ಶಾಕಿಂಗ್ : ಜಗದ್ವಿಖ್ಯಾತ ನಟ ಅರ್ನಾಲ್ಡ್ ಮೇಲೆ ದಾಳಿ..! ವಿಡಿಯೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಜೋಹಾನ್ಸ್‍ಬರ್ಗ್, ಮೇ 19-ಜಗದ್ವಿಖ್ಯಾತ ನಟ ಮತ್ತು ಕ್ಯಾಲಿಫೋರ್ನಿಯಾ ಮಾಜಿ ಗೌರ್ನರ್ ಅರ್ನಾಲ್ಡ್ ಸ್ವಾಜೆನೆಗ್ಗರ್ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿರುವ ಘಟನೆ ದಕ್ಷಿಣ ಆಫ್ರಿಕಾ ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದಿದೆ.

ಅರ್ನಾಲ್ಡ್ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. 71 ವರ್ಷದ ಹಾಲಿವುಡ್ ನಟ ಜೋಹಾನ್ಸ್‍ಬರ್ಗ್‍ನಲ್ಲಿ ತಮ್ಮ ಅರ್ನಾಲ್ಡ್ ಕ್ಲಾಸಿಕ್ ಆಫ್ರಿಕಾ ಸ್ಪೋರ್ಟಿಂಗ್ ಕ್ರೀಡಾಕೂಟ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಹಿಂದಿನಿಂದ ಬಂದು ಅರ್ನಾಲ್ಡ್ ಅವರಿಗೆ ಜಾಡಿಸಿ ಒದ್ದಿದ್ದಾನೆ. ತಕ್ಷಣ ಆತನನ್ನು ಅಭಿಮಾನಿಗಳು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಈ ದೃಶ್ಯಗಳ ವಿಡಿಯೋ ಫುಟೇಜ್ ವೈರಲ್ ಆಗಿದ್ದು, ಅರ್ನಾಲ್ಡ್ ಮೇಲೆ ನಡೆದ ಆಕ್ರಮಣಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿವೆ.

ಟರ್ಮಿನೆಂಟರ್ ಖ್ಯಾತಿಯ ಈ ನಟ ವಜ್ರದೇಹಿಯಾಗಿದ್ದರೂ(ಆರು ಬಾರಿ ಮಿಸ್ಟರ್ ವಲ್ರ್ಡ್ ಪ್ರಶಸ್ತಿ ಪುರಸ್ಕøತ) ಅತ್ಯಂತ ಮೃದು ಸ್ವಭಾವದವರು. ಯಾವುದೇ ವಿವಾದಗಳಿಲ್ಲದ ಸ್ನೇಹಮಯಿ. ಸಮಾಜ ಸೇವೆ ಮತ್ತು ಕ್ರೀಡೆಗಳಿಗೆ ಉತ್ತೇಜನ ನೀಡಲು ಲಕ್ಷಾಂತರ ಡಾಲರ್ ವೆಚ್ಚ ಮಾಡುತ್ತಿದ್ದಾರೆ.

ಇಂಥ ಇಂಟರ್‍ನ್ಯಾಷನಲ್ ಸೆಲೆಬ್ರಿಟಿ ಮೇಲೆ ನಡೆದ ಹಲ್ಲೆಗೆ ಅನೇಕ ಗಣ್ಯರೂ ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಬೆಂಬಲ ಸೂಚಿಸಿರುವ ಅಭಿಮಾನಿಗಳು ಮತ್ತು ಗಣ್ಯರಿಗೆ ಕಮ್ಯಾಂಡೋ ಪ್ರಖ್ಯಾತಿಯ ನಟ ಕೃತಜ್ಞತೆ ಸಲ್ಲಿಸಿದ್ದಾರೆ.

Facebook Comments

Sri Raghav

Admin