ಏಷ್ಯನ್ ಚಾಂಪಿಯನ್‍ಶಿಫ್ ಸೇಮಿಸ್‍ಗೆ ನಾಲ್ವರು ಭಾರತೀಯ ಬಾಕ್ಸರ್ ಗಳು

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಮೇ.26-ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ನಾಲ್ವರು ಭಾರತೀಯ ಬಾಕ್ಸರ್‍ಗಳು ಪದಕ ಗೆಲ್ಲುವುದು ನಿಶ್ಚಿತವಾಗಿದೆ. ಹೀಗಾಗಿ ಈ ಭಾರಿ 12 ಪದಕಗಳು ಸಿಗುವುದು ಗ್ಯಾರಂಟಿಯಾಗಿದೆ.

ಮೂವರು ಮಹಿಳಾ ಬಾಕ್ಸರ್‍ಗಳು ಸೇರಿದಂತೆ ನಾಲ್ವರು ಉತ್ತಮ ಆಟ ಪ್ರದರ್ಶಿಸಿ ಸೇಮಿಫೈನಲ್ ತಲುಪಿರುವುದರಿಂದ ಪದಕ ಗ್ಯಾರಂಟಿಯಾಗಿದೆ. ಕ್ವಾರ್ಟರ್ ಫೈನಲ್‍ನಲ್ಲಿ ಸಂಜಿತ್, ಸಾಕ್ಷಿ, ಜಾಸ್ಮೀನ್ ಹಾಗೂ ಸಿಮ್ರಾನ್‍ಜಿತ್ ಕೌರ್ ಅವರು ಸೇಮಿಫೈನಲ್ ಪ್ರವೇಶಿಸಿರುವ ಬಾಕ್ಸರ್‍ಗಳು.

ಚಿನ್ನದ ಪದಕ ವಿಜೇತ ಸಂಜೀತ್ ಅವರು ತಜಕಿಸ್ತಾನದ ಜಸೂರ್ ಅವರು 5-0 ಅಂತರದಿಂದ ಪರಾಭವಗೊಳಿಸಿ ಶಿವತಾಪಾ ಅವರೊಂದಿಗೆ ಸೇಮಿಸ್ ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಸಂಜೀತ್ ಅವರು ಕಳೆದ ಭಾರಿಯ ಬೆಳ್ಳಿ ಪದಕ ವಿಜೇತ ಉಜ್ಬೇಕಿಸ್ತಾನದ ಸಂಜಾರ್ ತರ್ಷೋನೊವಾ ಅವರನ್ನು ಎದುರಿಸಲಿದ್ದಾರೆ.

Facebook Comments

Sri Raghav

Admin