ಕೋಲಾರದಲ್ಲಿ ಇಬ್ಬರು ಶಂಕಿತ ಉಗ್ರರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಜ.13-ರಾಜ್ಯದಲ್ಲಿ ಶಂಕಿತ ಉಗ್ರರ ಬೇಟೆಯನ್ನು ಮುಂದುವರೆಸಿರುವ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.  ಬಂಧಿತರನ್ನು ಕೋಲಾರದ ಪ್ರಶಾಂತನಗರದ ಮೊಹಮ್ಮದ್ ಜಹೀದ್(24), ಬೀಡಿಕಾಲೋನಿ ನಿವಾಸಿ ಇಮ್ರಾನ್(45) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ರಾಷ್ಟ್ರೀಯ ತನಿಖಾದಳ (ಎನ್‍ಐಎ) ದೆಹಲಿ ಮತ್ತು ತಮಿಳುನಾಡು ಪೊಲೀಸರು ಹಾಗೂ ರಾಜ್ಯದ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಈ ಮೊದಲು ಮೂವರನ್ನು ಬಂಧಿಸಿದ್ದರು. ಅದರ ಜೊತೆಯಲ್ಲಿ ನಿನ್ನೆ ಗುಂಡ್ಲುಪೇಟೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಈಗ ಕೋಲಾರದಲ್ಲೂ ಇಬ್ಬರು ಬಂಧನವಾಗಿರುವುದು ಬೆಳಕಿಗೆ ಬಂದಿದೆ.

ಬಂಧಿತರು ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದರು. ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ವಿದೇಶಕ್ಕೆ ಹಾರಲು ಸಿದ್ದರಾಗಿದ್ದರು ಎಂಬ ಮಾಹಿತಿ ಇದೆ. ಜ.3ರಂದೇ ಈ ಇಬ್ಬರನ್ನು ಬಂಧಿಸಲಾಗಿತ್ತು.

Facebook Comments