ಸದನದಲ್ಲಿ ಕಣ್ಣೀರಿಟ್ಟ ಶಾಸಕ ಅರವಿಂದ ಲಿಂಬಾವಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22-ಶಾಸಕರಿಗೆ ಹಲವು ರೀತಿಯಲ್ಲಿ ಬ್ಲಾಕ್‍ಮೇಲ್ ಮಾಡಿ ಮಾನ ಹರಾಜು ಹಾಕುವ ಕುತಂತ್ರ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಕಣ್ಣೀರು ಹಾಕಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ಹಿರಿಯ ಸದಸ್ಯ ಎ.ಟಿ. ರಾಮಸ್ವಾಮಿ ಮಾತನಾಡುವಾಗ ಪ್ರಸ್ತಾಪವಾದ ಕೀಚಕನ ಪಾತ್ರ ಎಂಬ ಪದದ ಬಗ್ಗೆ ಸ್ಪೀಕರ್ ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಶಿವಲಿಂಗೇಗೌಢ ಇಂಥ ಘಟನೆಗಳು ಹೆಚ್ಚಾಗುತ್ತಿವೆ. ಶಾಸನ ಸಭೆ ಗೌರವ ಕುಗ್ಗುತ್ತಿದೆ ಎಂದರು.

ಈ ವೇಳೆ ಮದ್ಯಪ್ರವೇಶಿದಿದ ಅರವಿಂದ ಲಿಂಬಾವಳಿ ವಿಧಾನಸಭಾದ್ಯಕ್ಷ ಅವರನ್ನು ಉದ್ದೇಶಿಸಿ ನನ್ನ ಚಾರಿತ್ಯವಧೆಗೆ ಯತ್ನಗಳು ನಡೆದಿವೆ ಎಂದು ಕಣ್ಣೀರು ಹಾಕಿದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರನ್ನು ಲಿಂಬಾವಳಿ ಒತ್ತಾಯಿಸಿದರು.

# ಶಾಸಕರು ಆಸ್ಪತ್ರೆಯಿಂದ ಡಿಸ್‍ಚಾರ್ಜ್
ಬೆಂಗಳೂರು, ಜು.22-ತೀವ್ರ ಹೊಟ್ಟೆನೋವಿನಿಂದಾಗಿ ನಗರದ ಸೇಂಟ್ ಜಾನ್ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ಮೂಡಬಿದರೆ ಬಿಜೆಪಿ ಶಾಸಕ ಉಮಾನಾಥ್ ಕೊಟ್ಯಾನ್ ಗುಣಮುಖರಾಗಿ ಡಿಸ್‍ಚಾರ್ಜ್ ಆಗಿದ್ದಾರೆ.

ಕಲೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೊಟ್ಯಾನ್ ಇಂದು ನಿರ್ಣಾಯಕ ದಿನವಾಗಿದ್ದರಿಂದ ಸಂಜೆ 5.45ರಲಲಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಆಸ್ಪತ್ರೆಯಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡರು.

Facebook Comments

Sri Raghav

Admin