ಲಸಿಕೆಗಾಗಿ ರಾಜ್ಯ ರಾಜ್ಯಗಳ ನಡುವಿನ ಸ್ಪರ್ಧೆಯಿಂದ ದೇಶಕ್ಕೆ ಕೆಟ್ಟ ಹೆಸರು : ಕೇಜ್ರಿವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.13-ಕೋವಿಡ್ ಲಸಿಕೆಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ರಾಜ್ಯದವರು ಮತ್ತೊಂದು ರಾಜ್ಯದೊಂದಿಗೆ ಸ್ಪರ್ಧೆಗಿಳಿಯುವುದರಿಂದ ಭಾರತಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲಸಿಕೆ ಅಭಾವ ಎದುರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವೇ ರಾಜ್ಯಗಳ ಪರವಾಗಿ ಲಸಿಕೆ ಖರೀದಿಸಿ ಸೂಕ್ತ ಹಂಚಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿಸಲು ಮಹಾರಾಷ್ಟ್ರದ ವಿರುದ್ಧ ಉತ್ತರಪ್ರದೇಶ, ಒರಿಸ್ಸಾ ವಿರುದ್ಧ ಮಹಾರಾಷ್ಟ್ರ, ಒರಿಸ್ಸಾ ವಿರುದ್ಧ ದೆಹಲಿ ಸ್ಪರ್ಧೆಗಿಳಿಯುವುದರಲ್ಲಿ ಅರ್ಥವೆಲ್ಲಿದೆ.

ಹೀಗಾದರೆ ಭಾರತ ಎಲ್ಲಿದೆ ಎನ್ನುವಂತಾಗುತ್ತದೆ ಮಾತ್ರವಲ್ಲ ದೇಶಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ಭಾರತೀಯರ ಪರವಾಗಿ ಆಯಾ ರಾಜ್ಯಗಳಿಗೆ ಅವಶ್ಯವಿರುವಷ್ಟು ಲಸಿಕೆ ಖರೀದಿಸಿ ಹಂಚಿಕೆ ಮಾಡಬೇಕು ಎಂದು ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.

Facebook Comments

Sri Raghav

Admin