ಅಸ್ಸಾಂ ರೈಫಲ್ ಪಡೆಗೆ ಸಿಕ್ಕಿಬಿದ್ದ ಮ್ಯಾನ್ಮಾರ್ ಉಗ್ರರು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.14-ಮ್ಯಾನ್ಮಾರ್‍ನಿಂದ ಭಾರತಕ್ಕೆ ಬಂದಿದ್ದ ಎನ್‍ಎಸ್‍ಸಿಎನ್-ಕೆ ಉಗ್ರಗಾಮಿ ಸಂಘಟನೆಯ ಮೂವರು ಕಟ್ಟಾ ಉಗ್ರವಾದಿಗಳನ್ನು ನಾಗಾಲ್ಯಾಂಡ್‍ನಲ್ಲಿ ಬಂಧಿಸುವಲ್ಲಿ ಅಸ್ಸಾಂ ರೈಫಲ್ ಪಡೆ ಯಶಸ್ವಿಯಾಗಿದೆ. ಮ್ಯಾನ್ಮಾರ್ ಉಗ್ರ ಸಂಘಟನೆಯ ಉಗ್ರರು ಅಕ್ರಮವಾಗಿ ಭಾರತ ಪ್ರವೇಶಿಸಿ ದಾಳಿ ನಡೆಸುವ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಬಂಧಿತ ಉಗ್ರರನ್ನು ಯನ್ನಾ ಕೊನ್ಯಾಕ್, ಟೊನ್‍ಪೊ ಕೊನ್ಯಾಕ್ ಹಾಗೂ ಸೊಂಗಮ್ ಕೊನ್ಯಾಕ್ ಎಂದು ಗುರುತಿಸಲಾಗಿದೆ. ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಉಭಯ ರಾಷ್ಟ್ರಗಳ ಯೋಧರು ಹದ್ದಿನಕಣ್ಣಿಟ್ಟು ಕಾಯುತ್ತಿದ್ದರು.

ಆದರೂ ಉಗ್ರರು ಮ್ಯಾನ್ಮಾರ್‍ನಿಂದ ಅಕ್ರಮವಾಗಿ ಭಾರತ ಪ್ರವೇಶಿಸಿ ಭಾರಿ ದಾಳಿಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಈ ಕಾರ್ಯಚರಣೆ ನಡೆಸಲಾಗಿದೆ.

Facebook Comments