ಅಮೆರಿಕದಲ್ಲಿ ಪೊಲೀಸ್ ಗುಂಡಿಗೆ ಮತ್ತೊಬ್ಬ ಕಪ್ಪು ವರ್ಣೀಯ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಅಟ್ಲಾಂಟಾ, ಜೂ.14-ಪೊಲೀಸ್ ಕಸ್ಟಡಿಯಲ್ಲಿದ್ದ ಜರ್ಜ್ ಫ್ಲಾಯ್ಡ್ ಮೃತಪಟ್ಟ ನಂತರ ಅಮೆರಿಕದಾದ್ಯಂತ ಭುಗಿಲೆದ್ದ ವ್ಯಾಪಕ ಹಿಂಸಾಚಾರ ಮತ್ತು ಲೂಟಿ ಘಟನೆಗಳು ಇನ್ನೂ ಹಚ್ಚ ಹಸಿರಾಗಿರುವಾಗಲೇ ಅಟ್ಲಾಂಟಾದಲ್ಲಿ ಪೊಲೀಸ್ ಗುಂಡಿಗೆ ಮತ್ತೊಬ್ಬ ಬ್ಲಾಕ್ ಮ್ಯಾನ್ ಬಲಿಯಾಗಿದ್ದು, ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿದೆ.

ರೇಶಾರ್ಡ್ ಬ್ರೂಕ್ಸ್ (27) ಪೊಲೀಸರು ಹಾರಿಸಿದ ಗುಂಡಿನಿಂದ ಹತನಾದ ನಂತರ ಅಟ್ಲಾಂಟಾದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಉದ್ವಿಗ್ನ ವಾತಾವರಣ ನೆಲೆಸಿದೆ. ಪರಿಸ್ಥಿತಿ ಕೈ ಮೀರಿ ಹೋಗುವುದನ್ನು ತಪ್ಪಿಸಲು ಪೊಲೀಸ್ ಪಡೆ ಹೆಣಗಾಡುತ್ತಿದೆ.

ಬ್ರೂಕ್ಸ್ ಹತನಾದ ಬಳಿಕ ಕೆಲವೇ ಗಂಟೆಗಳಲ್ಲಿ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥರಾದ ಎರಿಕಾ ಶೀಲ್ಡ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.

ಪ್ರತಿಭಟನೆ ವೇಳೆ ಕಪ್ಪು ವರ್ಣೀಯ ಬ್ರೂಕ್ಸ್ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಅಕಾರಿಗಳು ತಿಳಿಸಿದ್ದರೆ, ಆತ ಓಡುತ್ತಿದ್ದಾಗ ಪೊಲೀಸರು ಫೈರಿಂಗ್ ಮಾಡಿದರು ಎಂದು ಇನ್ನೊಂದು ಮೂಲಗಳು ಹೇಳಿವೆ.

ಜಾಜ್ ಫ್ಲಾಯ್ಡ್ಸ್ ಪೊಲೀಸ್ ಕಸ್ಟಡಿ ಸಾವಿನಿಂದ ಅಮೆರಿಕದಾದ್ಯಂತ ವ್ಯಾಪಕ ಹಿಂಸಾಚಾರ, ಲೂಟಿ, ಅಗ್ನಿಸ್ಪರ್ಶ ಮತ್ತು ಹತ್ಯೆ ನಡೆದ ಘಟನೆಗಳ ಬೆಂಕಿ ಇನ್ನೂ ಉರಿಯುತ್ತಿರುವ ಸಂದರ್ಭದಲ್ಲೇ ಮತ್ತೋರ್ವ ಕಪ್ಪು ವರ್ಣೀಯನನ್ನು ಪೊಲೀಸರು ಕೊಂದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಘಟನೆ ನಡೆ ಅಮೆರಿಕದ ಹಲವಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆಯಿಂದ ಅಟ್ಲಾಂಟಾ ಮತ್ತು ಸುತ್ತಮುತ್ತಲ ನಗರಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ರಾತ್ರಿ ಅಟ್ಲಾಂಟಾ ನಗರ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು, ಅಂಗಡಿ ಮುಂಗಟ್ಟುಗಳು, ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದು, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

Facebook Comments

Sri Raghav

Admin