ಗೃಹ ಆಧಾರ್ ಯೋಜನೆಯ ಮೊತ್ತ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.4- ದೆಹಲಿ ಸರ್ಕಾರ ಮಹಿಳೆಯರಿಗೆ ನೀಡುವ ಗೃಹ ಆಧಾರ್ ಯೋಜನೆಯ ಮಾಸಿಕ ವೇತನವನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ದೆಹಲಿಯ 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೂ ಅರವಿಂದ್ ಕೇಜ್ರಿವಾಲ್ ಸರ್ಕಾರ ಮಾಸಿಕ 1500 ರೂ.ಗಳ ಗೌರವ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು.

ಅದರಲ್ಲಿ ಒಂದು ಸಾವಿರ ರೂ.ಗಳನ್ನು ಹೆಚ್ಚಳ ಮಾಡಿದ್ದು , ಇನ್ನು ಮುಂದೆ ಮಾಸಿಕವಾಗಿ 2500 ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಗೃಹ ಆಧಾರ್ ಯೋಜನೆ ಜಗತ್ತಿನಲ್ಲಿಯೇ ಅತಿ ದೊಡ್ಡ ಮತ್ತು ಪರಿಣಾಮಕಾರಿ ಮಹಿಳಾ ಸಬಲೀಕರಣ ಯೋಜನೆ. ಮಹಿಳೆಯರಿಗೆ ಮಾಸಿಕವಾಗಿ ಖಚಿತ ಆದಾಯ ನಿಗದಿಯಾಗು ವುದರಿಂದ ಅವರ ಆರ್ಥಿಕ ಚಟುವಟಿಕೆಗಳು ಸುಧಾರಣೆಗೊಳ್ಳುತ್ತವೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷವನ್ನು ಅಕಾರಕ್ಕೆ ತಂದರೆ ಗೋವಾದಲ್ಲೂ ಜನಪರವಾದ ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

Facebook Comments