ಸೆಮಿ ಫೈನಲ್‍ನಲ್ಲಿ ಸೆಣಸದೆ ಕಂಚು ಪದಕಕ್ಕೆ ತೃಪ್ತಿ ಪಟ್ಟ ಬಾಕ್ಸರ್ ವಿಕಾಸ್

ಈ ಸುದ್ದಿಯನ್ನು ಶೇರ್ ಮಾಡಿ

Vikas--01

ಜಕಾರ್ತ (ಪಿಟಿಐ), ಆ.31-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ಗಾಯಾಳು ವಿಕಾಸ್ ಕೃಷ್ಣನ್(75 ಕೆಜಿ ವಿಭಾಗ) ಕಂಚು ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇದರೊಂದಿಗೆ ಸತತ ಮೂರು ಏಷ್ಯನ್ ಗೇಮ್ಸ್‍ಗಳಲ್ಲೂ ಪದಕಗಳನ್ನು ಗೆದ್ದ ಭಾರತದ ಏಕೈಕ ಬಾಕ್ಸರ್ ಎಂಬ ಇತಿಹಾಸ ನಿರ್ಮಿಸಿದ್ದಾರೆ.  ಈ ಹಿಂದೆ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ವಿಕಾಸ್ ಅವರ ಎಡಗಣ್ಣಿಗೆ ಪೆಟ್ಟು ಬಿದ್ದಿರುವುದರಿಂದ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಸ್ಪರ್ಧಿಸಲು ವೈದ್ಯಕೀಯವಾಗಿ ಯೋಗ್ಯರಲ್ಲ ಎಂದು ಘೋಷಿಸಲ್ಪಟ್ಟ ನಂತರ ಅವರು ಕಂಚು ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದಾರೆ.

26 ವರ್ಷದ ವಿಕಾಸ್, ಕಜಕ್‍ಸ್ತಾನದ ಅಮನ್‍ಕುಲ್ ಅಬಿಲ್‍ಖಾನ್ ವಿರುದ್ಧ ಉಪಾಂತ್ಯದ ಪಂದ್ಯದಲ್ಲಿ ಸೆಣಸಬೇಕಾಗಿತ್ತು. ಆದರೆ ನೇತ್ರ ಗಾಯದ ಸಮಸ್ಯೆಯಿಂದಾಗಿ ಅವರು ಸ್ಪರ್ಧೆಯಿಂದ ದೂರ ಉಳಿಯಬೇಕಾಯಿತು. ಆದಾಗ್ಯೂ ಬಾಕ್ಸಿಂಗ್ ನಿಯಮದ ಪ್ರಕಾರ ಅವರು ಕಂಚು ಪದಕ ಗಳಿಸಿದ್ದಾರೆ.

ಸತತ ಮೂರು ಏಷ್ಯನ್ ಗೇಮ್ಸ್‍ಗಳಲ್ಲೂ ಪದಕಗಳನ್ನು ಗೆದ್ದ ಭಾರತದ ಮೊದಲ ಬಾಕ್ಸರ್ ಎಂಬ ಹೆಗ್ಗಳಿಕೆಗೂ ವಿಕಾಸ್ ಪಾತ್ರರಾಗಿದ್ದಾರೆ. 2010ರಲ್ಲಿ ಅವರು ಚೀನಾದ ಗೌಂಗ್‍ಜೌನಲ್ಲಿ ನಡೆದ ಏಷ್ಯಾಡ್‍ನಲ್ಲಿ ಚಿನ್ನದ ಪದಕ (60 ಕೆಜಿ ವಿಭಾಗ) ಗೆದ್ದಿದ್ದರು. ನಂತರ 2014ರಲ್ಲಿ ಇಂಚೋನ್‍ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಪದಕ (ಮಿಡ್ಲ್ ವೇಟ್ ವಿಭಾಗ) ಕೊರಳಿಗೇರಿಸಿದ್ದರು.

Facebook Comments

Sri Raghav

Admin