ಚಿಕ್ಕಬಳ್ಳಾಪುರ- ಹುಬ್ಬಳ್ಳಿಯಲ್ಲಿ ಬ್ಯಾಟರಿ ಕಾರ್ಖಾನೆ ಆರಂಭ : ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.30- ವಿದ್ಯುತ್ ಚಾಲಿತ ವಾಹನಗಳಿಗೆ ಬಳಸುವ ಬ್ಯಾಟರಿಗಳ ತಯಾರಿಸುವ ಕಾರ್ಖಾನೆಗಳು ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು. ವಿಧಾನಸೌಧ ಮುಂಭಾಗ ರೋಟರಿಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಗೋ ಗ್ರೀನ್ ವಿದ್ಯುತ್ ಚಾಲಿತ ಕಾರು ಮತ್ತು ಸ್ಕೂಟರ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಸ್ನೇಹಿಯಾಗಿರುವ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಹೆಚ್ಚು ಬಳಸುವಂತಾಗಬೇಕು. ಇದರಿಂದ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗತ್ತದೆ. ಇದಕ್ಕೊಂದು ನೀತಿ ತರಲಾಗುವುದು ಎಂದರು. ಮುಂದಿನ 10 ವರ್ಷಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಲಿವೆ.

ಈಗಾಗಲೇ ಬೆಸ್ಕಾಂ 150 ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ ಮತ್ತು ಎನ್‍ಟಿಪಿಎಸ್ ಜೊತೆಗೂಡಿ 150 ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಿದ್ದು, ವಿದ್ಯುತ್ ಚಾಲಿತ ವಾಹನಗಳಲ್ಲಿ ಹೆಚ್ಚು ಸುಧಾರಣೆ ಹಾಗೂ ಆವಿಷ್ಕಾರಗಳಾಗುತ್ತಿದ್ದು, ಮನೆಯಲ್ಲಿಯೇ ಚಾರ್ಜಿಂಗ್ ಮಾಡಬಹುದು ಎಂದು ಹೇಳಿದರು.

ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. 2018ರಲ್ಲೇ ರಾಜ್ಯ ಸರ್ಕಾರ ವಿದ್ಯುತ್ ವಾಹನ ಮತ್ತು ಶೇಖರಣಾ ನೀತಿಯನ್ನು ತಂದು ಮುಂಚೂಣಿಯಲ್ಲಿದೆ. ಬೆಂಗಳೂರು ಆವಿಷ್ಕಾರದ ನಗರ. ಮುಂದಿನ ದಿನಗಳಲ್ಲಿ ಬ್ಯಾಟರಿಯೂ ಬಾಡಿಗೆಗೆ ಸಿಗಬಹುದು ಎಂದು ತಿಳಿಸಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‍ಗೌಡ, ತಾಂತ್ರಿಕ ನಿರ್ದೇಶಕ ಶ್ರೀರಾಮೇಗೌಡ, ಉಪಪ್ರಧಾನ ವ್ಯವಸ್ಥಾಪಕ ವಿ.ಕೆ.ಶ್ರೀನಾಥ್, ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

Facebook Comments