ಭೀಕರ ರಸ್ತೆ ಅಪಘಾತದಲ್ಲಿ 13 ಸ್ಥಳದಲ್ಲೇ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಲ್ಟವಿಲ್ಲೆ, ಮಾ.3 (ಎಪಿ)- ಕ್ಯಾಲಿಫೋರ್ನಿಯಾದಲ್ಲಿ 25 ಜನರನ್ನು ತುಂಬಿಕೊಂಡು ಬರುತ್ತಿದ್ದ ಎಸ್‍ಯುವಿ ಕಾರು ನೇರವಾಗಿ ಟ್ರ್ಯಾಕ್ಟರ್ ಟ್ರೈಲರ್‍ಗೆ ಅಪ್ಪಳಿಸಿ ಸ್ಥಳದಲ್ಲೇ 13 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.ಅಮೆರಿಕ-ಮೆಕ್ಸಿಕೋ ಗಡಿಯ ಸಮೀಪವಿರುವ ಕೃಷಿ ಭೂಮಿಯ ಮೂಲಕ ಮಂಗಳವಾರ ಮುಂಜಾನೆ ಎರಡು ಪಥದ ಹೆದ್ದಾರಿಯಲ್ಲಿ 25 ಜನರನ್ನು ತುಂಬಿಕೊಂಡಿರುವ ಎಸ್‍ಯುವಿ ಮುಖಾಮುಖಿಯಾಗಿ ಟ್ರ್ಯಾಕ್ಟರ್ ಟ್ರೈಲರ್‍ಗೆ ಡಿಕ್ಕಿ ಹೊಡೆದಿದೆ.

ಈ ಭೀಕರ ಅಪಘಾತದಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಹೆಚ್ಚಿನವರು ಮೆಕ್ಸಿಕನ್ನರು ಎಂದು ಮೆಕ್ಸಿಕನ್ ಅಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಅಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿದ್ದಾರೆ.

ಗಂಭೀರ ಗಾಯಗಳಾದ ವ್ಯಕ್ತಿಗಳಲ್ಲಿ ತೆವಳುತ್ತಾ ಕೆಲವರು ಓಡಾಡುತ್ತಾ ರಸ್ತೆ ಬದಿ ಹೊಲಗಳಲ್ಲಿ ಸುತ್ತಾಡುತ್ತಿದ್ದರು. ಎಸ್‍ಯುವಿ ಟ್ರೈಲರ್ ಒಳಗೆ ಸಿಕ್ಕಿ ಹಾಕಿಕೊಂಡಿದ್ದನ್ನು ಎಳೆದು ಶವಗಳನ್ನು ಹೊರ ತೆಗೆಯಲಾಯಿತು.

ಸ್ಯಾನ್‍ಡಿಯಾಗೋದಿಂದ ಪೂರ್ವಕ್ಕೆ 125 ಮೈಲಿ ದೂರದಲ್ಲಿರುವ ಕ್ಯಾಲಿಫೋರ್ನಿಯಾದ ಕೃಷಿ ಆಗ್ನೇಯ ಮೂಲೆಯಲ್ಲಿರುವ ವಿವಿಧ ಬಗೆಯ ತರಕಾರಿಗಳು ಮತ್ತು ಮೇವು ಬೆಳೆಯುವ ಹೊಲದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳದಲ್ಲಿ 12 ಮಂದಿ ಶವಗಳನ್ನು ಗುರುತಿಸಿ, ಮತ್ತೊಬ್ಬ ತೀವ್ರ ಗಾಯಗೊಂಡಿದ್ದವನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಕ್ಯಾಲಿಫೋರ್ನಿಯಾ ಹೆದ್ದಾರಿ ಪೆಟ್ರೋಲ್ ಮುಖ್ಯಸ್ಥ ಒಮರ್ ವ್ಯಾಟ್ಸನ್ ಹೇಳಿದ್ದಾರೆ.

Facebook Comments

Sri Raghav

Admin