ಮುದ್ದೇಬಿಹಾಳ ಕ್ಷೇತ್ರಕ್ಕೆ ಸಿಕ್ಕ ಮಾಣಿಕ್ಯ ನಡಹಳ್ಳಿ..!

ಈ ಸುದ್ದಿಯನ್ನು ಶೇರ್ ಮಾಡಿ

#ಬಸವರಾಜ ಈ ಕುಂಬಾರ
ವಿಜಯ ನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಮುತ್ತು ರತ್ನಗಳಿಂದ ಘತವೈಭವ ಮೆರೆದ ಮುದ್ದೇಬಿಹಾಳ ಕ್ಷೇತ್ರದ ಪ್ರತಿ ಕುರುಹುಗಳು ಐತಿಹಾಸಿಕ ಪುಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದೆ. ಆದರೆ ವಿಜಯ ನಗರ ಸಾಮ್ರಾಜ್ಯಕ್ಕೆ ತಕ್ಕಂತೆ ಇಲ್ಲಿ ಅನೇಕ ರಾಜಕೀಯ ಮುತ್ಸದ್ದಿಗಳ ಆಳ್ವಿಕೆಯ ನಡುವೆಯೂ ಅಷ್ಟೊಂದು ಯಾವುದೇ ಅಭಿವೃದ್ದಿ ಕಾರ್ಯಗಳು ಕಂಡಿಲ್ಲ. ಆದರೆ , ಈಗ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಶಾಸಕರಾದ ಮೇಲೆ ಅವರ ವಿಶೇಷ ಕಾಳಿಜಿಯಿಂದ ನೂರಾರು ಕೋಟಿ ರೂ.ವೆಚ್ಚಗಳಲ್ಲಿ ಅಭಿವೃದ್ದಿ
ಕನಸು ನನಸಾಗತೊಡಗಿದೆ ಎಂದರೆ ತಪ್ಪಾಗಲಾರದು.

ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಅಭಿವೃದ್ದಿ ಕಾರ್ಯಗಳು ಜನಮಾನಸಕ್ಕೆ ತೋರಿಸುತ್ತಿವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹಾಗೂ ಸೌಂದರ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳು ಅಭಿವೃದ್ದಿಯಿಂದ ಝಗಮಗಿಸುವಂತಾಗಿವೆ.

ಉತ್ತಮ ಡಾಂಬರೀಕರಣ, ಸಿ.ಸಿ.ಚರಂಡಿ, ಫುಟ್ಟಪಾತ್ ಅಲ್ಲದೇ ವಿದ್ಯುತ್ ದೀಪಗಳ ಅಲಂಕಾರಕ್ಕಾಗಿ ವಿಶೇಷ ಅನುದಾನದಡಿ ಸರ್ಕಾರದಿಂದ ಕೋಟಿ ಕೋಟಿ ಅನುದಾನವನ್ನು ತಂದ ಸರದಾರ ಎಂಬ ಹೆಗ್ಗಳಿಕೆ ನಡಹಳ್ಳಿ ಅವರಿಗೆ ಸಲ್ಲಬೇಕು, ತಾಳಿಕೋಟೆಯ ಜಾನಕಿಹಳ್ಳದಿಂದ ವಿಜಯಪುರ ವೃತ್ತದವರೆಗೆ 4 ಕೋಟಿ ರೂ. ಮಂಜೂರುಮಾಡಿಸಿದ್ದಾರೆ. ವಿಜಯಪುರ ವೃತ್ತದಿಂದ ಬಸ್ ನಿಲ್ದಾಣದವರೆಗೆ 2ಕೋಟಿ ರೂ. ಹಾಗೂ ಶಿವಾಜಿ ವೃತ್ತದಿಂದ ಬಸ್ ನಿಲ್ದಾಣದ ವರೆಗೆ ಎಡಬಲದಲ್ಲಿ ಎರಡು ಸಿಸಿ ಚರಂಡಿ, ಸಿಸಿ ರಸ್ತೆ, ಫುಟ್‍ಪಾತ್, ವಿದ್ಯುತ್ ದೀಪಗಳ ಅಲಂಕಾರಕ್ಕಾಗಿ ವಿಶೇಷ ಅನುದಾನದಡಿ 1.66 ಕೋಟಿ ರೂ.ಯಲ್ಲಿ ಎಲ್ಲ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ಬಂದಿದ್ದು ಹೈಟೆಕ್ ಸಿಟಿಯಾಗಿ ಮಿಂಚಲು ಸಿದ್ದಗೊಂಡಿದೆ.

ಪಟ್ಟಣದ ಸಮಗ್ರ ಅಭಿವೃದ್ದಿಯ ದೃಷ್ಟಿಕೋನ ಇಟ್ಟುಕೊಂಡು ಪುರಸಭೆಯ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ 2.25 ಕೋಟಿ ರೂ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಉತ್ತಮ ರೀತಿಯ ರಸ್ತೆಗಳು ನಿರ್ಮಾಣಗೊಂಡಿವೆ.

ನಗರದ ಎಲ್ಲ ವಾರ್ಡುಗಳಲ್ಲಿ ಸಿಸಿ ರಸ್ತೆ, ಚರಂಡಿ ಅಲ್ಲದೇ ವಿವಿಧ ಅಭಿವೃದ್ದಿ ಕಾರ್ಯಗಳಿಗಾಗಿ ಸರ್ಕಾರದ ಲೋಕೋಪಯೋಗಿ ಇಲಾಖೆಯಡಿಯಲ್ಲಿ 1 ಕೋಟಿ ರೂ., ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ 2 ಕೋಟಿ ರೂ., ಎಸ್.ಟಿ.ಪಿ.ಟಿಎಸ್ಪಿ ಯೋಜನೆಯಡಿ 1 ಕೋಟಿ ರೂ., ಪ್ರಕೃತಿ ವಿಕೋಪದಡಿ 5 ಕೋಟಿ ರೂ., ಸರ್ಕಾರದ ಅನುದಾನವು ಕೂಡಾ ಬಿಡುಗಡೆಗೊಂಡು ಟೆಂಡರ್ ಹಂತದಲ್ಲಿವೆ.

ಇನ್ನೂ ಹಿಂದಿನ ಸರ್ಕಾರದ ಅವಧಿಯಲ್ಲಿ ತಾಳಿಕೋಟೆ- ಹಡಗಿನಾಳ ಸಂಪರ್ಕ ಕಲ್ಪಿಸುವ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇದಕ್ಕೆ ತಗಲುವ 20 ಕೋಟಿ ರೂ.ಗಳನ್ನು ಶಾಸಕ ನಡಹಳ್ಳಿ ಅವರು ಸರ್ಕಾರದಿಂದ ಹಣ ಬಿಡುಗಡೆಗೊಳಿಸಿದ್ದು ಸೇತುವೆಯ ಕಾರ್ಯ ಮುಕ್ತಾಯ ಹಂತದಲ್ಲಿದೆ.
ಮತಕ್ಷೇತ್ರದ 3 ಪಟ್ಟಣಗಳಲ್ಲಿಯ ಸ್ಲಂ ಬಡಾವಣೆಗಳ ಅಭಿವೃದ್ದಿಗಾಗಿ ಹಾಗೂ ಅಲ್ಲಿರುವ ಬಡವರ ಮನೆಗಳ ಸಂಪೂರ್ಣ ಅಭಿವೃದ್ದಿಗಾಗಿ ಸರ್ಕಾರದ ಸ್ಲಂ ಬೋರ್ಡ್‍ಯೋಜನೆಯಡಿ 50 ಕೋಟಿ ರೂ. ಬಿಡುಗಡೆಗೊಂಡಿದೆ.

ತಾಳಿಕೋಟಿ ಪಟ್ಟಣದ ಬಡವರಿಗೆ ಸೂರು(ಆಶ್ರಯ) ಒದಗಿಸುವ ಸಲುವಾಗಿ ಜಿ ಪ್ಲಸ್ 1 ಮಾದರಿಯ 600 ಮನೆಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಸರ್ಕಾರದಿಂದ ಅನುಮೋದನೆ ಕೊಡಿಸುವದರೊಂದಿಗೆ 34 ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ. ಇನ್ನೂ ರಾಜೀವಗಾಂಧಿ ವಸತಿ ನಿಗಮ ಹಾಗೂ ಪ್ರಧಾನಮಂತ್ರಿ ಅವಾಸ್‍ಯೋಜನೆಯಡಿ 600 ಮನೆಗಳ ಬಿಡುಗಡೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಸರ್ಕಾರದಿಂದ ಸ್ಲಂ ಬೋರ್ಡ್‍ನಿಂದ 474 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ.

ಕ್ಷೇತ್ರದ 3 ಪಟ್ಟಣಗಳಲ್ಲಿ ಎಲ್ಲ ಜನರಿಗೆ 24ಸ7 ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಮೊದಲನೇ ಹಂತದಲ್ಲಿ ಸರ್ಕಾರದಿಂದ 20 ಕೋಟಿ ರೂ. ಬಿಡಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಮಂಜೂರಾತಿ ಹಂತದಲ್ಲಿ ಈ ಕಾರ್ಯ ಯಶಸ್ವಿಯಾದರೆ 3 ಪಟ್ಟಣದ ಜನರಿಗೆ ಕುಡಿಯುವ ನೀರಿನ ತಾಪತ್ರಯ ತಪ್ಪಲಿದೆ. ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯು ಬರದಿಂದ ಸಾಗಿದ್ದು ಇನ್ನೂ ತಾಳಿಕೋಟಿ ಪಟ್ಟಣವು ನೂತನ ತಾಲೂಕಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿದ್ದರಿಂದ ತಾಲೂಕಾ ಆಸ್ಪತ್ರೆ ನಿರ್ಮಾಣಕ್ಕೆ 15 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪಟ್ಟಣದಲ್ಲಿಯ ಸರ್ಕಾರಿ ಪಿಯು ಕಾಲೇಜು ಹೆಚ್ಚುವರಿ 6 ಕೋಣೆಗಳ ನಿರ್ಮಾಣಕ್ಕೆ ನಬಾರ್ಡ್-24 ಯೋಜನೆಯಡಿ 1 ಕೋಟಿ ರೂ. ಬಿಡಗಡೆಗೊಂಡು ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಬಸ್ ಘಟಕದಲ್ಲಿ ಕಾರ್ಮಿಕರ ವಸತಿ ಗೃಹಗಳ ನಿರ್ಮಾಣಕ್ಕಾಗಿ 2.50 ಕೋಟಿ ರೂ. ಮಂಜೂರಾಗಿ ಗೃಹಗಳ ನಿರ್ಮಾಣದ ಕಾರ್ಯ ಬರದಿಂದ ಸಾಗಿದೆ.

ಪರಿಶಿಷ್ಟ ಜÁತಿ ಯುವಕರ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಹಿತದೃಷ್ಟಿಯಿಂದ ಸರ್ಕಾರದ ಸಮಾಜ ಕಲ್ಯಾಣ ಯೋಜನೆಯಡಿ ಬಾಲಕರ ಕಾಲೇಜು ಹಾಸ್ಟೆಲ್ ನಿರ್ಮಾಣಕ್ಕೆ 8.50 ಕೋಟಿ ರೂ. ಮಂಜೂರಾಗಿದೆ. ಅಲ್ಲದೇ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣಕ್ಕೆ 25 ಕೋಟಿ ರೂ. ಮಂಜೂರಾತಿ ದೊರಕಿದ್ದು ಇಂದಿರಾ ಗಾಂಧಿ ಶಾಲಾ ಕಟ್ಟಡ ನಿರ್ಮಾಣಕಾರ್ಯ ನಡೆದಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿವೆ.

ಅಭಿವೃದ್ದಿಯಿಂದ ಹಿಂದುಳಿದಿದ್ದ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಅಭಿವೃದ್ಧಿಯ ನವ ಚೇತನವನ್ನು ತುಂಬುವದರೊಂದಿಗೆ ನೂರಾರು ಕೋಟಿ ರೂ. ಸರ್ಕಾರದಿಂದ ಬಿಡುಗಡೆಗೊಳಿಸಿ ಕ್ಷೇತ್ರದ ಜನರು ಇಟ್ಟ ಭರವಸೆಯ ಕನಸನ್ನು ನನಸು ಮಾಡಲು ಹೊರಟಿರುವ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಕಾರ್ಯಕ್ಕೆ ಕ್ಷೇತ್ರದ ಜನರು ಹರ್ಷಗೊಂಡಿದ್ದಾರೆ.
ಮತಕ್ಷೇತ್ರದ ನಡಹಳ್ಳಿ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ನಾನು ಬಾಲ್ಯದಿಂದಲೂ ಅಭಿವೃದ್ಧಿಯ ಕನಸನ್ನು ಇಟ್ಟುಕೊಂಡಿದ್ದಾ ನನ್ನ ಮೇಲೆ ಕ್ಷೇತ್ರದ ಜನರು ಅಪಾರ ವಿಶ್ವಾಸವನ್ನು ಇಟ್ಟು ಆಯ್ಕೆಗೊಳಿಸಿದ್ದಾರೆ.

ಅಭಿವೃದ್ದಿಯ ಕನಸನ್ನು ನನಸು ಮಾಡಲು ಸುಮಾರು 2 ಸಾವಿರ ಕೋಟಿ ರೂ. ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ ನನ್ನ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರದ ಎರಡು ವರ್ಷದ ಅವಧಿಯಲ್ಲಿ 700 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಎ.ಎಸ್.ಪಾಟೀಲ(ನಡಹಳ್ಳಿ) ಶಾಸಕರು, ಅಧ್ಯಕ್ಷರು ಕ.ಆ.ನಾ.ಪೂರೈಕೆ ನಿಗಮ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯ ಅವಶ್ಯ ವಿರುವ ಎಲ್ಲ ಉದ್ಯಾನವನಗಳ ಅಭಿವೃದ್ದಿಗೆ ಮುದ್ದೇಬಿಹಾಳಕ್ಕೆ 5 ಕೋಟಿ, ತಾಳಿಕೋಟೆಗೆ 5 ಕೋಟಿ, ನಾಲತವಾಡಕ್ಕೆ 3 ಕೋಟಿ ರೂ. ಹೀಗೆ ಹಂತ ಹಂತದಲ್ಲಿ ಉದ್ಯಾನವನಗಳ ಅಭಿವೃದ್ದಿಗೊಳಿಸುವದರೊಂದಿಗೆ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ.

ಇಡೀ ಜಿ¯್ಲÉಯಲ್ಲಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿರುವ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಕೇವಲ 2 ವರ್ಷಗಳ ಅವಧಿಯಲ್ಲಿಯೇ ನೂರಾರು ಕೋಟಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿಗೆ ಕೆಲಸಗಳ ಮೂಲಕ ಸಾಕ್ಷೀಕರಿಸಿz್ದÁರೆ. ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ. ಸದ್ಯ 5 ಲಕ್ಷ ನೋಟ್‍ಬುಕ್‍ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಮುಂದಾಗಿರುವ ನಡಹಳ್ಳಿ ಅವರ ಕಾರ್ಯ ಶ್ಲಾಘನೀಯವಾಗಿದೆ. ನಡಹಳ್ಳಿ ಅವರಿಂದ ಬಡ ಮತ್ತು ಮಧಮ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿದೆ.

ರೈತರ ನಾಡಿಮಿಡಿತ ಅರಿತ ನಾಯಕ:
ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಮೊದಲು ಅನುಮೋದನೆ ಕೊಡಿಸಿ ಅಡಿಪಾಯ ಹಾಕಿದವರು ಸದ್ಯ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯ ರೈತರ ಜಮೀನುಗಳಿಗೆ ನೀರು ಹರಿಸಬೇಕು ಸಮೃದ್ದವಾದ ಬೆಳೆಗಳು ಈ ಭಾಗದಲ್ಲಿ ರೈತರು ಬೆಳೆಯಬೇಕೆಂಬ ಕನಸನ್ನುಕಟ್ಟಿಕೊಂಡಿದ್ದ ನಡಹಳ್ಳಿ ಅವರ 136 ಕೋಟಿ ರೂ.ಗಳನ್ನು ಕಾಲುವೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಹಣವನ್ನು ಬಿಡಗಡೆಗೊಳಿಸಿದ್ದಾರೆ.

ಶೇ.85 ರಷ್ಟು ಗ್ರಾಮಗಳಲ್ಲಿ ರಸ್ತೆ ಸುಧಾರಣೆ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯ ಶೇ.85 ರಷ್ಟು ಗ್ರಾಮಗಳಲ್ಲಿ ಸಿಸಿರಸ್ತೆಗಳು, ಚರಂಡಿಗಳನ್ನು ನಿರ್ಮಿಸಿ ಗ್ರಾಮಗಳಲ್ಲಿಯ ಕೊಳಚೆ ಪ್ರದೇಶಗಳಿಗೆ ಮುಕ್ತಿಕೊಡಿಸಿದ್ದಾರೆ.

Facebook Comments