ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿ ನಿಶ್ಚಿತ : ಸಚಿವ ಆರ್.ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18- ಹತ್ತು ದಿನಗಳಲ್ಲಿ ಸುಗ್ರೀವಾಜ್ಞಾ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಎಫ್‍ಕೆಸಿಸಿಐನಲ್ಲಿ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹತ್ತು ದಿನಗಳ ನಂತರ ಕಾಯ್ದೆ ಕೈಗಾರಿಕೋದ್ಯಮಿಗಳ ಬಳಕೆಗೆ ಸಿದ್ಧವಾಗಲಿದೆ ಎಂದರು.

ಶೇ.80ರಷ್ಟು ಜನ ಕಾಯ್ದೆಯನ್ನು ಸ್ವಾಗತಿಸುತ್ತಿದ್ದಾರೆ. ಶೇ.20 ರಷ್ಟು ಮಂದಿ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ, ಮನಸ್ಸಿನಲ್ಲಿ ಅವರಿಗೂ ಕಾಯ್ದೆ ತಿದ್ದುಪಡಿ ಬಗ್ಗೆ ಖುಷಿ ಇದೆ ಎಂದು ಹೇಳಿದರು. ಭೂ ಪರಿವರ್ತನೆಯ ನಿಯಮಗಳನ್ನು ಸರಳೀ ಕರಣ ಮಾಡಲು ಚಿಂತನೆ ನಡೆದಿದೆ. ಈಗಾಗಲೇ ಐದಾರು ಸಭೆಗಳನ್ನು ನಡೆಸಲಾಗಿದೆ ಎಂದರು.

ಈ ಕಾಯ್ದೆಯನ್ನು ಬದಲಾವಣೆ ಮಾಡಲು 20 ವರ್ಷಗಳ ಹಿಂದಿನಿಂದ ಬೇಡಿಕೆ ಸಲ್ಲಿಕೆಯಾಗಿದೆ. ಈಗ ನಮ್ಮ ಅವಧಿಯಲ್ಲಿ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ ಬಿ ಸಿ ತೆಗೆದು ಹಾಕಿದ್ದೇವೆ. ಮೊದಲು 1974ರಲ್ಲಿ ಕಾಯ್ದೆ ರೂಪಿಸಲಾಗಿತ್ತು. ಆ ಕಾಲಕ್ಕೆ ಕಾಯ್ದೆ ಸರಿ ಇತ್ತು. ಈಗ ಎತ್ತಿನ ಗಾಡಿಯಿಂದ ಉಪಗ್ರಹವರೆಗೆ ಬದಲಾವಣೆಯಾಗಿದೆ.

ಕಾಲಕ್ಕೆ ತಕ್ಕಂತೆ ಕಾಯ್ದೆಗಳು ಬದಲಾಗಬೇಕು. ಇನ್ನು ಸ್ವಲ್ಪ ದಿನ ಕಳೆದರೆ ಜನ ಚಂದ್ರ ಲೋಕಕ್ಕೆ ಪ್ರವಾಸ ಹೋಗಿ ಬರುವಂತಹ ಅವಕಾಶಗಳು ಬರಬಹುದು. ಅಂತಹ ಕಾಲದಲ್ಲೂ ಅನಗತ್ಯ ಕಾಯ್ದೆಗಳನ್ನು ಉಳಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.

ಭೂ ಸುಧಾರಣಾ ಕಾಯ್ದೆ ಜಾರಿಯಾದ 1974 ರಿಂದ ಈವರೆಗೂ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 83 ಸಾವಿರ ಪ್ರಕರಣಗಳು ದಾಖಲಾಗಿವೆ. 1.76 ಲಕ್ಷ ಎಕರೆ ವಾಪಾಸ್ ಪಡೆಯಬೇಕಿದೆ. ಆದರೆ, ಒಂದು ಎಕರೆಯನ್ನು ವಾಪಸ್ ಪಡೆದಿಲ್ಲ. ಅಧಿಕಾರಿಗಳು ಲಂಚ ಪಡೆಯಲು, ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಕಾಯ್ದೆ ದುರ್ಬಳಕೆಯಾಗುತ್ತಿತ್ತು. ಅದಕ್ಕಾಗಿ ಬದಲಾವಣೆ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ 22.07 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದೆ. ಕಾಯ್ದೆ ತಿದ್ದುಪಡಿಯಿಂದ ಉಳ್ಳವರಿಗಲ್ಲ, ಉಳುವವರಿಗೆ ಭೂಮಿ ಕೊಡುವ ಉದ್ದೇಶ ಇದೆ. ಕೃಷಿ ವಿವಿ ಪದವೀಧರರಿಗೆ ಶೇ.5ರಷ್ಟು ಮಾತ್ರ ಉದ್ಯೋಗ ಸಿಗುತ್ತಿದೆ. ಉಳಿದವರಿಗೆ ಕೃಷಿ ಮಾಡಲು ಭೂಮಿ ಸಿಗುತ್ತಿಲ್ಲ.

ಶೇ.20ರಷ್ಟು ಕೈಗಾರಿಕೆಗಳಿಗೆ ಮಾತ್ರ ಸ್ವಂತ ನಿವೇಶನ ಇದೆ. ಉಳಿದವರು ಬಾಡಿಗೆ ಭೂಮಿಯಲ್ಲಿz್ದÁರೆ. ಅವರಿಗೆ ಸ್ವಂತ ಭೂಮಿ ನೀಡಬೇಕಿದೆ. ಯಾವ ಬೆಳೆ ಹೆಚ್ಚಾಗಿರುತ್ತದೋ ಆದೇ ಭಾಗದಲ್ಲಿ ಕೃಷಿ ಕೈಗಾರಿಕೆಗಳು ಹೆಚ್ಚಾಗಬೇಕು. ಕೃಷಿ ಮತ್ತು ಕೈಗಾರಿಕೆ ಒಟ್ಟಾಗಿ ಹೋದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಭೂಮಿ ಪಡೆಯಲು ಮತ್ತು ಭೂಮಿ ಪರಿವರ್ತನೆ ಮಾಡುವ ವೇಳೆಗೆ ಕೈಗಾರಿಕೆ ಮಾಡುವ ಆಸಕ್ತಿಯೇ ಹೋಗಿ ಬಿಡುತ್ತದೆ. ಆ ವಿಳಂಬ ತಪ್ಪಿಸಲು ತಿದ್ದುಪಡಿ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ ವಿವಿಧ ಅನುಮತಿಗಳನ್ನು ಸರಳೀರಣ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದರು.

ಈಗ ಹಳ್ಳಿ ಕಡೆ ಹೋಗಿ ಸುಲಭವಾಗಿ ಕೈಗಾರಿಕೆ ಸ್ಥಾಪಿಸಬಹುದು. ಮುಂದೆ ಹಳ್ಳಿಗಳು ಉದ್ಧಾರವಾಗಲಿವೆ. ಸಣ್ಣ ರೈತರು ದುಡ್ಡಿನ ಆಸೆ ಬಿದ್ದು ಯಾರು ಭೂಮಿ ಮಾರಾಟ ಮಾಡುವುದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿ ಈ ಕಾಯ್ದೆ ಇರಲಿಲ್ಲ. ಅಲ್ಲಿ ಏನು ಪ್ರಳಯ ಆಗಿದೆಯಾ ಎಂದು ಪ್ರಶ್ನಿಸಿದರು.

ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಕೈಗಾರಿಕೆ ಉಪಸಮಿತಿ ಅಧ್ಯಕ್ಷ ಸತೀಶ್ , ಎಫ್‍ಕೆಸಿಸಿಐ ಪದಾಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು, ಜಿ¯್ಲÁಧ್ಯಕ್ಷರು ಆನ್‍ಲೈನ್‍ನಲ್ಲಿ ಹಾಜರಿದ್ದು ಸಂವಾದದಲ್ಲಿ ಪ್ರಶ್ನೆ ಕೇಳಿದರು.

Facebook Comments