ಮೋದಿ ತಾಯಿ ಹೀರಾ ಬೆನ್ ಭೇಟಿಯಾದ ರಾಷ್ಟ್ರಪತಿ ಕೊವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಅ.13-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಬೆಳಗ್ಗೆ ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರನ್ನು ಭೇಟಿ ಮಾಡಿದರು. ಅರ್ಧ ತಾಸಿನ ಈ ಭೇಟಿ ವೇಳೆ ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ್ ಸಹ ಜೊತೆಗಿದ್ದರು.

ಗುಜರಾತ್ ಪ್ರವಾಸದ ಎರಡನೇ ದಿನವಾದ ಇಂದು ಗಾಂಧಿ ನಗರದ ಬಳಿ ಇರುವ ರೈಸಾನ್ ಗ್ರಾಮದಲ್ಲಿನ ಪ್ರಧಾನಿ ಅವರ ಮಾತೆಯ ನಿವಾಸಕ್ಕೆ ತೆರಳಿದರು. 90 ವರ್ಷದ ಮೀರಾ ಬಾಯಿ ಅವರೊಂದಿಗೆ ಅರ್ಧ ಗಂಟೆ ಕಳೆದರು. ಈ ಸಂದರ್ಭದಲ್ಲಿ ಮೋದಿ ಅವರ ಸಹೋದರ ಪಂಕಜ್ ಮೋದಿ ಸಹ ಇದ್ದರು.

ಬಳಿಕ ಕೋವಿಂದ ದಂಪತಿ ಕೋಬಾ ಪ್ರದೇಶದ ಬಳಿ ಇರುವ ಮಹಾವೀರ್ ಜೈನ್ ಆರಾಧನಾ ಕೇಂದ್ರಕ್ಕೆ ತೆರೆಳಿ ಆಚಾರ್ಯ ಶ್ರೀ ಪದ್ಮಸಾಗರಸೂರ್‍ಜಿ ಅವರ ಆಶೀರ್ವಾದ ಪಡೆದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ರೂಪಾಣಿ ಸಹ ಹಾಜರಿದ್ದರು.

Facebook Comments