ಆನ್‍ಲೈನ್‍ನಲ್ಲಿ ಶಸ್ತ್ರ ಪರವಾನಗಿ ಪಡೆಯುವ ಅಪ್ಲಿಕೇಷನ್‍ಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.30- ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಸ್ತ್ರ ಪರವಾನಗಿ ಆನ್‍ಲೈನ್ ಅಪ್ಲಿಕೇಷನ್‍ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಚಾಲನೆ ನೀಡಿದರು. ನಗರ ಪೊಲೀಸ್ ಆಯುಕ್ತರಾದ ಕಮಲ್‍ಪಂತ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ನಗರದ ನಾಗರೀಕರಿಗೆ ಸಂಪರ್ಕ ರಹಿತ ಸೇವೆ ಒದಗಿಸುವುದು ಆನ್‍ಲೈನ್ ಅಪ್ಲಿಕೇಷನ್ ಉದ್ದೇಶವಾಗಿದೆ.

ತೊಂದರೆ ಮುಕ್ತ ಆನ್‍ಲೈನ್ ಪ್ರಕ್ರಿಯೆಯಿಂದಾಗಿ ಶುಲ್ಕ ಪಾವತಿ, ಸೇವಾ ಪ್ರಗತಿ, ವೈಯಕ್ತಿಕ ಮಾಹಿತಿಯ ಸಂಪೂರ್ಣ ಗೌಪ್ಯತೆ ಕಾಪಾಡಬಹುದಾಗಿದೆ ಎಂದು ತಿಳಿಸಿದರು.  ಆನ್‍ಲೈನ್ ಅಪ್ಲಿಕೇಷನ್‍ನಲ್ಲಿ ಹೊಸ ಶಸ್ತ್ರ ಪರವಾನಗಿ, ನವೀಕರಣ, ಪ್ರಯಾಣ ಪರವಾನಗಿ, ಮರು ನೋಂದಣಿ, ಹೆಚ್ಚುವರಿ ಶಸ್ತ್ರ ಹೊಂದಲು ಅರ್ಜಿ, ಮಾರಾಟ, ವರ್ಗಾವಣೆ ಅನುಮತಿ, ಅವ ವಿಸ್ತರಣೆ, ಶಸ್ತ್ರವನ್ನು ತೆಗೆದು ಹಾಕಲು, ವಿಳಾಸ ಬದಲಾವಣೆ ಅರ್ಜಿ ಹಾಗೂ ವ್ಯಾಪ್ತಿ ವಿಸ್ತರಣೆ ಸೇವೆಗೆ ಆನ್‍ಲೈನ್ ಅಪ್ಲಿಕೇಷನ್ ಸಹಕಾರಿಯಾಗಿದೆ ಎಂದು ಆಯುಕ್ತರು ವಿವರಿಸಿದರು.

ಐಟಿ ಹಬ್ ಇರುವ ಕಾರಣ ಆನ್‍ಲೈನ್ ಸೇವೆ ಮಾಡಲಾಗಿದೆ. ಇದುವರೆಗೂ 8,138 ಶಸ್ತ್ರ ಪರವಾನಗಿಯನ್ನು ನೀಡಲಾಗಿದೆ ಎಂದು ಇದೇ ವೇಳೆ ಆಯುಕ್ತರು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments