ಅಸ್ಸೋಂನಲ್ಲಿ ಮಾಲ್ ಮೇಲೆ ಗ್ರೆನೇಡ್ ದಾಳಿ, 11 ಜನರಿಗೆ ಗಾಯ, ರೆಡ್ ಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಮೇ 16- ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಉಲ್ಫಾ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ನಿನ್ನೆ ರಾತ್ರಿ ದಿಸಾಪುರದ ಬಳಿ ಮಾಲ್ ಮೇಲೆ ಉಗ್ರಗಾಮಿಗಳು ಗ್ರೆನೇಡ್ ದಾಳಿ ನಡೆಸಿದ್ದು, ಇಬ್ಬರು ಯೋಧರೂ ಸೇರಿದಂತೆ 11 ಮಂದಿ ತೀವ್ರ ಗಾಯಗೊಂಡಿದ್ದಾರೆ.

ಈ ಕೃತ್ಯದ ನಂತರ ರಾಜಧಾನಿ ಗುವಾಹತಿ ಸೇರಿದಂತೆ ಅಸ್ಸೋಂನ ಸೂಕ್ಷ್ಮ ಸ್ಥಳಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೋಟಾರ್‍ಸೈಕಲ್‍ನಲ್ಲಿ ಬಂದ ಉಗ್ರರು ದಿಸಾಪುರದ ಝೂ ರಸ್ತೆಯ ಸೆಂಟ್ರಲ್ ಮಾಲ್ ಮುಂದೆ ನಿನ್ನೆ ರಾತ್ರಿ 8.15ರಲ್ಲಿ ಗ್ರೆನೇಡ್ ಎಸೆದು ಪರಾರಿಯಾದರು.

ಇದು ಸ್ಫೋಟಗೊಂಡು ಸಶಸ್ತ್ರ ಸೀಮಾ ಬಲ್(ಎಸ್‍ಎಸ್‍ಬಿ)ನ ಇಬ್ಬರು ಯೋಧರು ಮತ್ತು ಒಂಭತ್ತು ಮಂದಿ ಸಾರ್ವಜನಿಕರು ತೀವ್ರ ಗಾಯಗೊಂಡದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ.

ಕುಖ್ಯಾತ ಉಗ್ರ ಪರೇಶ್ ಬರುವಾ ನೇತೃತ್ವದ ಉಲ್ಬಾದ ಸ್ವಾಧೀನ್ ಭಯೋತ್ಪಾದನೆ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಗ್ರೆನೇಡ್ ದಾಳಿ ನಂತರ ರಾಜಧಾನಿ ಗುವಾಹತಿ ಸೇರಿದಂತೆ ಅಸ್ಸಾಂನ ಸೂಕ್ಷ್ಮ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin