ಆರ್ಯನ್ ಡ್ರಗ್ ಡ್ರಗ್ ಪ್ರಕರಣದಲ್ಲಿ 18 ಕೋಟಿ ರೂ. ಡೀಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.24- ಮಾದಕವಸ್ತು ಹಗರಣದಲ್ಲಿ ಬಂತನಾಗಿರುವ ಬಾಲಿವುಡ್ ನಟ ಶಾರುಖ್‍ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಲ್ಲಿ 18 ಕೋಟಿ ರೂ.ಗಳ ಡೀಲ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆರ್ಯನ್ ಖಾನ್ ಪ್ರಕರಣದಲ್ಲಿ ದಿನೇ ದಿನೇ ಹೊಸ ತಿರುವುಗಳು ಎದುರಾಗುತ್ತಿವೆ. ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳ(ಎನ್‍ಸಿಬಿ) ಅಕಾರಿ ಸಮೀರ್ ವಾಖಡೆ ವಿರುದ್ದ ಮಹಾರಾಷ್ಟ್ರದ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದರು.

ಈಗ ಪ್ರಭಾಕರ್ ಸಾಲಿ ಎಂಬುವರು ಹೊಸ ಆರೋಪ ಮಾಡಿದ್ದು, ಖಾಸಗಿ ಪತ್ತೆದಾರ ಕೆ.ಪಿ.ಗೋಸಾವಿ ಮತ್ತು ಸ್ಯಾಮ್ ಡಿಸೋಜ ಎಂಬುವರ ನಡುವೆ 18 ಕೋಟಿ ರೂ.ಗಳ ಡೀಲ್ ನಡೆದಿದೆ. ಅದರಲ್ಲಿ 8 ಕೋಟಿ ರೂ.ಗಳನ್ನು ಸಮೀರ್ ವಾಖಡೆ ಅವರಿಗೆ ನೀಡಲು ಸ್ಯಾಮ್ ಡಿಸೋಜ ಅವರಿಗೆ ಕೊಡಲಾಗಿತ್ತು.

ಅಂತಿಮವಾಗಿ ಹಣ ಸಮೀರ್ ಅವರಿಗೆ ತಲುಪಿದೆ ಎಂದು ಹೇಳಿದ್ದಾರೆ.
ಆದರೆ ಈ ಆರೋಪವನ್ನು ಎನ್‍ಸಿಬಿ ತಳ್ಳಿ ಹಾಕಿದೆ. ಒಂದು ವೇಳೆ ಹಣ ಪಡೆದಿದ್ದೇ ಆಗಿದ್ದರೆ ಆರ್ಯನ್ ಖಾನ್ ಜೈಲಿನಲ್ಲಿ ಇರುತ್ತಿರಲಿಲ್ಲ. ಆಧಾರ ರಹಿತವಾದ ಆರೋಪಗಳನ್ನು ಮಾಡಿ ಎನ್‍ಸಿಬಿ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

Facebook Comments

Sri Raghav

Admin