ಕುಖ್ಯಾತ ಅಲ್‍ಖೈದಾ ಉಗ್ರ ಆಸಿಮ್ ಖತಂ

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಅ.9- ದಕ್ಷಿಣ ಏಷ್ಯಾದ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ನಾಯಕನಾಗಿದ್ದ ಮತ್ತು ಹಲವಾರು ದಾಳಿಗಳಲ್ಲಿ ಪಾಲ್ಗೊಂಡಿದ್ದ ಕುಖ್ಯಾತ ಭಯೋತ್ಪಾದಕ ಆಸಿಮ್ ಉಮರ್‍ನನ್ನು ಅಮೆರಿಕ ಮತ್ತು ಆಫ್ಘಾನಿಸ್ತಾನ ಜಂಟಿ ಸೇನಾ ಪಡೆ ವಾಯು ದಾಳಿಯಲ್ಲಿ ಹತ್ಯೆ ಮಾಡಿದೆ.

ಭಾರತ ಉಪ ಖಂಡದ ಅಲ್ ಖೈದಾ ನಾಯಕನೂ ಆಗಿದ್ದ ಆಸಿಮ್ ಅಮೆರಿಕಾ ಸೇನೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಸೆ.22 ಮತ್ತು 23ರಂದು ಆಫ್ಘಾನಿಸ್ತಾನದ ಮೂಸಾಕಿಲ ಜಿಲ್ಲೆಯ ತಾಲಿಬಾನ್ ಕಾಂಪೌಂಡ್ ಮೇಲೆ ಅಮೆರಿಕ ಮತ್ತು ಆಫ್ಘನ್ ಸೇನೆ ದೀರ್ಘ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಅಮೆರಿಕದ ಯುದ್ಧ ವಿಮಾನಗಳು ಈ ಪ್ರದೇಶದ ಮೇಲೆ ನಡೆಸಿದ ದಾಳಿಯಲ್ಲಿ ಆಸಿಮ್ ಹತನಾಗಿದ್ದಾನೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.

2014ರಿಂದಲೂ ಏಷ್ಯಾ , ದಕ್ಷಿಣ ಏಷ್ಯಾ ಮತ್ತು ಭಾರತ ಉಪ ಖಂಡದ ಆಸಿಮ್ ಸೇನಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

Facebook Comments