ಸೈನಿಕರಿಗೆ ತಾರೆಗಳ ಸಲಾಮ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು/ಮುಂಬೈ,ಜ.16- ದೇಶ ಕಾಯುವ ರಿಯಲ್ ಹೀರೋಗಳಿಗೆ ತೆರೆ ಮೇಲೆ ಮಿಂಚುವ ತಾರೆಗಳು ಇಂದು ಶುಭಾಶಯ ಕೋರಿದ್ದಾರೆ. 73ನೇ ಸೇನಾ ದಿನಾಚರಣೆಯ ಅಂಗವಾಗಿ ಹಲವು ಯುದ್ಧಗಳಲ್ಲಿ ಹಾಗೂ ಕೆಲವು ವಿಧ್ವಂಸಕ ಕೃತ್ಯಗಳ ವೇಳೆ ವೀರಮರಣವನ್ನಪ್ಪಿರುವ ಸೈನಿಕರಿಗೆ ಒಂದು ಸಲಾಂ ಎಂದು ತಾರೆಯರು ಅವರ ಗುಣಗಾನವನ್ನು ಮಾಡಿದ್ದಾರೆ.

ಬಾಲಿವುಡ್‍ನ ನಂಬರ್ 1 ಸ್ಟಾರ್ ಆಗಿರುವ ಅಕ್ಷಯ್‍ಕುಮಾರ್ ಅವರು ಇಂದು ಸೈನಿಕರೊಂದಿಗೆ ವಾಲಿಬಾಲ್ ಆಡುವ ಮೂಲಕ ಸೈನಿಕರಿಗೆ ವಂದನೆ ಸಲ್ಲಿಸಿದ್ದಾರೆ. ಸೈನಿಕರನ್ನು ಭೇಟಿ ಮಾಡಿ ಅವರೊಂದಿಗೆ ಆಟವಾಡಿರುವುದು ಸಂತಸ ತಂದಿದೆ ಎಂದು ಅಕ್ಷಯ್ ಟ್ವಿಟ್ ಮಾಡಿದ್ದಾರೆ. ನಮ್ಮ ದೇಶದ ಗಡಿಯೊಳಗೆ ಶತ್ರು ಸೇನೆ ನುಗ್ಗಬಾರದೆಂದು ಹಗಲಿರುಳು ಎದೆ ಒಡ್ಡಿ ಕಾವಲು ಕಾಯುತ್ತಿರುವ ಸೈನಿಕರಿಗೆ ವಂದನೆ ಎಂದು ಸ್ಯಾಂಡಲ್‍ವುಡ್‍ನ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ಕೂಡ ಅಂತರ್ಜಾಲದ ಮೂಲಕ ವಂದನೆ ಸಲ್ಲಿಸಿದ್ದಾರೆ.

ಸರಿಲೇರುನಿಕೆವ್ವರು ಪಾತ್ರದಲ್ಲಿ ಸೈನಿಕ ಪಾತ್ರ ನಿರ್ವಹಿಸಿದ್ದ ಟಾಲಿವುಡ್‍ನ ಪ್ರಿನ್ಸ್ ಮಹೇಶ್‍ಬಾಬು ಅವರು ಕೂಡ ಟ್ವಿಟ್ ಮಾಡಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರ ಸೇವೆ ಮತ್ತು ತ್ಯಾಗಕ್ಕೆ ಒಂದು ಸಲಾಂ ಎಂದು ಹೇಳಿದ್ದಾರೆ.  ಟಾಲಿವುಡ್‍ನ ನಟಿ ರಾಕುಲ್‍ಪ್ರೀತ್‍ಸಿಂಗ್ ಸೇರಿದಂತೆ ದೇಶದ ವಿವಿಧ ಭಾಷೆಗಳ ಕಲಾವಿದರು ಹಾಗೂ ತಂತ್ರಜ್ಞರು ಸೈನಿಕರ
ಸೇವೆ ನೆನೆದು ಅವರ ಶೌರ್ಯಕ್ಕೆ ಸಲಾಂ ಹೇಳಿದ್ದಾರೆ.

Facebook Comments