ಛಾಯಾಗ್ರಾಹಕ ಅರುಣ್‍ಕುಮಾರ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಅರುಣ್‍ಕುಮಾರ್ ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಬ್ರೈನ್ ಟ್ಯೂಮರ್‍ನಿಂದ ಬಳಲುತ್ತಿದ್ದ ಅರುಣ್‍ಕುಮಾರ್ (51) ಅವರು ಚಿತ್ರೀಕರಣದ ವೇಳೆಯೇ ಲೋ ಬಿಪಿ ಕಾಣಿಸಿಕೊಂಡಿದ್ದರಿಂದ ಅವರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಅರುಣ್‍ಕುಮಾರ್ ಅವರು ಕೊರೊನಾ ಸೋಂಕು ಕೂಡ ತಗುಲಿತ್ತು ಎಂದು ಹೇಳಲಾಗುತ್ತಿದೆ.ಬೀರೂರು ಮೂಲದ ಅವರು ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.  ಅರುಣ್‍ಕುಮಾರ್ ಅವರು ಕನ್ನಡ ಸೇರಿದಂತೆ ಹಿಂದಿ, ಮರಾಠಿ, ಗುಜರಾತಿ ಸೇರಿದಂತೆ ಸುಮಾರು 34ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರು. ಗುಜರಾತ್£ ಸಿನಿಮಾವೊಂದಕ್ಕೆ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅರುಣ್‍ಕುಮಾರ್ ಅವರು ಸದ್ಯ ಛಾಯಾ ಚಿತ್ರಕ್ಕೆ ಚಿತ್ರೀಕರಣ ಮಾಡುತ್ತಿದ್ದು ಈ ಚಿತ್ರವು ತೆರೆ ಕಾಣುವ ಮುನ್ನವೇ ಅವರು ಬಣ್ಣದ ಲೋಕದ ನಂಟಿನಿಂದ ದೂರವಾಗಿದ್ದಾರೆ.

Facebook Comments