ವೆನಿಜುವೆಲಾ ಜೈಲಿನಲ್ಲಿ ಹಿಂಸಾಚಾರ, 40ಕ್ಕೂ ಹೆಚ್ಚು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಕಾರಕಾಸ್, ಮೇ 2-ವೆನಿಜುವೆಲಾದ ಕೇಂದ್ರೀಯ ಕಾರಾಗೃಹದಲ್ಲಿ ನಿನ್ನೆ ಸಂಜೆ ಭುಗಿಲೆದ್ದ ವ್ಯಾಪಕ ಹಿಂಸಾಚಾರದಲ್ಲಿ 40ಕ್ಕೂ ಹೆಚ್ಚು ಮಂದಿ ಹತರಾಗಿ, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಜೈಲಿನ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂದೀಖಾನೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ನ್ಯಾಷನಲ್ ಗಾರ್ಡ್ ಆಫೀಸರ್ ಮತ್ತು ವಾರ್ಡನ್ ಸೇರಿ ಸೆರೆಮನೆಯ ಕೆಲವು ಸಿಬ್ಬಂದಿಗೂ ತೀವ್ರ ಗಾಯಗಳಾಗಿವೆ.

ವೆನಿಜುವೆಲಾ ರಾಜಧಾನಿ ಕಾರಕಾಸ್‍ನ ಲಾಲೋಸ್ ಪೆನಿಟೆಂಟಿಯರಿ ಸೆಂಟರ್‍ನ ಕೈದಿಗಳು ನಿನ್ನೆ ತಮ್ಮ ಕುಟುಂಬದವರಿಂದ ಆಹಾರ ಪೂರೈಸಲು ಅನುಮತಿ ನೀಡಬೇಕೆಂದು ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ಧರಣಿ ವಿಕೋಪಕ್ಕೆ ತಿರುಗಿ ವ್ಯಾಪಕ ಹಿಂಸಾಚಾರ ನಡೆಯಿತು.

ಕೈದಿಗಳು ದಾಂಧಲೆ ನಡೆಸಿ ಕೈಗೆ ಸಿಕ್ಕ ವಸ್ತುಗಳಿಂದ ಎದುರಿಗೆ ಬಂದವರ ಮೇಲೆ ಬೀಕರ ದಾಳಿ ನಡೆಸಿದರು. ಅಗ್ನಿಸ್ಪರ್ಶ, ಹರಿತ ಆಯುಧಗಳಿಂದ ಈ ದಾಳಿ ನಡೆದಿದೆ ಎಂದು ಕಾರಾಗೃಹದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments

Sri Raghav

Admin