ಕಿಲ್ಲರ್ ಕೊರೊನಾಗೆ ಸಂಜೀವಿನಿಯಾಗಲಿದೆ AZD7442..!

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್,ಅ.21- ಮಾರಣಾಂತಿಕ ಕೊರೊನಾ ಸೋಂಕಿಗೆ ರಾಮಬಾಣ ಎಂದೇ ಪರಿಗಣಿಸಲಾಗಿರುವ ಹೊಸ ಔಷಧಿ ಶೀಘ್ರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಎಜಡ್‍ಡಿ7442 ಎಂಬ ಸಂಜೀವಿನಿಯನ್ನು ಆಸ್ಟ್ರಾಜೆನೆಕಾ ಸಂಸ್ಥೆ ಕಂಡು ಹಿಡಿಯುತ್ತಿದ್ದು, ಅದರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ತ್ವರಿತಗತಿಯಲ್ಲಿ ಸಾಗುತ್ತಿದೆ.

ಈ ಔಷಧಿ ಮಾರುಕಟ್ಟೆಗೆ ಬಂದರೆ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇಳಿಮುಖವಾಗಲು ಸಹಕಾರಿಯಾಗಲಿದೆ. ಹೊಸ ಔಷಧಿ ಕೊರೊನಾ ವೈರಸ್‍ಗಳ ಮೇಲೆ ನೇರ ದಾಳಿ ಮಾಡಿ ವೈರಾಣುಗಳು ಕೆಲಸ ಮಾಡುವುದನ್ನು ನಿಲ್ಲಿಸಲು ಮತ್ತು ಅವುಗಳ ಪ್ರತಿರಕ್ಷಣಾ ವ್ಯವಸ್ಥೆಯನ್ನು ವಿನಾಶ ಮಾಡುವ ಸಾಮಥ್ರ್ಯ ಹೊಂದಿದೆ ಎನ್ನಲಾಗಿದೆ.

ಕಾಕ್‍ಟೆಲ್ ಮಾದರಿಯ ಈ ಔಷಧಿ ಕೊರೊನಾ ಸೋಂಕಿನ ತೀವ್ರತೆಯಲ್ಲಿರುವ ರೋಗಿಗಳ ಪ್ರತಿಕಾಯ ಶಕ್ತಿ ವೃದ್ಧಿಸುವ ಸಾಮಥ್ರ್ಯ ಹೊಂದಿದ್ದು, ಈ ಔಷಧಿ ಶೀಘ್ರ ಮಾರುಕಟ್ಟೆಗೆ ಬಂದರೆ ಕೊರೊನಾ ಮಹಾಮಾರಿಯ ಬಗ್ಗೆ ಆತಂಕ ಪಡುವ ಅವಶ್ಯಕತೆ ಬೀಳುವುದಿಲ್ಲ ಎನ್ನುತ್ತಾರೆ ಆಸ್ಟ್ರಾಜೆನೆಕ್ ಸಂಸ್ಥೆಯ ವಿಜ್ಞಾನಿಗಳು.

Facebook Comments