1 ಲಕ್ಷ ಆದಿವಾಸಿಗಳಿಗೆ ಭೂ ದಾಖಲೆ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಶಿವಸಾಗರ್,ಜ.23-ಅಸ್ಸೋಂನ ಒಂದು ಲಕ್ಷಕ್ಕೂ ಹೆಚ್ಚು ಆದಿವಾಸಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೂ ದಾಖಲೆ ಪಟ್ಟಾ ಹಸ್ತಾಂತರಿಸಿದರು. ಶಿವಸಾಗರ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿಗಳು, ಬಡಜನರ ಭೂಮಿ ರಕ್ಷಿಸುವ ಉದ್ದೇಶದಿಂದ ಅಸ್ಸೋಂ ಸರ್ಕಾರ ಹೊಸ ನೀತಿ ಜಾರಿಗೆ ತಂದಿದ್ದು,ಎಲ್ಲಾ ಆದಿವಾಸಿಗಳಿಗೆ ಪಟ್ಟಾ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಅಸ್ಸೋಂನಲ್ಲಿ 5.75 ಲಕ್ಷ ಭೂರಹಿತ ಕುಟುಂಬಗಳಿದ್ದು, ನಮ್ಮ ಸರ್ಕಾರ 2.28 ಲಕ್ಷ ಮಂದಿಗೆ ಭೂ ದಾಖಲೆ ನೀಡಿದೆ. ಮುಂದಿನ ದಿನಗಳಲ್ಲಿ ಉಳಿದವರಿಗೂ ಭೂ ದಾಖಲೆ ಹಸ್ತಾಂತರಿಸಲಾಗುವುದು ಎಂದರು.

Facebook Comments