್ಲಿ ಭಾರತವು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ರಾಷ್ಟ್ರಕ್ಕೆ ತನ್ನ ಸಾಮಥ್ರ್ಯದ ಪರೋಕ್ಷ ಎಚ್ಚರಿಕೆ ನೀಡಿದೆ.

ಭಾರತದ ನೌಕಾಪಡೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಬಲವರ್ಧನೆ ಯಾಗುತ್ತಿದ್ದು , ಸ್ಕಾರ್ಪಿಯನ್ ಶ್ರೇಣಿಯ ಜಲಾಂತಗಾರ್ಮಿಗಳು , ಯುದ್ಧ ನೌಕೆಯಿಂದ ಉಡಾಯಿಸ ಬಲ್ಲ ಕ್ಷಿಪಣಿಗಳು ಮತ್ತು ಇತರ ಪ್ರಬಲ ಶಸ್ತ್ರಾಸ್ತ್ರಗಳನ್ನು ಇಂಡಿಯನ್ ನೇವಿ ಹೊಂದುತ್ತಿದ್ದು , ಚೀನಾ ಮತ್ತು ಪಾಕಿಸ್ತಾನ ಒಳಗೊಳಗೆ ಕಂಪಿಸುವಂತಾಗಿದೆ.

Facebook Comments