ಫಿಲಿಫೈನ್ಸ್ ನಲ್ಲಿ ಆತ್ಮಾಹುತಿ ದಾಳಿ, 16 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಮನಿಲಾ, ಆ.25- ದ್ವೀಪ ರಾಷ್ಟ್ರ ಫಿಲಿಪೈನ್ಸ್‍ನ ಸುಲು ಪ್ರಾಂತ್ಯದಲ್ಲಿ ನಿನ್ನೆ ನಡೆದ ಎರಡು ಬಾಂಬ್ ಸೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದ್ದು , 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು , ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಉನ್ನತ ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.

ಜುಲು ಪ್ರಾಂತ್ಯದ ಜೋಲೋ ಪಟ್ಟಣದಲ್ಲಿ ನಿನ್ನೆ ಎರಡು ಬಾಂಬ್ ಸೋಟಗಳು ಸಂಭವಿಸಿದ್ದು , ಇದು ಮಾನವ ಬಾಂಬ್ ದಾಳಿ ಎಂದು ಸೇನಾಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಬ್‍ಗಳಿದ್ದ ಮೋಟಾರ್ ಸೈಕಲ್‍ನನ್ನು ಜನ ನಿಬಿಡ ಪ್ರದೇಶಕ್ಕೆ ನುಗ್ಗಿಸಿದ ಮಾನವ ಬಾಂಬರ್ ತನ್ನನ್ನು ತಾನು ಸೋಟಿಸಿಕೊಂಡ. ಇದಾದ ಕೆಲವೇ ನಿಮಿಷಗಳಲ್ಲಿ ಮಹಿಳಾ ಉಗ್ರಗಾಮಿಯೊಬ್ಬರು ಮತ್ತೊಂದು ಮಾನವ ಬಾಂಬ್ ದಾಳಿ ನಡೆಸಿದ್ದರು.

ಈ ಎರಡು ಕೃತ್ಯಗಳಲ್ಲಿ 16 ಮಂದಿ ಮೃತಪಟ್ಟು , 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕೃತ್ಯ ನಡೆಸಿದ ಇಬ್ಬರು ಉಗ್ರರು ಸಹ ಹತರಾಗಿದ್ದಾರೆ. ಇದು ಫಿಲಿಪೈನ್ಸ್‍ನ ಅಬ್ಬು ಸೈಯಫ್ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಯ ಕೈವಾಡ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin