ಬ್ರೇಕಿಂಗ್ : ಆರ್ಯನ್ ಖಾನ್ ಸೇರಿ ಮೂವರಿಗೆ ಜಾಮೀನು ಮಂಜೂರು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ ಅ. 28.ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರ್ಯನ್ ಅವರ ಸ್ನೇಹಿತರಾದ ಅರ್ಬಾನ್ ಮರ್ಚೆಂಟ್, ಮೂನ್ ಮೂನ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ಅಕ್ಟೋಬರ್ ಮೂರರಿಂದ ಜೈಲುವಾಸದಲ್ಲಿದ್ದ ಆರ್ಯನ್ ಗೆ ಕೊನೆಗೂ ಬಿಡುಗಡೆ ಭಾಗ್ಯ ಲಭಿಸಿದೆ.

ಜಾಮೀನು ಕುರಿತಂತೆ ಕೆಲವೊಂದು ನಿಬಂಧನೆಗಳನ್ನು ಪೂರೈಸಿದರೆ ನಾಳೆ ಬಿಡುಗಡೆಯಾಗಬಹುದು ಇಲ್ಲದಿದ್ದರೆ ಶನಿವಾರ ಈ ಮೂವರು ಕೂಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ನಡೆದ ಸುಧೀರ್ಘ ವಿಚಾರಣೆ ವೇಳೆ ಆರ್ಯನ್ ಹಾಗೂ ಇತರ ಮೂರರ ಪರ ವಕೀಲರು ಸೂಕ್ಷ್ಮ ವಾಗಿ ವಾದ ಮಂಡಿಸಿದರೆ ಎನ್ ಸಿಬಿ ಪರ ವಕೀಲರು ಜಾಮೀನಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು .ಕೊನೆಗೆ ನ್ಯಾಯಮೂರ್ತಿಗಳು ಸುದೀರ್ಘ ವಾದ ವಿವಾದಗಳನ್ನು ಆಲಿಸಿ ಜಾಮೀನು ಮಂಜೂರು ಮಾಡಿದ್ದಾರೆ.

ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಮಾಡೆಲ್ ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು ಇದರ ವಿರುದ್ದ ಆರೋಪಿಗಳ ಪರ ವಕೀಲರು ಮುಂಬೈನ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 26ರಂದು ನಡೆಸುವುದಾಗಿ ಬಾಂಬೆ ಹೈಕೋರ್ಟ್ ನ್ಯಾಯಾಮೂರ್ತಿ ಎನ್. ಡಬ್ಲ್ಯು.ಸಾಂಬ್ರೆ ಅವರ ಏಕ ಸದಸ್ಯ ತಿಳಿಸಿತು. ಮೂರು ದಿನಗಳ ಕಾಲ ನಡೆದ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಇಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

Facebook Comments

Sri Raghav

Admin