ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಲವರ್ಧನೆಗೆ ಅಗತ್ಯ ಕ್ರಮ : ಸಚಿವ ಅರವಿಂದ ಲಿಂಬಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಏಪ್ರಿಲ್ 20-ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಕ್ರಿಯಾಯೋಜನೆ ಕುರಿತಂತೆ ಇಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ 2021-22 ನೇ ಸಾಲಿನ ಕ್ರಿಯಾ ಯೋಜನೆ ಬಗ್ಗೆ ವಿವರವಾದ ಚರ್ಚೆ ನಡೆಯಿತು.

ಕನ್ನಡ ಭಾಷೆ ಮತ್ತು ಸಂಸ್ಕೃತಿ ಎರಡನ್ನೂ ಸಮತೋಲನದಿಂದ ಕಾಯ್ದುಕೊಳ್ಳುವ ಬಹುದೊಡ್ಡ ಜವಾಬ್ದಾರಿ ಇಲಾಖೆಯ ಮೇಲಿದೆ ಹಾಗಾಗಿ ಅಭಿವೃದ್ಧಿಗೆ ಸಂಬಂಧಪಟ್ಟ ಹಾಗೆ ಪ್ರತ್ಯೇಕ ವಿಭಾಗ ಮತ್ತು ಸಂಸ್ಕೃತಿ ಆಚರಣೆಗಳಿಗೆ ಸಂಬಂಧಪಟ್ಟಹಾಗೆ ಪ್ರತ್ಯೇಕ ವಿಭಾಗವನ್ನು ಸೃಜನೆ ಮಾಡಿ ಅದನ್ನು ಸಮತೋಲನದಿಂದ ಬೆಳೆಸಬೇಕಿದೆ ಸಚಿವರು ಸೂಚನೆ ನೀಡಿದರು.

ಪ್ರಸಕ್ತ ವರ್ಷದಲ್ಲಿ ಕೋವಿಡ್ ಕಾರಣದಿಂದ ಹಲವು ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗದ ಕಾರಣ ಹಣವನ್ನು ಇಲಾಖೆಯಲ್ಲಿ ಆಸ್ತಿ ಸೃಜನೆ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಸಚಿವರು ಸೂಚಿಸಿದರು. ಅಪೂರ್ಣ ರಂಗಮಂದಿರಗಳ ನಿರ್ಮಾಣ,

# ಹೊಸ ರಂಗಮಂದಿರಗಳ ಕಾಮಗಾರಿ ಆರಂಭ :  
ಕಲಾಗ್ರಾಮ ಅಭಿವೃದ್ಧಿ ಕಾಮಗಾರಿಗಳ ವೇಗವರ್ಧನೆ ಮುಂತಾದವುಗಳಿಗೆ ಒತ್ತು ನೀಡಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದರು.ಕಟ್ಟಡ ಇಲ್ಲದ ರಂಗಾಯಣ ಗಳಿಗೆ ರಂಗಮಂದಿರಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು

ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿರಿಜನ ಉಪಯೋಜನೆ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಅದಕ್ಕೆ ಕ್ರಮಕೈಗೊಳ್ಳಿ ಎಂದು ಸಚಿವರು ಸೂಚಿಸಿದರು. ವೃತ್ತಿ ನಾಟಕ ಕಂಪನಿಗಳಲ್ಲಿ ಪೌರಾಣಿಕ ನಾಟಕಗಳನ್ನು ಹೆಚ್ಚಾಗಿ ಪ್ರದರ್ಶಿಸಲು ಕಂಪನಿ ಮಾಲೀಕರುಗಳಿಗೆ ಸೂಚಿಸಬೇಕೆಂದು ತಿಳಿಸಿದರು.

ಇಲಾಖೆಯಿಂದ ಸ್ವಾತಂತ್ರದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಲುವಾಗಿ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಗುರುತಿಸಿ ಅವುಗಳನ್ನು ನಾಟಕಗಳನ್ನಾಗಿ ಬರೆಸಿ ಪ್ರದರ್ಶಿಸಲು ಸೂಚಿಸಿದರು.  ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ ಎಸ್ ರಂಗಪ್ಪ, ಸರ್ಕಾರದ ಉಪ ಕಾರ್ಯದರ್ಶಿ ಮಾಲತಿ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

Facebook Comments

Sri Raghav

Admin