ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿ ಸಂಭ್ರಮ ಪಟ್ಟ ಉದ್ದವ್ ಠಾಕ್ರೆ..!

ಈ ಸುದ್ದಿಯನ್ನು ಶೇರ್ ಮಾಡಿ

# ಮಹಾಂತೇಶ್ ಬ್ರಹ್ಮ
ಅದು ಜೂನ್ 25, 1975. ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಾದ ವರ್ಷ,ಸ್ವತಂತ್ರ ಭಾರತದಲ್ಲಿ ಒಂದು ಕರಾಳ ಅಧ್ಯಾಯ. ಪ್ರಜಾಪ್ರಭುತ್ವದ ಹಕ್ಕುಗಳನ್ನ ಹತ್ತಿಕ್ಕಿ ಸಂವಿಧಾನಿಕ ಅಧಿಕಾರವನ್ನ ದುರುಪಯೋಗಪಡಿಸಿಕೊಂಡು 25-6-1975 ರಿಂದ 21-03-1977ರವರೆಗೆ ಸುಮಾರು 21 ತಿಂಗಳ ಕಾಲ ಇಡೀ ದೇಶವನ್ನೇ ತನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಮನಬಂದಂತೆ ಸರ್ವಾಧಿಕಾರಿಯಾಗಿ ಮೆರೆದದ್ದು ನೆಹರೂ ವಂಶಸ್ಥೆ, ಉಕ್ಕಿನ ಮಹಿಳೆ, ಭಾರತ ದೇಶದ ಏಕೈಕ ಮಹಿಳಾ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾಗಾಂಧಿ.

ಆಗ ತಾನೇ ಇಂಡಿಯಾ-ಪಾಕಿಸ್ಥಾನ ಯುದ್ಧ ಮುಗಿದಿತ್ತು ಇಡೀ ಭಾರತವೇ ಪಾಕಿಸ್ತಾನವನ್ನು ಸೋಲಿಸಿದ ಸಂಭ್ರಮದಲ್ಲಿ ತೇಲಿ ಹೋಗಿತ್ತು. ಆದರೆ ಇನ್ನೊಂದು ಕಡೆ ಆ ಯುದ್ಧವನ್ನು ಮುನ್ನಡೆಸಿ ಗೆಲುವನ್ನು ಸಾಧಿಸಲು ಕಾರಣಕರ್ತರಾಗಿದ್ದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಕುಳಿತಿದ್ದ ಕುರ್ಚಿ ಮಾತ್ರ ಜೋರಾಗಿ ಅಲುಗಾಡಲು ಶುರುವಾಗಿತ್ತು.

ಇಡೀ ದೇಶವೇ ಸಂಭ್ರಮದಿಂದ ಯುದ್ದ ಗೆದ್ದ ಸಡಗರದಲ್ಲಿ ಭೊಲೋ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಿದ್ದರೆ. ಇಂದಿರಾ ತಲೆಯಲ್ಲಿ ಬೇರೆಯದೇ ಲೆಕ್ಕಾಚಾರ ಶುರುವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಇಂದಿರಾ ಗಾಂಧಿಯವರ ವಿರುದ್ಧ ಹೀನಾಯವಾಗಿ ಸೋತಿದ್ದ ಜನತಾ ಪಾರ್ಟಿಯ ಅಭ್ಯರ್ಥಿ ರಾಜ್ ನಾರಾಯಣ್ ದಾಖಲೆ ಸಮೇತವಾಗಿ ಅಲಹಾಬಾದ್ ಹೈಕೋರ್ಟ್ ಕದ ತಟ್ಟಿ ಇಂದಿರಾಗಾಂಧಿ ನಕಲಿ ಯಂತ್ರಗಳನ್ನು ಬಳಸಿ ಚುನಾವಣೆ ಗೆದ್ದಿದ್ದಾರೆ ಎಂದು ಕೇಸ್ ಫೈಲ್ ಮಾಡಿದ್ದರು.

ಇದು ಸುಮಾರು 3 ವರ್ಷಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ಇಂದಿರಾ ತಪ್ಪಿತಸ್ಥೆ ಎಂದು ಅಲಹಬಾದ್ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಶಾಂತಿ ಭೂಷಣ್ ತೀರ್ಪು ನೀಡಿಯೇ ಬಿಟ್ಟರು. ಉಕ್ಕಿನ ಮಹಿಳೆ ಇಂದಿರಾ ಪ್ರಧಾನಿ ಕುರ್ಚಿಯನ್ನು ಉಳಿಸಿಕೊಳ್ಳುವ ಏಕೈಕ ಕಾರಣದಿಂದ ಇಂಡಿಯಾ-ಪಾಕಿಸ್ಥಾನ ಯುದ್ಧದ ನೆಪವೊಡ್ಡಿ ದೇಶದ ಆಂತರಿಕ ಭದ್ರತೆಯ ಕಾರಣ ನೀಡಿ ದೇಶದಲ್ಲಿ ತುರ್ತ ಪರಿಸ್ಥಿತಿ ಜಾರಿಗೊಳಿಸಲು ಅಂದಿನ ರಾಷ್ಟ್ರ ಪತಿ ಫಕ್ರುದ್ದಿನ್ ಅಲಿ ಅಹಮದ್ ರವರಿಗೆ ಪ್ರಧಾನಿ ಕಚೇರಿಯಿಂದ ಕರಡು ಪ್ರತಿಯನ್ನು ಕಳಿಸಿಯೇ ಬಿಡುತ್ತಾರೆ.

ಆಗ ಹಿಂದೆ-ಮುಂದೆ ಯೋಚಿಸದೇ ಪ್ರಧಾನ ಮಂತ್ರಿಯವರ ಮನವಿ ಮೇರೆಗೆ ಕರಡು ಪ್ರತಿಯ ಮೇಲೆ ರಬ್ಬರ್ ಸ್ಟಾಂಪ್ ನ ಮುದ್ರೆ ಒತ್ತಿ 1977ರ ಲೋಕಸಭಾ ಚುನಾವಣೆಯವರೆಗು ಅನ್ವಯವಾಗುವಂತೆ 25-6-1975 ರಂದು ಮಧ್ಯರಾತ್ರಿ ದೇಶದಾದ್ಯಂತ ತುರ್ತುಪರಿಸ್ಥಿತಿಯನ್ನು ಜಾರಿ ಮಾಡುತ್ತಾರೆ. ಆಗಲೇ ನೋಡಿ ದೇಶದ ತುಂಬಾ ದೊಡ್ಡ ಹೋರಾಟಗಳೇ ಪ್ರಾರಂಭವಾಗಿಬಿಡುತ್ತವೆ.

ಇಂದಿರಾಗಾಂಧಿಯವರು ತಮ್ಮ ಚುನಾವಣಾ ಭ್ರಷ್ಟಾಚಾರದಿಂದ ಬಿದ್ದು ಹೋಗಿರುವ ಪ್ರಧಾನ ಮಂತ್ರಿಯ ಕುರ್ಚಿಯನ್ನು ಉಳಿಸಿಕೊಳ್ಳುವ ಸಲುವಾಗಿ ದೇಶದಲ್ಲಿ ಸುಖಾ ಸುಮ್ಮನೇ ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದಾರೆ ಎಂದು ಜಯಪ್ರಕಾಶ್ ನಾರಾಯಣ್ ರವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಗಳು, ಸತ್ಯಾಗ್ರಹಗಳು ದೊಡ್ಡ ಮಟ್ಟದಲ್ಲಿ ಇಂದಿರಾ ಪ್ರತಿಕೃತಿಯನ್ನು ದಹಿಸಿ ರಸ್ತೆಗಳಲ್ಲಿ ಹೋರಾಟಗಳು ನಡೆಯುತ್ತಿರುತ್ತವೆ.

ಈ ಪ್ರತಿಭಟನೆಗಳ ಕಾವು ಇಂದಿರಾಗೆ ತಟ್ಟಿದಾಗ ಆಗಲೇ ನೋಡಿ ಆಕೆಯ ಒಳಗಿದ್ದ ಹಿಟ್ಲರ್ ಸರ್ವಾಧಿಕಾರದ ಧೋರಣೆಗಳು ಒಂದೊಂದಾಗಿ ಆಚೆ ಎದ್ದು ಬರುತ್ತವೆ. ಪ್ರತಿಭಟನೆಯನ್ನು ಹತ್ತಿಕ್ಕುವ ಹುಂಬತನದಲ್ಲಿ ಪ್ರತಿಪಕ್ಷಗಳ ಸಾವಿರಾರು ನಾಯಕರನ್ನು ಜೈಲಿಗಟ್ಟುತ್ತಾಳೆ.

ಇದನ್ನು ಖಂಡಿಸಿ ಇಂದಿರಾ ನಡೆಯ ವಿರುದ್ಧವಾಗಿ ಸುದ್ದಿ ಮಾಡಿದ ಪತ್ರಕರ್ತರನ್ನು ಸಹ ಜೈಲಿಗಟ್ಟಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ಸ್ವಾತಂತ್ರ್ಯವನ್ನೇ ಕಿತ್ತುಕೊಂಡು ಸಾಂವಿಧಾನಿಕ ನೀತಿಗೆ ವಿರುದ್ಧವಾಗಿ ಸಂಸತ್ತಿನ ಹೊರಗೆ ತಮಗೆ ಬೇಕಾದ ರೀತಿ ಕಾನೂನುಗಳನ್ನು ಬದಲಾಯಿಸಿ ಕಾಂಗ್ರೆಸ್ಸೇತರ ರಾಜ್ಯಗಳ ಚುನಾಯಿತ ಸರ್ಕಾರಗಳನ್ನು ಇಂದಿರಾಗಾಂಧಿಯವರು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುತ್ತಾರೆ.

ಇದೆಲ್ಲದಕ್ಕು ಕಾರಣ ಅಧಿಕಾರದ ದಾಹ, ಕುರ್ಚಿಯ ಮೋಹ. ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್.ಡಿ.ಎ ಮೈತ್ರಿಕೂಟದಿಂದ ಹೊರ ಬಂದು ಭಾಜಪದ ಸಖ್ಯ ತೊರೆದು ಕಾಂಗ್ರೆಸ್ ಮತ್ತು ಎನ್.ಸಿ.ಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿ ಉದ್ದವ್ ಠಾಕ್ರೆ ಮುಖ್ಯಮಂತ್ರಿ ಆಗಿ ಮಹಾರಾಷ್ಟ್ರದ ಆಡಳಿತ ನಡೆಸುತ್ತಿರುವುದು ಇಡೀ ಜಗತ್ತು ನೋಡುತ್ತಿದೆ.

ಯಾವಾಗಲು ರಾಷ್ಟ್ರ ಪ್ರೇಮ, ಹಿಂದುತ್ವ, ಪ್ರಜಾಪ್ರಭುತ್ವ ಎಂಬ ಸಿದ್ದಾÁಂತದಲ್ಲಿ ರಾಜಕಾರಣ ಮಾಡುತ್ತಿದ್ದ ಬಾಳ್ ಠಾಕ್ರೆಯವರು ಕಟ್ಟಿ ಬೆಳೆಸಿದ್ದ ಶಿವಸೇನೆ ಅವರ ಮರಣದ ನಂತರ ಅವರ ಪುತ್ರ ಉದ್ದವ್ ಠಾಕ್ರೆ ಬಿಜೆಪಿ ಸಂಘವನ್ನು ತೊರೆದು ಅಧಿಕಾರದ ದಾಹಕ್ಕಾಗಿ ಕುರ್ಚಿಯ ಮೋಹಕ್ಕಾಗಿ ಕಾಂಗ್ರೆಸ್ ಜೊತೆ ಮೈತ್ರಿ ಬೆಳೆಸಿ ಸರ್ವಾಧಿಕಾರಿ ಹಿಟ್ಲರ್ ರೀತಿ ಮೆರೆಯುತ್ತಿದ್ದಾರೆ. ಉದ್ಧವ್ ಠಾಕ್ರೆ ವಿರುದ್ಧ ದ್ವನಿ ಎತ್ತಿದರೆ ಅವರ ಸೊಲ್ಲನ್ನು ಅಡಗಿಸಲು ಕಾನೂನು ದುರುಪಯೋಗ ಮಾಡಿಕೊಂಡಾದರು ಸರಿ ಅವರನ್ನು ಮಟ್ಟ ಹಾಕುವ ನೀಚ ಕೃತ್ಯಕ್ಕೆ ಇಳಿದಿರುವುದನ್ನು ನೋಡಿ ಸ್ವತಃ ಶಿವಸೇನೆ ಕಾರ್ಯ ಕರ್ತರೇ ಇದನ್ನು ಒಳಗೊಳಗೆ ಖಂಡಿಸುತ್ತಿದ್ದಾರೆ.

ಉದ್ಧವ್ ಠಾಕ್ರೆಯವರಿಗೆ ಇಂತಹ ಕೊಳಕು ಮನಸ್ಥಿತಿ ಹೇಗೆ ನಿರ್ಮಾಣ ವಾಯಿತೋ ಗೊತ್ತಿಲ್ಲ,ಇದೆಲ್ಲ ಕಾಂಗ್ರೆಸ್ ನ ಸಹವಾಸ ದೋಷ ಎಂಬುದು ಕಾರ್ಯಕರ್ತರ ಅಭಿಪ್ರಾಯ. ಕಾರ್ಯಕರ್ತರ ಅಭಿಪ್ರಾಯ ಏನೇ ಇರಲಿ ಅದು ಅವರ ಆಂತರಿಕ ವಿಚಾರ. ಇಲ್ಲಿ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಲೇಬೇಕು.. ಬಾಲಿವುಡ್ ನ ಖ್ಯಾತ ಚಿತ್ರನಟ ಅನುಮಾನಸ್ಪಾದ ಸಾವಿನ ಬಗ್ಗೆ ಇಡೀ ಬಾಲಿವುಡ್ ಬಾಯಿಗೆ ಬೀಗ ಹಾಕಿಕೊಂಡಿತ್ತು.ಆದರೆ ಅದರ ಬಗ್ಗೆ ಗಟ್ಟಿಯಾಗಿ ಧ್ವನಿಯೆತ್ತಿದ್ದು ಮಾತ್ರ ಖ್ಯಾತ ನಟಿ ಕಂಗನಾ ರಾಣಾವತ್.

ಸುಶಾಂತ್ ಸಿಂಗ್‍ರ ಸಾವು ಆತ್ಮಹತ್ಯೆಯಲ್ಲ ಇದೊಂದು ಪೂರ್ವ ನಿಯೋಜಿತ ಕೊಲೆ ಇದರ ಬಗ್ಗೆ ಸಿಬಿಐ ಸೂಕ್ತ ತನಿಖೆ ಮಾಡಬೇಕು ಎಂದು ಉದ್ದವ್ ಠಾಕ್ರೆ ಸರ್ಕಾರದ ವಿರುದ್ಧ ಗುಟುರು ಹಾಕಿದರು. ಆಗಲೇ ನೋಡಿ ಶಿವಸೇನೆ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕಂಗನಾಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಮುಂಬೈ ನ ಪ್ರತಿಷ್ಟಿತ ನಗರದಲ್ಲಿದ್ದ ಸುಮಾರು 20 ಕೋಟಿ ಬೆಲೆ ಬಾಳುವ ಕಂಗನಾಳ ಮನೆಯನ್ನು ಕಳೆದ ಸೆಪ್ಟೆಂಬರ್ 19 ರಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿ ಅಕ್ರಮವಾಗಿ ಈ ಕಟ್ಟಡ ನಿರ್ಮಿಸಲಾಗಿದೆ ಎಂದು ಕಾರಣ ನೀಡಿ ಒಂದೇ ದಿನದಲ್ಲಿ ಕಂಗನಾ ಇಲ್ಲದ ಸಮಯ ನೋಡಿ, ಪಾಪ ಬೆವರು ಸುರಿಸಿ ಕಷ್ಟಪಟ್ಟು ಕಟ್ಟಿಸಿದ್ದ ಆಕೆಯ ಕನಸಿನ ಮನೆಯನ್ನು ಉದ್ದವ್ ಠಾಕ್ರೆ ನೆಲಸಮ ಮಾಡಿಸಿದರಲ್ಲ ಇದು ಸರ್ವಾಧಿಕಾರಿ ಧೋರಣೆ ಅಲ್ಲದೇ ಮತ್ತೇನು..?

ಅದೇ ರೀತಿ ಉದ್ಧವ್ ಠಾಕ್ರೆ ವಿರುದ್ಧ ಅವರ ಹಿಟ್ಲರ್ ಸಂಸ್ಕøತಿಯ ವಿರುದ್ಧ ಖಂಡಿಸುತ್ತ ವರದಿ ಮಾಡುತ್ತಿದ್ದದ್ದು ಎಂದರೆ ಗೋಸ್ವಾಮಿ ಮಾತ್ರ ಟಿವಿ ಮಾಧ್ಯಮದಲ್ಲಿ ಒಂದು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ, ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯ ವರದಿಗಳು ಯಾವಾಗಲು ಸತ್ಯಕ್ಕೆ ಹತ್ತಿರ. ಸತ್ಯ ಯಾವಾಗಲು ಕಹಿ ಎಂಬಂತೆ ಇದನ್ನು ಅರಗಿಸಿಕೊಳ್ಳಲಾಗದ ಶಿವಸೇನೆಯವರು ಅರ್ನಾಬ್ ಗೋಸ್ವಾಮಿಯವರನ್ನು ಹೇಗಾದರು ಮಾಡಿ ಬಗ್ಗು ಬಡಿಯಲೇ ಬೇಕೆಂಬ ತೀರ್ಮಾನಕ್ಕೆ ಬಂದು ಬಿಟ್ಟರು.

ಇಡೀ ಮಹಾರಾಷ್ಟ್ರದ ಸರ್ಕಾರ,ಬಾಲಿವುಡ್ ಚಿತ್ರರಂಗ ಒಂದೋ ಎರಡೋ ಚಾನೆಲ್ ಹೊರತು ಪಡಿಸಿ ಇಡೀ ಮಾದ್ಯಮ ರಂಗ ಎಲ್ಲ ಒಂದಾಯಿತು . ಆದರೆ, ಅರ್ನಾಬ್ ಗೋಸ್ವಾಮಿ ಒಬ್ಬರೇ ಒಂಟಿ ಸಲಗವಾಗಿ ಮಹಾರಾಷ್ಟ್ರ ಸರ್ಕಾರದ ಭ್ರಷ್ಟಾಚಾರ, ನೀತಿ ನಿಜಾಯಿತಿ ಇಲ್ಲದೇ ನಡೆಸುತ್ತಿದ್ದ ತುಘಲಕ್ ದಬಾರ್ರ್ ಬಗ್ಗೆ ವರದಿ ಪ್ರಸಾರ ಮಾಡಿ ದೇಶದ ಗಮನ ಸೆಳೆಯುತ್ತಿದ್ದರೆ ಮಹಾರಾಷ್ಟ್ರ ಸರ್ಕಾರ ಮಾತ್ರ ಅವರನ್ನು ಹಣಿಯಲು ಷಡ್ಯಂತ್ರ ರೂಪಿಸುತಿತ್ತು, ಜೇಡರ ಬಲೆ ಹೆಣೆಯುತ್ತಿತ್ತು.

ಮೊದಲ ಅಸ್ತ್ರ ಪ್ರಯೋಗಿಸಿದ್ದು ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ. ರಿಪಬ್ಲಿಕ್ ಟಿವಿ ಸುಳ್ಳು ಸುದ್ದಿ ಬಿತ್ತರಿಸಿ ಸರ್ಕಾರಕ್ಕೆ ಮತ್ತು ಬಾಲಿವುಡ್ ಚಿತ್ರರಂಗಕ್ಕೆ ತೇಜೊವದೆ ಮಾಡಿ ಮಾನಹರಣ ಮಾಡಿದೆ ಆದ್ದರಿಂದ ಹಕ್ಕು ಚ್ಯುತಿ ಮಂಡಿಸಿ ಅರ್ನಾಬ್ ಗೋಸ್ವಾಮಿ ಯವರನ್ನು ವಿಚಾರಣೆ ಮಾಡಬೇಕು ತಪ್ಪಿತಸ್ಥರಾದ ಅವರನ್ನು ಜೈಲಿಗೆ ಕಳಿಸಬೇಕು ಎಂದು ಸಭಾಪತಿಗಳಿಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದರು.

ಅದರಂತೆ ರಿಪಬ್ಲಿಕ್ ವಾಹಿನಿಯ ವರದಿಗಾರರನ್ನು ಮಹಾರಾಷ್ಟ್ರ ಪೊಲೀಸರು ದಸ್ತಗಿರಿ ಮಾಡಿ ವಿಚಾರಣೆ ನೆಪದಲ್ಲಿ ಅವರಿಗೆ ಮಾನಸಿಕ ಹಿಂಸೆ ನೀಡಿದರು. ನ್ಯಾಯಲಯ ಅವರಿಗೆ ಜಾಮೀನು ನೀಡಿದರು ಸಹ ಉದ್ದೇಶಪೂರ್ವಕವಾಗಿ ಕಾಲ ವಿಳಂಬ ಮಾಡಿ ಆ ವರದಿಗಾರರನ್ನು ಠಾಣೆಯಿಂದ ಬಿಡುಗಡೆ ಮಾಡಿದರು. ಮತ್ತೊಂದು ಕಡೆ ಅರ್ನಾಬ್ ರವರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ಮಹಾರಾಷ್ಟ್ರ ವಿಧಾನಸಭೆಗೆ ಮೇಲಿಂದ ಮೇಲೆ ಕರೆಸಿಕೊಂಡು ಅವರಿಗೆ ಅಪಮಾನ ಮಾಡಿದ್ದು ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ.

ಆಗ ಇದರಿಂದ ಮನನೊಂದ ಅರ್ನಾಬ್ ಸುಪ್ರೀಂ ಕೋರ್ಟ್ ಗೆ ಹೋಗಿ ಶಿವಸೇನೆ ಸರ್ಕಾರದ ಹಕ್ಕು ಚ್ಯುತಿ ದುರುಪಯೋಗದ ವಿರುದ್ಧ ಹೋರಾಟ ಮಾಡಿದರು ಕೊನೆಗೆ ಅರ್ನಾಬ್ ರವರಿಗೆ ನ್ಯಾಯ ಸಿಕ್ಕಿತು. ಉದ್ದವ್ ಠಾಕ್ರೆ ಗೆ ತೀವ್ರ ಮುಖಭಂಗವಾಯಿತು. ಮರಳಿ ಯತ್ನವ ಮಾಡು ಎಂಬಂತೆ ಇಲ್ಲಿಗೆ ಸುಮ್ಮನಾಗದೆ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದ ಸುಶಾಂತ್ ಗೆಳೆಯ ಆರೋಪಿ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಕಳೆದ ಅಕ್ಟೋಬರ್‍ನಲ್ಲಿ ಅರ್ನಾಬ್ ಗೋಸ್ವಾಮಿ ವಿರುದ್ಧ 200 ಕೋಟಿ ರೂಪಾಯಿಗಳ ಮಾನ ನಷ್ಟ ಮೊಕದ್ದಮೆ ದಾಖಲು ಮಾಡಿ ಅಲ್ಲಿಯು ಸಹ ಅವರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವ ಸಂಚು ನಡೆಯಿತು.

ಇದಕ್ಕೆ ತೆರೆ ಹಿಂದೆ ಪಾತ್ರ ವಹಿಸಿದ್ದು ಸಂದೀಪ್ ಸಿಂಗ್ ರವರಿಗೆ ಕುಮ್ಮಕ್ಕು ಕೊಟ್ಟಿದ್ದು ಅದೇ ಶಿವಸೇನೆ ಸರ್ಕಾರ ಆದರೆ ಅಲ್ಲಿಯು ಉದ್ದವ್ ಠಾಕ್ರೆಯವರಿಗೆ ಮುಖಭಂಗ. ಮರಳಿ ಯತ್ನವ ಮಾಡು ಮರಳಿ ಮರಳಿ ಯತ್ನವ ಮಾಡು ಎಂಬಂತೆ ಅರ್ನಾಬ್ ಗೋಸ್ವಾಮಿಯವರ ರಿಪಬ್ಲಿಕ್ ವಾಹಿನಿ ಟಿ.ವಿ.ರೇಟಿಂಗ್ ಪ್ರಕರಣದಲ್ಲಿ ಅಕ್ರಮವೆಸಗಿದೆ ಎಂದು ಪ್ರಕರಣ ದಾಖಲು ಮಾಡಿ ಅರ್ನಾಬ್ ರವರನ್ನು ಬಂಧಿಸಲು ಹರ ಸಾಹಸವೇ ಮಾಡಿದರು ಅಲ್ಲಿಯು ಉದ್ದವ್ ಠಾಕ್ರೆಯವರಿಗೆ ಮುಖಭಂಗವಾಯಿತು.

ಕೊನೆಗೆ ಇದೆಲ್ಲದರಿಂದ ಹತಾಶೆಗೊಳಗಾಗಿ ಅಪಮಾನಕ್ಕೀಡಾದ ಉದ್ದವ್ ಠಾಕ್ರೆ ಹೇಗಿದ್ದರು ದೀಪಾವಳಿ ಹತ್ತಿರ ಬರುತ್ತಿದೆ ಪಟಾಕಿ ಯಾವುದಾದರೇನು ಹಚ್ಚುವವರು ನಾವಾಗಿರಬೇಕು ಅಷ್ಟೇ ಎಂದು 2018ರಲ್ಲಿ ಐವತ್ಮೂರು ವರ್ಷದ ಇಂಟಿರಿಯರ್ ಡಿಸೈನರ್ ಅನ್ವಯ್ ನಾಯ್ಕï ಆತ್ಮಹತ್ಯೆಗೆ ನೀವು ಪ್ರಚೋದನೆ ನೀಡಿದ್ದೀರ ಎಂದು ಬುಧವಾರ ಬೆಳ್ಳಂಬೆಳಿಗ್ಗೆ ಅರ್ನಾಬ್ ಮನೆಗೆ ನುಗ್ಗಿ ಅವರನ್ನು ಎಳೆದಾಡಿ ಹಲ್ಲೇ ಮಾಡಿ ಬಂಧಿಸಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಸತ್ಯಾ ಸತ್ಯತೆ ನೋಡುವುದಾದರೆ ಅರ್ನಾಬ್ ಗೋ ಸ್ವಾಮಿಯವರಿಗು ಈ ಆತ್ಮಹತ್ಯೆಗೂ ಯಾವುದೇ ಸಂಬಂಧ ಇಲ್ಲವೆಂದು 2019 ರಲ್ಲೇ ಕೇಸು ವಜಾ ಮಾಡಲಾಗಿದೆ. ಅರ್ನಾಬ್ ರವರನ್ನು ನ್ಯಾಯದೀಶರು14 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅದೇನೆ ಇರಲಿ ಸತ್ಯಾಸತ್ಯತೆ ಇಂದಲ್ಲ ನಾಳೆ ಹೊರ ಬಂದೇ ಬರುತ್ತದೆ. ಮಾದ್ಯಮಗಳು ಯಾವಾಗಲು ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ವಿರೋಧ ಪಕ್ಷಗಳಂತೆ ಕೆಲಸ ಮಾಡುವುದು, ಚಾಟಿ ಬೀಸುವುದು, ಖಂಡಿಸುವುದು ಇವೆಲ್ಲ ಮಾಮೂಲು. ಯಾಕೆಂದರೆ ಮಾದ್ಯಮಗಳಿಗೆ ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಕೊಟ್ಟಿರುವಂತಹ ಪತ್ರಿಕಾ ಸ್ವಾತಂತ್ರ್ಯದ ಹಕ್ಕು.

ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಶಿವ ಸೇನೆ ಸರ್ಕಾರ ಉದ್ದೇಶ ಪೂರ್ವಕವಾಗಿ ಅರ್ನಾಬ್ ರವರನ್ನು ಜೈಲಿಗೆ ಕಳಿಸಿದ್ದಾರೆ ಇದರ ವಿರುದ್ಧ ಸಂಪಾದಕರ ಕಮಿಟಿ ದೇಶದ್ಯಾಂತ ಇದು ಪತ್ರಿಕಾ ಸ್ವಾತಂತ್ರ್ಯ ಹರಣ ಎಂದು ಈಗಾಗಲೇ ಹೋರಾಟ ಶುರು ಮಾಡಿದೆ. ಶಿವಸೇನೆ ಸರ್ಕಾರ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾಗಾಂಧಿಯವರಂತೆ ಪತ್ರಿಕಾ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಹುಮತ ಇಲ್ಲದಿದ್ದರೂ ವಿರೋಧ ಪಕ್ಷಗಳು ಎಷ್ಟು ಅಪಾಯಕಾರಿ ಹಾಗೂ 303 ರಷ್ಟು ಬಹುಮತ ಇದ್ದರು ತನ್ನ ಬೆಂಬಲಿಗರನ್ನು ರಕ್ಷಿಸಿಕೊಳ್ಳಲಾಗದಷ್ಟು ಬಿಜೆಪಿ ಅಸಮರ್ಥವಾಗಿದಿಯಾ ಎಂದು  ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ವಿರುದ್ಧ ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಷ್ಟೇ..?

Facebook Comments