ಕೊರೊನಾಗೆ ನಟಿ ಆಶಾಲತಾ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.22- ಕೊರೊನಾದಿಂದ ಬಳಲುತ್ತಿದ್ದ ಹಿರಿಯ ನಟಿ ಆಶಾಲತಾ ಅವರು ಇಂದು ಬೆಳಗ್ಗೆ 4.45ಕ್ಕೆ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದು ಮಹಾರಾಷ್ಟ್ರದ ಸತಾರಾದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ಆಶಾಲತಾ ವಾಬ್‍ಗಾಂವ್ಕರ್ (79) ಅವರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ರಂಗಭೂಮಿ ಕಲಾವಿದೆಯಾಗಿರುವ ಆಶಾಲತಾ ಮರಾಠಿ, ಕೊಂಕಣಿ ಭಾಷೆಗಳ ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದರಲ್ಲದೆ, ಮರಾಠಿ, ಕೊಂಕಣಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಇತ್ತೀಚೆಗೆ ಆಯ್ ಮಜಿ ಕಲುಬಾಯಿ ಎಂಬ ಸೀರಿಯಲ್‍ನಲ್ಲಿ ಪಾಲ್ಗೊಂಡಿದ್ದಾಗ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು.

ಆಶಾಲತಾ ಆಯ್ ಮಜಿ ಕಲುಬಾಯಿ ಸೀರಿಯಲ್‍ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ 20ಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು ಅವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ ಆದರೆ ಆಶಾಲತಾರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಆಶಾಲತಾ ಅವರ ಅಂತ್ಯಸಂಸ್ಕಾರ ಮಹಾರಾಷ್ಟ್ರದ ಸತಾರದಲ್ಲಿ ನೆರವೇರಿದ್ದು, ಮರಾಠಿ, ಕೊಂಕಣಿ, ಬಾಲಿವುಡ್‍ನ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ. ಆಶಾಲತಾ ಪೊಲೀಸ್ ಫೋರ್ಸ್, ಬೇಟಿ ನಂ.1, ಪ್ರೇಮ್ ದಿವಾನೆ, ಕೂಲಿ, ಮಂಗಳ್‍ಪಾಂಡೆ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Facebook Comments