ಟರ್ಕಿಯ ಸರಕು ಸಾಗಣೆ ವಿಮಾನ ಪತನ : ನಾಲ್ವರು ಪೈಲೆಟ್’ಗಳು ಸೇರಿ 32 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Plane-Crash ಬಿಶ್‍ಕೇಕ್, ಜ.16-ಟರ್ಕಿಯ ಸರಕು ಸಾಗಣೆ ವಿಮಾನವೊಂದು ಕರ್ಜಿಸ್ಥಾನ್ ಮನಸ್ ವಿಮಾನ ನಿಲ್ದಾಣದ ಬಳಿ ಪತನಗೊಂಡು 32ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಟರ್ಕಿಯ ಬೋಯಿಂಗ್ 747 ಕಾರ್ಗೊ ವಿಮಾನವು ಕರ್ಜಿಸ್ಥಾನ್ ರಾಜಧಾನಿ ಬಿಶ್‍ಕೇಕ್‍ನ ಮನಸ್ ಏರ್‍ಪೋರ್ಟ್‍ನಲ್ಲಿ ಇಂದು ಬೆಳಗ್ಗೆ 7.30ರಲ್ಲಿ ಭೂಸ್ಪರ್ಶ ಮಾಡುತ್ತಿತ್ತು. ಆದರೆ, ದಟ್ಟ ಮಂಜು ಆವರಿಸಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಿಮಾನ ನಿಲ್ದಾಣದ ಬಳಿಯಿದ್ದ ಡಾಚಾ ಸು ಗ್ರಾಮದ ಜನಸಂದಣಿ ಇರುವ ಮನೆಗಳ ಮೇಲೆ ಅಪ್ಪಳಿಸಿತು. ಈ ದುರ್ಘಟನೆಯಲ್ಲಿ ನಾಲ್ವರು ಪೈಲೆಟ್ ಮತ್ತು ಇತರ 28 ಮಂದಿ ಮೃತಪಟ್ಟರು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Plane-Crash-1

ಹಾಂಕಾಂಗ್‍ನಿಂದ ಕರ್ಜಿಸ್ಥಾನ್ ಮಾರ್ಗವಾಗಿ ಟರ್ಕಿಯ ಇಸ್ತಾನ್‍ಬುಲ್ ನಗರಕ್ಕೆ ಈ ವಿಮಾನ ತೆರಳಬೇಕಿತ್ತು. ದುರ್ಘಟನೆ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin