ಕೊರೊನಾಗೆ ಅಸ್ಸಾಂನ ಶಾಸಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಮೇ.26-ಅಸ್ಸಾಂನ ಗೋಸೈಗಾಂವ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಭಾರಿ ಶಾಸಕರಾಗಿದ್ದ ಮಜೇಂದ್ರ ನಾರ್ಜರಿ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷದ ನಾಯಕರಾಗಿದ್ದ 68ವರ್ಷದ ಮಜೇಂದ್ರ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ನಾಲ್ಕು ಭಾರಿ ಶಾಸಕರಾಗಿ ಆರಿಸಿಬಂದಿದ್ದ ಮಜೇಂದ್ರ ಅವರು ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅವರು ಯುಪಿಪಿಎಲ್‍ನ ಸೋಮನಾಥ್ ನಾರ್ಜರಿ ಅವರ ವಿರುದ್ಧ ಸೋಲುಂಡಿದ್ದರು.

ಮಜೇಂದ್ರ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಗುವಾಹಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಕೇಶಬ್ ಮಹಾಂತ ತಿಳಿಸಿದ್ದಾರೆ.

Facebook Comments

Sri Raghav

Admin