ಬೃಹತ್ ಹಿಮಬಂಡೆ ಕುಸಿದು ಸೇನಾಧಿಕಾರಿ ಮತ್ತು ಯೋಧರೊಬ್ಬರ ದುರಂತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಗ್ಯಾಂಗ್ಟಕ್, ಮೇ 15- ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಪಹರೆಗೆ ನಿಯೋಜನೆಗೊಂಡಿದ್ದ ಸೇನಾ ಪಡೆ ಮೇಲೆ ಬೃಹತ್ ಹಿಮಬಂಡೆ ಕುಸಿದು ಸೇನಾಧಿಕಾರಿ ಮತ್ತು ಯೋಧರೊಬ್ಬರು ದುರಂತ ಸಾವಿಗೀಡಾಗಿದ್ದಾರೆ.

ಉತ್ತರ ಸಿಕ್ಕಿಂನ ಲುಗ್‍ನಕ್ ಪರ್ವತ ಪ್ರದೇಶದಲ್ಲಿ ನಿನ್ನೆ ಭಾರೀ ಹಿಮಪಾತ ಸಂಭವಿಸಿದ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಯೋಧ ಸಪಳ ಷಣ್ಮುಖ ರಾವ್ ಸಾವಿಗೀಡಾಗಿದ್ದಾರೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲುಗ್‍ನಕ್ ಪರ್ವತ ಪ್ರದೇಶದಲ್ಲಿ ಪಹರೆ ಮತ್ತು ಹಿಮಪಾತ ತೆರವು ಕಾರ್ಯಾಚರಣೆಗಾಗಿ ರಾಬರ್ಟ್ ಮತ್ತು ಷಣ್ಮುಖ ಸೇರಿದಂತೆ 18 ಯೋಧರು ನಿಯೋಜಿತರಾಗಿದ್ದರು. ಈ ಸಂದರ್ಭದಲ್ಲಿ ಹಿಮಪಾತವಾಗಿ ಲೆಫ್ಟಿನೆಂಟ್ ಮತ್ತು ಯೋಧ ಮಂಜುಗಡ್ಡೆ ಬೃಹತ್ ಬಂಡೆಯಲ್ಲಿ ಸಮಾಧಿಯಾದರು.

ಅವರನ್ನು ರಕ್ಷಿಸಲು ಇತರ ಸಿಬ್ಬಂದಿ ನಡೆಸಿ ಯತ್ನ ವಿಫಲವಾಯಿತು. ಈ ದುರ್ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕರ್ತವ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ರಾಬರ್ಟ್ ಮತ್ತು ಷಣ್ಮುಖ ಅವರ ಸೇವೆಯಲ್ಲಿ ಭಾರತೀಯ ಸೇನೆ ಪ್ರಶಂಸಿಸಿ ಅವರ ಸಾವಿಗೆ ಸಂತಾಪ ಸೂಚಿಸಿದೆ.

Facebook Comments

Sri Raghav

Admin