ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ವಿರುದ್ಧ ಭಾರತೀಯ ಮಹಿಳೆ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವ ಸಂಸ್ಥೆ ಫೆ.13 (ಪಿಟಿಐ)- ಭಾರತೀಯ ಮೂಲದ ವಿಶ್ವಸಂಸ್ಥೆ ಉದ್ಯೋಗಿ ಆರೋರ ಆಕಾಂಕ್ಷ (34) ವಿಶ್ವಸಂಸ್ಥೆ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿರುದ್ಧ ಸ್ಪರ್ಧಿಸಲು ತೋಳೇರಿಸಿರುವ ಮೊದಲ ಮಹಿಳಾ ಅಭ್ಯರ್ಥಿ. ಭಾರತದಲ್ಲಿ ಜನಿಸಿದ ಆಕಾಂಕ್ಷ, ಕೆನಡಾ ಪಾಸ್‍ಫೋರ್ಟ್ ಹೊಂದಿದ್ದಲ್ಲದೆ ಸಾಗರೋತ್ತರ ಪೌರತ್ವದ ಮೊದಲ ಅಭ್ಯರ್ಥಿ ಎನಿಸಿದ್ದಾರೆ ಎಂದು ತಿಳಿದುಬಂದಿದೆ.

2022ರ ಜನವರಿಯಿಂದ ಆರಂಭವಾಗುವ ಎರಡನೇ ಅವಧಿಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿರುವ ಗುಟೆರೆಸ್‍ಗೆ ಎದುರಾಳಿಯಾಗಿ ಸ್ಪರ್ಧಿಸಲು ಆರೋರ ತಯಾರಿ ನಡೆಸಿದ್ದಾರೆ. ಯುಎನ್‍ನಲ್ಲಿ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎಡಿಪಿ) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋರ, ವಿಶ್ವದ ಉನ್ನತ ರಾಜತಾಂತ್ರಿಕ ಹುದ್ದೆಗೆ ಸ್ಪರ್ಧಿಸುವ ಅಭಿಯಾನವನ್ನು  ಮೂಲಕ ಈ ತಿಂಗಳಲ್ಲಿ ಆರಂಭಿಸಲಿದ್ದಾರೆ.

ನನ್ನ ಸ್ಥಾನದಲ್ಲಿರುವ ಮಂದಿ ಉಸ್ತುವಾರಿ ವಹಿಸಬೇಕಾಗಿಲ್ಲ. ನಮ್ಮ ಸರದಿಗಾಗಿ ಕಾಯಬೇಕು, ಚಕ್ರ ಸುತ್ತಿದಾಗ ಮೇಲೆ ಬರುವಂತೆ ಮಾಡಬೇಕು. ಆಗಲೇ ಅಧಿಕಾರ ಸ್ವೀಕಾರ ಮಾಡಿ ಕೆಲಸ ಮಾಡಬೇಕು. ಅಲ್ಲಿಯವರೆಗೆ ತಲೆ ತಗ್ಗಿಸಿಕೊಂಡು, ಜಗತ್ತು ಇರುವ ರೀತಿ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಆರೋರ ತಮ್ಮ ವಿಡೀಯೋ ಪ್ರಚಾರವನ್ನು ಆನ್‍ಲೈನ್‍ನಲ್ಲಿ ಫೋಸ್ಟ್ ಮಾಡಿದ್ದಾರೆ.

ವಿಡೀಯೋ ದೃಶ್ಯಗಳು ಅಕಾಂಕ್ಷ ಅವರು ವಿಶ್ವಸಂಸ್ಥೆ ಪ್ರಧಾನ ಕಚೇರಿಯೊಳಗೆ ನಡೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಏಕೆಂದರೆ, ಆಕೆಯ ಮೊದಲು ಬಂದ ಮಂದಿ ಯುಎನ್ ಜವಾಬ್ದಾರಿ ಹೊಂದುವಲ್ಲಿ ವಿಫಲರಾಗಿದ್ದಾರೆ ಎಂದು ಅವರ ಧ್ವನಿಮುದ್ರಿಕೆ ಹೇಳುತ್ತದೆ. ಈ ಬಗ್ಗೆ ಮಾತನಾಡಿದ ಆರೋರ ಆಕಾಂಕ್ಷ ಅವರು ಕಳೆದ 75 ವರ್ಷಗಳಲ್ಲಿ ವಿಶ್ವಕ್ಕೆ ಯುಎನ್ ನೀಡಿರುವ ಆಶ್ವಾಸನೆಗಳು ಪೂರ್ಣಗೊಂಡಿಲ್ಲ.

ನಿರಾಶ್ರಿತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ, ಮಾನವೀಯ ನೆರವು ಕಡಿಮೆಯಿದೆ ಮತ್ತು ತಂತ್ರಜ್ಞಾನ ನಾವೀನ್ಯತೆಯಲ್ಲಿ ಹಿಂದುಳಿದೆ. ಆದ್ದರಿಂದ ನಾವು ಪ್ರಗತಿಯತ್ತ ಹೆಜ್ಜೆ ಹಾಕಲು ಅರ್ಹರಾಗಿದ್ದೇವೆ. ಆದ್ದರಿಂದಲೇ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾನು ಸ್ಪರ್ಧಿಸುತ್ತಿದ್ದೇನೆ. ನಾನು ಹಿಂದುಗಡೆ ನಿಲ್ಲಲು ಅಪೇಕ್ಷಿಸುವುದಿಲ್ಲ (ಬೈ-ಸ್ಟ್ಯಾಂಡರ್). ಇದು ವಿಶ್ವಸಂಸ್ಥೆ ಮಾಡಬಹುದಾದ ಅತ್ಯುತ್ತಮ ಕಾರ್ಯ ಎಂದು ನಾನು ಸ್ವೀಕರಿಸುವುದಿಲ್ಲ.

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ 10ನೇ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಇದುವರೆಗೆ ಯಾವೊಬ್ಬ ಮಹಿಳೆ ಅಲಂಕರಿಸಿಲ್ಲ. ಈ ಬಾರಿ ಅದು ಸಾಧ್ಯವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಅಕಾಂಕ್ಷ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 31ರೊಂದು ಗುಟೆರೆಸ್ ಅಧಿಕಾರಾವಧಿ ಮುಗಿಯಲಿದೆ. 2022ರ ಜನವರಿ 1ರಂದು ಹೊಸ ಪ್ರಧಾನ ಕಾರ್ಯದರ್ಶಿ ನೇಮಕಗೊಳ್ಳಲಿದ್ದಾರೆ.

Facebook Comments