ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದ ಹೈಡ್ರಾಮಾ, ಬಹುಮತ ಸಾಬೀತು ಪ್ರಕ್ರಿಯೆ ಮುಂದೂಡಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜು. 8 : ಹಿಂದೆಂದೂ ಕಾಣದ ರಾಜಕೀಯ ಬೃಹನ್ ನಾಟಕಕ್ಕೆ ಸಾಕ್ಷೀಯಾದ ಕರ್ನಾಟಕ ವಿಧಾನಸಭೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ನಾಟಕೀಯ ನಡೆದು ವಿಶ್ವಾಸ ಮತ ನಿರ್ಣಯದ ಮೇಲೆ ನಡೆದ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆಯಾಗಿದೆ.

ಸರ್ಕಾರ ಹಾಗೂ ವಿಧಾನಸಭೆಯ ಸ್ಪೀಕರ್ ಉದ್ದೇಶ ಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ಕಿಡಿಕಾರಿರುವ ಪ್ರತಿಪಕ್ಷ ಬಿಜೆಪಿ ,ಇಂದೇ ಬಹುಮತ ಸಾಬೀತುಪಡಿಸಬೇಕೆಂದು ಪಟ್ಟುಹಿಡಿದು
ಸದನದಲ್ಲೇ ಪಟ್ಟು ಹಿಡಿದಿದೆ.

ಯಡಿಯೂರಪ್ಪ ಸೇರಿದಂತೆ ಪಕ್ಷದ 105 ಶಾಸಕರು ಆಹೋರಾತ್ರಿ ಸದನದಲ್ಲೇ ಉಳಿದಿದ್ದಾರೆ. ಇನ್ನೊಂದೆಡೆ ಸ್ಪೀಕರ್ ಗೆ ನಿಗದಿತ ಅವಧಿಯಲ್ಲಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟೀಲೇರಲು ಸಜ್ಜಾಗಿದೆ. ಈ ಬೆಳವಣಿಗೆಗಳ ನಡುವೆಯೇ ರಾಜ್ಯಪಾಲ ವಿ.ಆರ್ ವಾಲಾ ಅವರು, ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು,‌ಯಾವಾಗ ಬೇಕಾದರೂ ರಂಗ ಪ್ರವೇಶ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಸದ್ಯ ಕರ್ನಾಟಕದ ರಾಜಕೀಯ ಪರಿಸ್ಥಿತಿ ಅಯೋಮಯವಾಗಿದ್ದು, ನಾನಾ ಇಲ್ಲವೇ ನೀನಾ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ಸಂದೇಶ ರವಾನಿಸಿದ್ದರು. ಆದರೆ ಅದಾಗಲೇ ಸ್ಪೀಕರ್ ರಮೇಶ್ ಕುಮಾರ್ ತಾವು ಎಜೆ ಉದಯ್ ಹೊಳ್ಳ ಜತೆ ವಿಪ್ ಜಾರಿ ಸಂಬಂಧ ಚರ್ಚೆಗೆ ತೆರಳಿದ್ದ ಕಾರಣ ಸದನವನ್ನು ಉಪಸಭಾಪತಿಗಳು ಮುನ್ನಡೆಸಿದ್ದರು.

ಸದನದಲ್ಲಿ ಗಲಾಟೆ, ಗದ್ದಲ ಮುಂದುವರಿದು ಆಡಳಿತ ಪಖ್ಷದವರೇ ಆಪರೇಶನ್ ಕಮಲ ವಿರುದ್ಧ ಸಿಡಿದು ಪ್ರತಿಭಟಿಸಿದರೆ ಬಿಜೆಪಿ ವಿಶ್ವಾಸಮತ ಯಾಚನೆ ನಡೆಸಿ ಎಂದು ಪ್ರತಿಭಟಿಸಿದೆ. ಕಡೆಗೆ ಉಪಸಭಾಪತಿಗಳು ನಾಳೆ (ಶುಕ್ರವಾರ) ಬೆಳಿಗ್ಗೆ ಹನ್ನೊಂದಕ್ಕೆ ಸದನದ ಕಲಾಪವನ್ನು ಮುಂದೂಡಿ ಆದೇಶಿಸಿದ್ದಾರೆ.ಆದರೆ ಸದನದಲ್ಲಿ ವಿಶ್ವಾಸಮತ ಯಾಚನೆ ಆಗುವವರೆಗೆ ಅಹೋರಾತ್ರಿ ಹೋರಾಟ ನಡೆಸುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸದನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನವರು, ನಾವು ಎಲ್ಲಿ ಹೋಗಲ್ಲ. ನಮ್ಮ ಎಲ್ಲ ಶಾಸಕರೊಂದಿಗೆ ಸದನದಲ್ಲಿಯೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ವಿಶ್ವಾಸಮತಯಾಚನೆ ಮಾಡದೇ ಸಿಎಂ ಹಾಗೂ ಸರ್ಕಾರದ ನಾಯಕರು ಅನಾವಶ್ಯಕವಾಗಿ ಸಮಯ ವ್ಯಯಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇತ್ತ ಕಾಂಗ್ರೆಸ್ ನಾಯಕರೆಲ್ಲರೂ ಶಾಸಕ ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಬಿಜೆಪಿಯ ಲಕ್ಷ್ಮಣ್ ಸವದಿ ಅವರೇ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್​ ತೀರ್ಮಾನದಿಂದ ಅಸಮಾಧಾನಗೊಂಡ ಬಿಜೆಪಿ ರಾಜಭವನ ತೆರಳಿ ರಾಜ್ಯಪಾಲರಾದ ವಜುಭಾಯಿ ಆರ್​. ವಾಲಾರಿಗೆ ದೂರು ನೀಡಿದರು. ತಕ್ಷಣ ರಾಜ್ಯಪಾಲರು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸಿ ಎಂದು ಸ್ಪೀಕರ್​ಗೆ ಸಂದೇಶ ರವಾನಿಸಿದರು. ಆದರೆ, ಸ್ಪೀಕರ್​ ಶೀಘ್ರವಾಗಿ ನಿರ್ಧಾರಕ್ಕೆ ಬರಲು ಆಗುವುದಿಲ್ಲ ಎಂದು ತಿರಸ್ಕರಿಸಿದರು.

ಇದರಿಂದ ಆಕ್ರೋಶಗೊಂಡ ಬಿಜೆಪಿ ಕಲಾಪದ ನಡುವೆ ಗದ್ದಲ ಸೃಷ್ಟಿಸಿತು. ಭೋಜನ ವಿರಾಮದವರೆಗೂ ಸೂಸೂತ್ರವಾಗಿ ನಡೆದುಕೊಂಡು ಬಂದ ಕಲಾಪ, ಮಧ್ಯಾಹ್ನದ ನಂತರ ಮೂರು ಬಾರಿ ಮುಂದೂಡಲಾಯಿತು.

ಕಲಾಪದ ನಡುವೆ ಕಾಂಗ್ರೆಸ್​ನ ಶ್ರೀಮಂತ್​ ಪಾಟೀಲ್​ ಅವರ ಜತೆಯಲ್ಲಿ ಬಿಜೆಪಿಯ ಲಕ್ಷ್ಮಣ್​ ಸವದಿ ಇರುವ ಫೋಟೊವನ್ನು ದೋಸ್ತಿ ಸರ್ಕಾರ ಪ್ರದರ್ಶಿಸಿ ಆಪರೇಷನ್​ ಕಮಲವನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಪ್ರತಿಭಟಿಸಿದರು. ಆದರೆ, ವಿಶ್ವಾಸಮತ ಯಾಚನೆಗೆ ಪಟ್ಟುಬಿಡದ ಬಿಜೆಪಿ ಇಂದು ರಾತ್ರಿ 12 ಗಂಟೆಯಾದರೂ ಪರವಾಗಿ ವಿಶ್ವಾಸಮತ ಮಂಡನೆ ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ದೋಸ್ತಿ ಸರ್ಕಾರ ಒಪ್ಪದಿದ್ದರಿಂದ ಗದ್ದಲ ಉಂಟಾಗಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಇದರ ನಡುವೆ ದೋಸ್ತಿ ಸರ್ಕಾರ ಸುಪ್ರೀಂಕೋರ್ಟ್​ ನೀಡಿರುವ ತೀರ್ಪನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದು, ಬಿಜೆಪಿಯೂ ಕೂಡ 24 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಅವರು ತಳೆದಿರುವ ನಿಲುವು ಬಹಿರಂಗಗೊಳ್ಳುವ ಮುನ್ನ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತಪಾಟೀಲ್ ಅವರು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ತುಸು ಕಾವೇರಿಸಿತ್ತು. ವಿಶ್ವಾಸಮತ ಕುರಿತ ಚರ್ಚೆ, ಶ್ರೀಮಂತಪಾಟೀಲ್ ಪ್ರಕರಣದ ಸುತ್ತಲೇ ಗಿರಕಿ ಹೊಡೆಯಲಾರಂಭಿಸಿತು. ಈ ಹೊತ್ತಿನಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ಕುಮಾರ್ ಅವರು ‘ಇದು ಸಹಜ’ ಪ್ರಕರಣವಲ್ಲ ಎಂದು ತಳೆದ ನಿಲುವು ಪ್ರತಿಪಕ್ಷ ಬಿಜೆಪಿಯನ್ನು ಸಿಟ್ಟಿಗೆಬ್ಬಿಸಿತ್ತಲ್ಲದೆ, ಪ್ರತಿಪಕ್ಷ ಬಿಜೆಪಿ ಸದಸ್ಯರು ಕೂಡ ಸ್ಪೀಕರ್ ರಮೇಶ್ಕುಮಾರ್ ಅವರನ್ನೂ ಸಿಟ್ಟಿಗೇಳಿಸಿದರು. ಇದು ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ಸದಸ್ಯರೊಡನೆ ನಡೆಯುತ್ತಿದ್ದ ವಾಕ್ಸಮರ ಮುಂದುವರೆಯುವಿಕೆ ದಾರಿ ಮಾಡಿಕೊಟ್ಟಿತು.

ಹಾದಿ ತಪ್ಪಿದ ಸದನದಲ್ಲಿ ಎದ್ದ ಗದ್ದಲದಿಂದ ಎಳ್ಳಷ್ಟೂ ವಿಚಲಿತರಾಗದ ಕುಮಾರಸ್ವಾಮಿ ಅವರು, ‘ನನ್ನ ಭಾವನೆ ವ್ಯಕ್ತಪಡಿಸಲು ಇನ್ನೂ ಅವಕಾಶ ಸಿಕ್ಕಿಲ್ಲ. ಅಧಿಕಾರಕ್ಕೆ ಅಂಟುಕೊಂಡು ಕೂರುವವನೂ ನಾನಲ್ಲ, ದಮ್ಮಯ್ಯ ದಕ್ಕಯ್ಯ ಹೊಡೆಯುವ ಪೈಕಿಯೂ ನಾನಲ್ಲ. ವಿಶ್ವಾಸಮತ ಮಂಡಿಸಲು ನಿಮಗೇನು ಆತುರ ಇರಬಹುದು ಆದರೆ ನನಗೆ ಆತುರವೇನಿಲ್ಲ. ಹೆದರಿಯೂ ಕೂತಿಲ್ಲ” ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರು ನೀಡಿದ ಈ ತಿರುಗೇಟು, ಅಧಿಕಾರ ಗದ್ದುಗೆ ಹಿಡಿಯಲು ಹಾತೊರೆಯುತ್ತಿರುವ ಪ್ರತಿಪಕ್ಷ ಬಿಜೆಪಿಗೆ ಸರ್ಕಾರ ರಚನೆ ಅಷ್ಟೊಂದು ಸುಲಭದ ತುತ್ತಲ್ಲ ಎಂದು ಮನಗಾಣಿಸಿದಂತಿತ್ತು. ಈ ನಡುವೆ ಎದ್ದು ನಿಂತ ಬಿಜೆಪಿಯ ಮಾಧುಸ್ವಾಮಿ ಪುನಃ ವಿಶ್ವಾಸಮತ ಮಂಡನೆಯತ್ತಲೇ ಆರಂಭಿಸಿದ ಮಾತು, ತುಸು ಹೊತ್ತು ಸದನವನ್ನು ಇನ್ನಷ್ಟು ಕಾವೇರಿಸಿತ್ತು.

ಇದರಿಂದ ಕೆಲ ಸಮಯ ಕೆರಳಿದ ಸ್ಪೀಕರ್ ರಮೇಶ್ಕುಮಾರ್ ಅವರು ‘ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಶ್ವಾಸಮತ ಆಗಲು ಬಿಡುವುದಿಲ್ಲ,’ ಎಂದು ಪ್ರತಿಪಕ್ಷ ಬಿಜೆಪಿಗೆ ನೀಡಿದ ತಿರುಗೇಟು, ವಿಶ್ವಾಸಮತ ಪ್ರಕ್ರಿಯೆ ಇನ್ನಷ್ಟು ದಿನಗಳ ಕಾಲ ಎಳೆದೊಯ್ಯಬಹುದು ಎಂಬುದಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಿತ್ತು. ಅದರಲ್ಲೂ ತುಂಬಾ ಮುಖ್ಯವಾಗಿ ಶ್ರೀಮಂತಪಾಟೀಲ್ ಪ್ರಕರಣದಲ್ಲಿ ಆಕ್ರೋಶಭರಿತರಾಗಿದ್ದ ಡಿ ಕೆ ಶಿವಕುಮಾರ್, ಈ ಸಂಬಂಧ ಫೋಟೋ ಮತ್ತು ವಿಮಾನ ಟಿಕೆಟ್ ನ ಪ್ರದರ್ಶಿಸಿದರಲ್ಲದೆ ಈ ಪ್ರಕರಣದ ಹಿಂದೆ ಮಾಜಿ ಸಚಿವ ಲಕ್ಷ್ಮಣ ಸವದಿ ಇದ್ದಾರೆ ಎಂದು ಹೇಳುತ್ತಿದ್ದಂತೆಯೇ ಸುನೀಲ್ ಕುಮಾರ್, ಸೋಮಣ್ಣ ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಸೊಪ್ಪು ಹಾಕದ ಡಿ ಕೆ ಶಿವಕುಮಾರ್, ಕೈ ಸನ್ನೆ ಮಾಡುವ ಮೂಲಕ ಗದ್ದಲ ಎಬ್ಬಿಸಲು ಆಡಳಿತ ಪಕ್ಷದ ಶಾಸಕರನ್ನು ಪ್ರೇರೇಪಿಸಿದರು.

ಇದರಿಂದ ಉತ್ತೇಜನಗೊಂಡಂತಿದ್ದ ಜೆಡಿಎಸ್ ನ ಅರಸೀಕೆರೆ ಶಾಸಕ ಶಿವಲಿಂಗೇಗೌಡ ‘ಶಾಸಕರನ್ನು ಕಿಡ್ನಾಪ್ ಮಾಡುತ್ತಿದ್ದಾರೆ. ಬಾಂಬೆಯಲ್ಲಿ ಅಡ್ಮಿಟ್ ಮಾಡುತ್ತಿದ್ದಾರೆ. ಶಾಸಕರ ಗೌರವ ಈಗಾಗಲೇ ಹಾಳಾಗಿದೆ. ಒಂದು ರೀತಿಯಲ್ಲಿ ಗಂಡಸಿ ಸಂತೆಯಲ್ಲಿ ಕುರಿ ಮರಿ, ದನದ ವ್ಯಾಪಾರ ರೀತಿ ಆಗ್ಹೋಗಿದೆ ಎಂದು ತಿದಿಯೊತ್ತಿದರು.  ಇದೇ ವಾತಾವರಣವನ್ನು ಮುಂದುವರೆಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ‘ಶ್ರೀಮಂತಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ವಾಟ್ಸಾಪ್ ನಲ್ಲಿ ಬಿಟ್ಟಿದ್ಯಾರು? ಸದನ ಸದಸ್ಯರ ರಕ್ಷಣೆ ಆಗಬೇಕಿದೆ. ಈ ವಿಚಾರದಲ್ಲಿ ಸ್ಪೀಕರ್ ಪರಮಾಧಿಕಾರವನ್ನು ಚಲಾಯಿಸಲಿ ಎಂದು ರಮೇಶ್ ಕುಮಾರ್ ತ್ತ ನೋಡಿದರು.

ಯಾವತ್ತು ಮತಕ್ಕೆ ಹಾಕಲಾಗುತ್ತೋ ಆಗ ಸಂಖ್ಯೆ ಪ್ರಶ್ನೆ ಬರುತ್ತೆ. 2009-10ರಲ್ಲಿ ಏನೇನಾಯಿತು ಎಂದು ಪ್ರಶ್ನಿಸುತ್ತಲೇ ಮಾತನ್ನು ಇನ್ನಷ್ಟು ಮುಂದುವರೆಸಿದ ಕುಮಾರಸ್ವಾಮಿ, ತಂದು ಸ್ಪೀಕರ್ ಗೆ ಅವಮಾನ ಆಗಬಾರದು ಎಂದು ವ್ಯಕ್ತಪಡಿಸಿದ ಕಳಕಳಿ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪನ್ನು ಎಳೆದು ತಂದಂತಿತ್ತು.

ಈ ಚರ್ಚೆಯನ್ನು ಸೂಕ್ಷ್ಮವಾಗಿ ಆಲಿಸುತ್ತಲೇ ಒಂದು ಹಂತದಲ್ಲಿ ಭಾವುಕತೆಯಿಂದ ಹೊರಬಂದತ್ತಿದ್ದ ಸ್ಪೀಕರ್ ರಮೇಶ್ ಕುಮಾರ್, ಶ್ರೀಮಂತಪಾಟೀಲ್ ಪ್ರಕರಣವನ್ನು ಒರೆಗೆ ಹಚ್ಚಿದರು. ‘ಶ್ರೀಮಂತಪಾಟೀಲ್ ಸಹಿ ಮಾಡಿರುವ ಪತ್ರದಲ್ಲಿ ದಿನಾಂಕವಿಲ್ಲ. ಹೃದಯ ನೋವಿನಿಂದ ಬಳಲುತ್ತಿರುವ ಶ್ರೀಮಂತ ಪಾಟೀಲ್ ದಾಖಲಾಗಿರುವ ಮುಂಬೈನ ಸಂಜೀವಿನಿ ಆಸ್ಪತ್ರೆ ಭೌತಿಕವಾಗಿ ಇದೆಯೇ ಎಂದು ಅನುಮಾನ ವ್ಯಕ್ತಪಡಿಸಿದರಲ್ಲದೆ ಈ ಪ್ರಕರಣವನ್ನು ಹೇಗೆ ‘ಸಹಜ’ ಎಂದು ಸ್ವೀಕರಿಸಬೇಕು, ನನ್ನ ಬಳಿ ಸಾಕ್ಷ್ಯಾಧಾರಗಳಿಲ್ಲ. ಇದು ಸಹಜವಲ್ಲ ಎಂದು ಪುನರುಚ್ಛರಿಸುತ್ತಲೇ ನಾನು ಯಾರ ಪರ ವಹಹಿಸಲಿ. ಆ ಯ್ಯಾಮ್ ಡಿಸ್ಟರ್ಬ್ ಎಂದು ಮುಖ ಒರೆಸಿಕೊಂಡರು.

ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಅನ್ಯಮನಸ್ಕರಾದಂತಿದ್ದ ಗೃಹ ಸಚಿವ ಎಂ ಬಿ ಪಾಟೀಲ್ ರತ್ತ ನೋಡಿದ ರಮೇಶ್ ಕುಮಾರ್ ‘ ಶ್ರೀಮಂತಪಾಟೀಲ್ ಕುಟುಂಬ ಸದಸ್ಯರನ್ನು ತಕ್ಷಣವೇ ಸಂಪರ್ಕಿಸಿ. ನಾಳೆಯೊಳಗೆ ವರದಿ ಕೊಡಿ. ನೀವು ಸರಿಯಾಗಿ ವರ್ತಿಸದೆ ಇದ್ದರೆ ಡಿ ಜಿ ಕರೆಸಿ ಸದಸ್ಯರಿಗೆ ರಕ್ಷಣೆ ಕೊಡಬೇಕಾಗುತ್ತೆ,’ ಎಂದು ಬಿಸಿ ಮುಟ್ಟಿಸಿದರು. ಸ್ಪೀಕರ್ ಮಾಡಿದ ತಾಕೀತಿಗೆ ಮರು ಉತ್ತರಿಸಲಾಗದ ಎಂ ಬಿ ಪಾಟೀಲ್ ಅವರು ಒ ಕೆ ಸರ್ ಎಂದಷ್ಟೇ ಹೇಳಿ ಕುಳಿತರು.

ಶ್ರೀಮಂತಪಾಟೀಲ್ ಪ್ರಕರಣದತ್ತಲೇ ಸುತ್ತು ಹೊಡೆಯುತ್ತಿದ್ದ ಚರ್ಚೆಯಿಂದ ತುಸು ರೋಸಿ ಹೋದ ಬಿಜೆಪಿ ಶಾಸಕ ವಿ ಸೋಮಣ್ಣ ಕ್ರಿಯಾಲೋಪದ ಕುರಿತು ಪ್ರಶ್ನೆ ಎತ್ತಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ರಮೇಶ್ ಕುಮಾರ್, ಸಂವಿಧಾನದ ಪರಿಚ್ಛೇದ ಉಲ್ಲಂಘನೆಯಾಗಿದೆ ಎನ್ನುತ್ತಿದ್ದಂತೆ ಅಜೆಂಡಾ ಎಲ್ಲಿದೆ? ಎಂದು ಗಮನ ಸೆಳೆದ ಸೋಮಣ್ಣರತ್ತ ನೋಡಿ ‘ನಿಮ್ಮ ಅಜೆಂಡನಾ….’ನಿಮ್ಮ ಅಜೆಂಡಾ ಬೇರೆ ಇರಬಹುದು ಎಂದು ಕುಟುಕಿದರು.

ತಮ್ಮನ್ನು ಕುಟುಕಿದ ಸ್ಪೀಕರ್ ನ್ನು ‘ನೀವು ನಮ್ಮ ರಮೇಶ್ಕುಮಾರ್ ಆಗ್ಬೇಕು,’ ಎಂದು ಸೋಮಣ್ಣ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಡಾ ಜಿ ಪರಮೇಶ್ವರ್, ಆರ್ ವಿ ದೇಶಪಾಂಡೆ, ಎಂ ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್ ಅವರು ಬಲವಾಗಿ ಆಕ್ಷೇಪಿಸಿದರು.

ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಶಾಸಕರತ್ತ ಬೊಟ್ಟು ಮಾಡಿದ ಪ್ರತಿಪಕ್ಷ ಶಾಸಕರು ಇನ್ನಷ್ಟು ಗದ್ದಲ ನಡೆಸುವ ಸುಳಿವು ಸಿಕ್ಕೊಡನೆಯೇ ಸ್ಪೀಕರ್ ರಮೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿನ ಕುರಿತು
ಅಡ್ವೋಕೇಟ್ ಜನರಲ್ ಬಳಿ ಚರ್ಚಿಸಬೇಕು ಎಂದು ಹೇಳಿ ಇನ್ನರ್ಧ ಗಂಟೆ ಕಾಲ ಸದನವನ್ನು ಮುಂದೂಡಿದರು.
ರಾಜ್ಯಪಾಲರಿಂದ ವೋಟ್ ಆಫ್ ಕಾನ್ಫಿಡೆನ್ಸ್​​ ಬಗ್ಗೆ ಮಾಹಿತಿ ಬಂದಿದೆ. ಇಂದೇ ಮತ ಹಾಕುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರು ಇದನ್ನ ನನ್ನ ಗಮನಕ್ಕೆ ತಂದಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.ಸ್ಪೀಕರ್ ಹೇಳಿಕೆ ಬಳಿಕ ದೇಶಪಾಂಡೆ ಮಧ್ಯಪ್ರವೇಶಿಸಿದರು. ರಾಜ್ಯಪಾಲರು ಸ್ಪೀಕರ್ ಮೇಲೆ ಒತ್ತಡ ತರುವಂತಿಲ್ಲ. ಇಷ್ಟೇ ಸಮಯದಲ್ಲಿ ಮತ ಹಾಕಿ ಎಂದು ಹೇಳುವಂತಿಲ್ಲ. ಆರ್ಟಿಕಲ್ 175ರಲ್ಲಿ ಈ

Facebook Comments

Sri Raghav

Admin