ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಸಂತಸ ತಂದಿದೆ : ಅಶ್ವಿನ್

ಈ ಸುದ್ದಿಯನ್ನು ಶೇರ್ ಮಾಡಿ

xನವದೆಹಲಿ, ಸೆ.9- ಯುಎಇ ಯಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‍ನಲ್ಲಿ ಆಡುವ ಅವಕಾಶ ಲಭಿಸಿರುವುದು ಸಂತಸ ತಂದಿದೆ ಎಂದು ಭಾರತ ತಂಡದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 2017ರಲ್ಲಿ ನಡೆದ ವೆಸ್ಟ್‍ಇಂಡೀಸ್ ಸರಣಿಯ ನಂತರ ನಾನು ಯಾವುದೇ ಏಕದಿನ ಹಾಗೂ ಟ್ವೆಂಟಿ-20 ಮಾದರಿಯ ಪಂದ್ಯಗಳಲ್ಲಿ ನಾನು ಹೆಚ್ಚಾಗಿ ಗುರುತಿಸಿಕೊಳ್ಳದಿದ್ದರೂ ಬಿಸಿಸಿಐ ನನ್ನ ಮೇಲೆ ನಂಬಿಕೆ ಇಟ್ಟು ಸ್ಥಾನ ಕಲ್ಪಿಸಿದೆ.

ನಾನು ಇತ್ತೀಚೆಗೆ ಟೆಸ್ಟ್ ಸರಣಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದೇನೆ, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ 4 ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಗುರುತಿಸಿಕೊಳ್ಳಲು ನಾನು ಅವಕಾಶ ಸಿಗದಿದ್ದರೂ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶ ದೊರೆಯಬಹುದು ಎಂದು ತಮ್ಮ ಆತ್ಮವಿಶ್ವಾಸದ ಮಾತುಗಳನ್ನು ಅಶ್ವಿನ್ ಆಡಿದರು. ಚುಟುಕು ವಿಶ್ವಕಪ್‍ನಲ್ಲಿ ಭಾರತಕ್ಕೆ ಕಪ್ ಗೆದ್ದುಕೊಡುವುದೇ ನನ್ನ ಮುಂದಿನ ಗುರಿ ಎಂದು ಅವರು ಹೇಳಿದರು.

Facebook Comments