ನಿಮೋಗೆ ಭೇಟಿ ನೀಡಿದ ಮೊದಲ ಪ್ರಧಾನಿ ನಮೋ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.3- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೇಹ್‍ನ ಅತ್ಯಂತ ಎತ್ತರದ ಪ್ರದೇಶದ ನಿಮೋಗೆ ಭೇಟಿ ಕೊಟ್ಟು ಹೊಸ ದಾಖಲೆ ಬರೆದರು.

ಏಕೆಂದರೆ ಈವರೆಗೂ ಯಾವುದೇ ಒಬ್ಬ ಪ್ರಧಾನಿ ಈ ಪ್ರದೇಶಕ್ಕೆ ಭೇಟಿ ಕೊಟ್ಟಿರುವ ಉದಾಹರಣೆಗಳಿಲ್ಲ. ನಿಮೋ ಪ್ರದೇಶ ಲೇಹ್‍ನಿಂದ 11 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿದೆ.

ಅತ್ಯಂತ ದುರ್ಗಮ ಹಾಗೂ ಹಿಮಚ್ಛಾಧಿತ ಈ ಪ್ರದೇಶಕ್ಕೆ ಸಾಮಾನ್ಯವಾಗಿ ಸೇನಾ ಮುಖ್ಯಸ್ಥರೇ ಭೇಟಿ ಕೊಡುವುದು ಅಪರೂಪ. ಈ ಎಲ್ಲ ಶಿಷ್ಟಾಚಾರಗಳನು ಬದಿಗೊತ್ತಿದ ಪ್ರಧಾನಿಯವರು ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಲೇಹ್‍ಗೆ ತೆರಳಿ ಅಲ್ಲಿಂದ ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‍ನಲ್ಲಿ ನಿಮೋಗೆ ಆಗಮಿಸಿದರು.

ಈ ಪ್ರದೇಶಕ್ಕೆ ಈವರೆಗೂ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಪ್ರಧಾನಿ ಕೂಡ ಭೇಟಿ ನೀಡಿರಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಸೈನಿಕರೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಕುಂದುಕೊರತೆಗಳು ಹಾಗೂ ಗಡಿ ಉದ್ವಿಗ್ನತೆ ಕುರಿತಂತೆ ಖುದ್ದು ಸೈನಿಕರಿಂದಲೇ ಮಾಹಿತಿ ಪಡೆದರು. ದೇಶದ ಪ್ರಧಾನಿಯವರೇ ತಮ್ಮನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಕ್ಕೆ ಸ್ವತಃ ಸೈನಿಕರೇ ಪುಳಕಿತರಾಗಿದ್ದಾರೆ.

Facebook Comments