ಕಪ್ಪುರಂಧ್ರ ಸುತ್ತ ಅಸಾಮಾನ್ಯ ಪ್ರಭಾವಲಯ ಪತ್ತೆ..! ಬಾಹ್ಯಾಕಾಶ ಸಂಶೋಧಕರಿಗೆ ಅಚ್ಚರಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.15-ಬ್ಲಾಕ್ ಹೋಲ್ ಅಥವಾ ಕಪ್ಪು ಕುಳಿ ಜ್ಯೋತಿರ್ಮಂಡಲದ ಅದ್ಭುತ ವಿಸ್ಮಯಗಳಲ್ಲಿ ಒಂದು. ಕಪ್ಪು ಕುಳಿ ಖಗೋಳ ಜ್ಞಾನಿಗಳಿಗೆ ಸದಾ ಕುತೂಹಲಕಾರಿ ಆಕಾಶಕಾಯ. ಈಗ ಬ್ಲಾಕ್‍ಹೋಲ್ ಸುತ್ತ ಹೊಸ ಅಸಾಮಾನ್ಯ ವಿದ್ಯಮಾನವೊಂದನ್ನು ಸೌರವ್ಯೂಹ ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ವಿದ್ಯಮಾನ ವಿಜ್ಞಾನಿ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಮತ್ತು ಐರೋಪ್ಯ ಅಂತರಿಕ್ಷ ಸಂಸ್ಥೆಯಿಂದ ಜಂಟಿಯಲ್ಲಿ ಕಾರ್ಯನಿರ್ವಹಿಸಲ್ಪಡುವ ಹಬ್ಬಲ್ ಸೌರವ್ಯೂಹ ದೂರದರ್ಶಕದ ಮೂಲಕ ಭೌತ ಜ್ಞಾನಿಗಳ ಅಂತಾರಾಷ್ಟ್ರೀಯ ತಂಡವೊಂದು ಇದನ್ನು ಪತ್ತೆ ಮಾಡಿದೆ. ಬ್ಲಾಕ್ ಹೋಲ್ ಸುತ್ತ ಪ್ರದಕ್ಷಿಣೆ ಹಾಕುವ ರೀತಿಯಲ್ಲಿ ಸುತ್ತುವ ಬೆಳಕಿನ ತಟ್ಟೆ ಕಂಡುವಂದಿರುವುದು ಸಂಶೋಧಕರನ್ನು ಚಕಿತಗೊಳಿಸಿದೆ.

ಭೂಮಿಯಿಂದ 130 ದಶಲಕ್ಷ ಪ್ರಭಾ ವರ್ಷಗಳಷ್ಟು ದೂರದಲ್ಲಿ ತಾರಾ ಪುಂಜ ವಲಯದ ಸ್ಪೈರಲ್ ಗ್ಯಾಲಾಕ್ಸಿ ಎನ್‍ಜಿಸಿ-2147 ಸುತ್ತ ಮಂಧ್ಯದಲ್ಲಿ ಬೆಳಕಿನ ಈ ಡಿಸ್ಕ್ ಪತ್ತೆಯಾಗಿದೆ. ಇದು ಈ ಹಿಂದೆ ಎಂದೂ ಕಂಡುಬಂದಿಲ್ಲ. ಅಲ್ಲದೇ ಬ್ಲಾಕ್‍ಹೋಲ್ ಸುತ್ತಮುತ್ತ ಇರುವ ಇತರ ತಾರಾ ಪುಂಜ ವಲಯಗಳಿಗಿಂತ ತುಂಬಾ ವಿಶಿಷ್ಟ ಮತ್ತು ದೊಡ್ಡದಾಗಿದೆ. ಸಾಮಾನ್ಯವಾಗಿ ಇತರ ದುರ್ಬಲ ಆಕಾಶಕಾಯಗಳನ್ನು ಬ್ಲಾಕ್‍ಹೋಲ್ ಕಬಳಿಸುತ್ತದೆ.

ಆದರೆ ಕಪ್ಪು ಕುಳಿ ಸುತ್ತ ಇದು ಸುತ್ತುತ್ತಿರುವುದರಿಂದ ಇದು ಅಗಾಧ ಸಾಮರ್ಥದ ವ್ಯೂಮಾ ಕೌತುಕವಾಗಿದೆ ಎಂದು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನಿಯತಕಾಲಿಕದಲ್ಲಿ ಉಲ್ಲೇಖಿಸಲಾಗಿದೆ.

ಸುತ್ತುತ್ತಿರುವ ಈ ತಟ್ಟೆಯ ಪ್ರಭೆಯನ್ನು ಖಗೋಳ ವಿಜ್ಞಾನಿಗಳು ಅಂದಾಜು ಮಾಡುತ್ತಿದ್ಧಾರೆ. ಇದು ಇತರ ಸ್ವಾಭಾವಿಕ ಸೌರತಟ್ಟೆಗಳಿಂತಲೂ 1,000 ಅಥವಾ 1 ಲಕ್ಷ ಪಟ್ಟು ಹೆಚ್ಚು ಬೆಳಕನ್ನು ಹೊರಹೊಮ್ಮಿಸುತ್ತಿರುವುದು ಮತ್ತೊಂದು ಕೌತುಕದ ಸಂಗತಿಯಾಗಿದೆ. ಇದು ಬೆಳಕಿನ ವೇಗದಲ್ಲಿ ಶೇ.10ರಷ್ಟು ರಭಸದಿಂದ ಪ್ರದಕ್ಷಿಣೆ ಹಾಕುತ್ತಿದೆ.

ಸೌರಮಂಡಲದಲ್ಲಿ ಹೊಸ ಹೊಸ ವಿದ್ಯಮಾನಗಳು ಆಗಾಗ ಅನಾವರಣಗೊಳ್ಳುತ್ತಾ ಕುತೂಹಲ ಕೆರಳಿಸಿರುವ ಸಂದರ್ಭದಲ್ಲಿ ಬ್ಲಾಕ್‍ಹೋಲ್ ಬಳಿ ಕಂಡುಬಂದಿರುವ ಈ ತಟ್ಟೆ ಚಕಿತಗೊಳಿಸಿದೆ.

Facebook Comments

Sri Raghav

Admin