ಮಹಿಳೆಯರು – ವೃದ್ಧೆಯರ ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಮಾ.23- ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿಂದ ಮಹಿಳೆಯರು ಮತ್ತು ವೃದ್ಧೆಯರನ್ನು ಟಾರ್ಗೆಟ್ ಮಾಡಿ ಸರಗಳನ್ನು ಎಗರಿಸುತ್ತಿದ್ದ ಕಳ್ಳರ ತಂಡವೊಂದು ಸಿಕ್ಕಿಬಿದ್ದಿದೆ. ಮದ್ದೂರು ಪಟ್ಟಣದ ನಿವಾಸಿಗಳಾದ ರೂಹೀದ್ ಪಾಷ, ಅಶುಪಾಷ, ಇಮ್ರಾನ್ ಖಾನ್, ಮತೀನ್‍ವುಲ್ಲಾ ಖಾನ್, ನೂರ್ ಅಹಮದ್ ಬಂಧಿತ ಆರೋಪಿಗಳು.
ಕಳವು ಮಾಡಿದ್ದ ಸರಗಳನ್ನು ಮಾರಾಟ ಮಾಡಿ ಪಡೆದಿದ್ದ 3.55 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿಳಾಸ ಕೇಳುವ ನೆಪದಲ್ಲಿ, ಅಂಗಡಿಯಲ್ಲಿ ಸಿಗರೇಟ್ ಕೊಳ್ಳುವ ನೆಪದಲ್ಲಿ, ಇಲ್ಲವೆ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದು ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾಗುತ್ತಿದ್ದ ಪ್ರಕರಣಗಳು ಮೇಲಿಂದ ಮೇಲೆ ನಡೆಯುದ್ದವು. ಇದು ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ಈ ಸರಗಳ್ಳರ ತಂಡ ಒಂದಲ್ಲ ಒಂದು ಕಡೆ ತನ್ನ ಕೈಚಳಕ ತೋರುತ್ತಿತ್ತು. ಹೀಗಾಗಿ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮನೆ ಮಾಡಿತ್ತು.

ಕಡೆಗೂ ಜಿಲ್ಲೆಯ ಪೊಲೀಸ್ ತಂಡ ಒಟ್ಟು ಐದು ಜನ ಖತರ್ನಾಕ್ ಕಳ್ಳರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಜನರು ನೆಮ್ಮದಿಯ ನಿಟ್ಟಿಸಿರು ಬಿಡುವ ಹಾಗೆ ಮಾಡಿದ್ದಾರೆ. ಹೌದು, ಮಂಡ್ಯ ಜಿಲ್ಲೆಯಲ್ಲಿ ಕಳೆದ ಆರೇಳು ತಿಂಗಳಿನಿಂದ ಮೇಲಿಂದ ಮೇಲೆ ಸರಗಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಇದು ಜಿಲ್ಲೆಯ ಪೊಲೀಸರಿಗೆ ತಲೆ ನೋವಾಗಿತ್ತು.

ಹೆಂಗಸರು ಮತ್ತು ವೃದ್ಧೆಯರು ಒಂಟಿಯಾಗಿ ಓಡಾಡಲು ಭಯ ಪಡುವಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ಸರಗಳ್ಳರ ತಂಡ ತಮ್ಮ ಕೈಚಳಕ ಪ್ರದರ್ಶನ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಜಿಲ್ಲೆಯ ಪೊಲೀಸರು ತಮ್ಮದೇ ಆದ ಕಾರ್ಯಾಚರಣೆ ಮೂಲಕ ಈ ಚಾಣಾಕ್ಷ ಸರಗಳ್ಳರ ತಂಡವನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ದೂರಿನ ಕೆಎಂ ದೊಡ್ಡಿ ಪೊಲೀಸರು ಐದು ಜನ ಸರಗಳ್ಳರನ್ನು ಬಂಧಿಸಿ ಎಡೆಮುರಿ ಕಟ್ಟಿದ್ದಾರೆ. ಈ ಮೂಲಕ ಜಿಲ್ಲೆಯ ವಿವಿಧೆಡೆಯಲ್ಲಿ ನಡೆದಿದ್ದ 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ಬಂಧಿತ ಆರೋಪಿಗಳು ಮದ್ದೂರು ಪಟ್ಟಣದವರಾಗಿದ್ದು, ಎಲ್ಲರೂ ಒಂದೇ ಕೋಮಿನವರಾಗಿರುವುದು ವಿಶೇಷ. ಬಂಧಿತ ಸರಗಳ್ಳರು ಜಿಲ್ಲೆಯ ವಿವಿಧೆಡೆ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸುಮಾರು 250 ಗ್ರಾಂ. ಚಿನ್ನದ ಸರಗಳನ್ನು ಕದ್ದು ಮಾರಾಟ ಮಾಡಿದ್ದಾರೆ.

ವಿಚಾರಣೆ ವೇಳೆ ಜಿಲ್ಲೆಯ ಹಲವಡೆ ನಡೆದ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್ ಸೇರಿ ಒಟ್ಟು 13 ಲಕ್ಷದ ಮೌಲ್ಯದ ಮಾಲುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿ ಸರಗಳ್ಳತನ ನಡೆಸಿ ಜನರಲ್ಲಿ ಆತಂಕ ಮೂಡಿಸಿದ್ದ ಸರಗಳ್ಳರನ್ನು ಕೆಎಂ ದೊಡ್ಡಿ ಪೊಲೀಸರು ಬಂಧಿಸಿರುವುದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸಿದೆ. ಕೆಎಂ ದೊಡ್ಡಿ ಪೊಲೀಸರ ಕಾರ್ಯಕ್ಕೆ ಮಂಡ್ಯ ಜಿಲ್ಲೆಯ ಎಸ್‍ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ ನಗದು ಬಹುಮಾನ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook Comments