ವೃದ್ಧನನ್ನು ಕೊಂದಿದ್ದ ನಾಲ್ವರು ಆರೋಪಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ :  ಹಣ ಸುಲಿಗೆ ಮಾಡಲು ವಯೋವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿ, ವೃದ್ಧನನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ನ್ಯಾಮತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನ್ಯಾಮತಿ ತಾಲ್ಲೂಕು ಸಿದ್ದಾಪುರ ಗ್ರಾಮದ ವಿರುಪಾಕ್ಷಪ್ಪ (65) ಮತ್ತು ಪಾರ್ವತಮ್ಮ (62) ದಂಪತಿ ಮೇಲೆ ಹಲ್ಲೇ ನಡೆದಿದ್ದು, ಹಲ್ಲೇಯಿಂದ ಗಾಯಗೊಂಡಿದ್ದ ವಿರುಪಾಕ್ಷಪ್ಪ ಮೃತಪಟ್ಟಿದ್ದಾರೆ.

ನ್ಯಾಮತಿ ತಾಲ್ಲೂಕು ಬಿದರಹಳ್ಳಿ ಗ್ರಾಮದವರಾದ ಕೆಲಸಗಾರ ಟಿ. ಮಂಜನಾಯ್ಕ, ಸಿದ್ದೇಶನಾಯ್ಕ, ಎಸ. ಮಂಜನಾಯ್ಕ, ಹೊಸಜೋಗ ಗ್ರಾಮದ ಎಸï. ನಾಗರಾಜನಾಯ್ಕ ಬಂಧಿತ ಆರೋಪಿಗಳು. ಈ ದಂಪತಿ ಗ್ರಾಮದ ಸವಳಂಗ-ಶಿಕಾರಿಪುರ ರಸ್ತೆ ಬದಿಯಲ್ಲಿ ಟೀ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು, ಪ್ರತಿ ದಿನ ರಾತ್ರಿ ಅಂಗಡಿಯಲ್ಲೇ ಮಲಗುತ್ತಿದ್ದರು.

ಎಂದಿನಂತೆ ಟೀ ಅಂಗಡಿಯಲ್ಲಿದ್ದ ವೇಳೆ ಇದೇ 4ರಂದು ಬೆಳಗಿನ ಜಾವ 3.30 ರಿಂದ 4 ಗಂಟೆ ಸಮಯದಲ್ಲಿ ಅಂಗಡಿಗೆ ಟೀ ಸಿಗರೇಟು ಕೇಳಲು ಬಂದ ಆರೋಪಿಗಳು ಏಕಾಏಕಿ ಕಬ್ಬಿಣದ ಸುತ್ತಿಗೆ ಮತ್ತು ಕಲ್ಲಿನಿಂದ ಈ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದಾರೆ. ಹಲ್ಲೇಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ವಿರುಪಾಕ್ಷಪ್ಪ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಸ್ಪಿ ಹನುಮಂತರಾಯ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ನಂತರ ಎಎಸ್ಪಿ ಎಂ. ರಾಜೀವ್, ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ಮಾರ್ಗದರ್ಶನದಲ್ಲಿ ಆರೋಪಿತರ ಪತ್ತೆಗೆ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ ನೇತೃತ್ವದಲ್ಲಿ ಪಿಎಸ್ ಐ ಪಿ.ಎಸ್. ರಮೇಶ ಮತ್ತು ಸಿಬ್ಬಂದಿಗಳಾದ ರವಿ ನಾಯಕ, ಕರಿಬಸಪ್ಪ ತಳವಾರ,

ಕೆ. ಮಂಜಪ್ಪ, ಹೆಚ್. ರಜಾಕ್, ಸುರೇಶ, ಉಮೇಶ, ಸಂಜೀವ ಕೊಟಗಿಮನಿ, ಚನ್ನೇಶ, ಮಂಜುನಾಥ, ಕೆ.ಆರ್. ರಾಮಪ್ಪ, ಚಂದ್ರಶೇಖರ, ಪ್ರಶಾಂತ ಮತ್ತು ಎಂ. ಆನಂದ ಒಳಗೊಂಡ ತಂಡವು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಕುರುಹುಗಳು ಮತ್ತು ಗಾಯಾಳು ಪಾರ್ವತಮ್ಮ ಹೇಳಿಕೆ ಆಧರಿಸಿ ಆರೋಪಿಗಳ ಬಂಧಿಸಿ, ಸುಲಿಗೆ ಮಾಡಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.

Facebook Comments