ಬಿಜೆಪಿ ಮುಖಂಡ ಸೇರಿ 5 ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಖತರ್ನಾಕ್‍ ಪಾತಕಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.26- ಬಿಜೆಪಿ ಮುಖಂಡ ರಾಜು ಹತ್ಯೆ ಸೇರಿದಂತೆ ಇನ್ನೂ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಯೊಬ್ಬನನ್ನು ನಗರದ ಸಿಸಿಬಿ ಹಾಗೂ ಕುವೆಂಪು ನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಲಷ್ಕರ್ ಮೊಹಲ್ಲಾ ನಿವಾಸಿ ಅತೀಕ್ ಅಹಮದ್ (39) ಬಂಧಿತ ಪ್ರಮುಖ ಆರೋಪಿ. 2016ರಲ್ಲಿ ಬಿಜೆಪಿ ಮುಖಂಡ, ಕ್ಯಾತಮಾರನಹಳ್ಳಿಯ ರಾಜು ಎಂಬುವವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದನು. ಇದಲ್ಲದೆ, ಈ ಆರೋಪಿ ನಾಲ್ಕು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಆರೋಪಿಯು ಕಳೆದ ಐದು ವರ್ಷಗಳಿಂದ ಪೆÇಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದನು. 2008ರ ಜೂನ್ 12ರಂದು ಕೇಶಾಲಂಕಾರ ಅಂಗಡಿ ಮಾಲೀಕ ಶಶಿಕುಮಾರ್ ಹತ್ಯೆ, 2009ರ ಜೂ.9ರಂದು ಫೈವ್‍ಲೈಟ್ ವೃತ್ತದ ಬಳಿ ಆನಂದ ಪೈ ಮತ್ತು ರಮೇಶ್ ಪೈ ಮೇಲೆ ಹಲ್ಲೆ ಪ್ರಕರಣದಲ್ಲಿ ರಮೇಶ್ ಪೈ ಸಾವನ್ನಪ್ಪಿದ್ದರು.

2009ರ ನವೆಂಬರ್ 12ರಂದು ಅಶೋಕಾ ರಸ್ತೆಯ ಬುಕ್‍ಸ್ಟೋರ್ ಮಾಲೀಕ ಸತೀಶ್ ಮತ್ತು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾಗ ಹರೀಶ್ ಮೃತಪಟ್ಟಿದ್ದರು.
2009ರಲ್ಲಿ ಬಿಜೆಪಿ ಮುಖಂಡ ಗಿರಿಧರ್ ಮೇಲೆ ಹಲ್ಲೆ ನಡೆಸಿದ್ದನು. 2010ರ ಮೇನಲ್ಲಿ ಹುಣಸೂರಿನ ತ್ಯಾಗರಾಜ ಪಿಳ್ಳೈ ಎಂಬುವವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದನು. ಇದಲ್ಲದೆ, ಮಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ನಡೆದ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿಯನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡು ನಿನ್ನೆ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯು ವೃತ್ತಿನಿರತ ಹಂತಕನಾಗಿದ್ದು, ನಗರದಲ್ಲಿ ತನ್ನದೇ ತಂಡ ಕಟ್ಟಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದನು.

ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ಮುತ್ತುರಾಜ, ಸಿಸಿಬಿಯ ಎಸಿಬಿ ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಕಿರಣ್‍ಕುಮಾರ್, ಕುವೆಂಪು ನಗರ ಠಾಣೆ ಇನ್ಸ್‍ಪೆಕ್ಟರ್ ರಾಜು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕೊನೆಗೂ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ