ಗ್ರಾಮದ ಮನೆಯೊಂದಕ್ಕೆ ನುಗ್ಗಿ ಬಿಸ್ಕತ್, ಸೇಬು ತಿಂದ ಉಗ್ರರು..!

ಈ ಸುದ್ದಿಯನ್ನು ಶೇರ್ ಮಾಡಿ

Trerrorist--01
ಶ್ರೀನಗರ, ಸೆ.14(ಪಿಟಿಐ)- ಮೂವರು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ(ಐಬಿ) ಸಮೀಪದ ಗ್ರಾಮವೊಂದಕ್ಕೆ ನುಗ್ಗಿ ಬಿಸ್ಕತ್‍ಗಳು ಮತ್ತು ಸೇಬುಗಳನ್ನು ತಿಂದ ಘಟನೆ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ ಈ ಉಗ್ರರು ಕಳೆದ ಐದು ದಿನಗಳಿಂದ ಆಹಾರ ಸೇವಿಸಿರಲಿಲ್ಲ.  ಮೂವರು ಶಸ್ತ್ರಸಜ್ಜಿತ ಉಗ್ರರು ರಾತ್ರಿ 8 ಗಂಟೆ ಸಮಯದಲ್ಲಿ ನಮ್ಮ ಮನೆಗೆ ನುಗ್ಗಿದರು. ನಾನು ಕಳೆದ ಐದು ದಿನಗಳಿಂದ ಏನೂ ತಿಂದಿಲ್ಲ. ತಿನ್ನಲು ಮನೆಯಲ್ಲಿ ಏನಿದೆ ಎಂದು ಕೇಳಿದರು. ಭಯಭೀತರಾದ ನಾವು ಮನೆಯಲ್ಲಿದ್ದ ಬಿಸ್ಕತ್ತುಗಳು ಮತ್ತು ಸೇಬುಗಳನ್ನು ಅವರಿಗೆ ನೀಡಿದೇವು. ತುಂಬಾ ಹಸಿದವರಂತೆ ತಿಂದು ನೀರು ಕುಡಿದರು. ನಂತರ ಈ ವಿಷಯವನ್ನು ಭದ್ರತಾ ಪಡೆಗಳಿಗೆ ತಿಳಿಸಿದರೆ ಮತ್ತೆ ಬಂದು ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಪರಾರಿಯಾದರು ಎಂದು ಮನೆಯಲ್ಲಿದ್ದ ಯುವಕನೊಬ್ಬ ತಿಳಿಸಿದ್ದಾನೆ.

Facebook Comments

Sri Raghav

Admin