ಎಟಿಎಂ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ 3.93 ಲಕ್ಷ ದೋಚಿದ್ದ ಖದೀಮ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ವೃದ್ಧರು ಹಾಗೂ ಬಡವರನ್ನ ಟಾರ್ಗೆಟ್ ಮಾಡಿಕೊಂಡು ಎಟಿಎಂನಲ್ಲಿ ಹಣ ಪಡೆಯುವಾಗ ಹೊಂಚುಹಾಕಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಸೈಬರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಆನಂದ್( 35) ಆರೋಪಿಯಾಗಿದ್ದು , ಈತನಿಂದ 1.8 ಲಕ್ಷ ರೂ ಗಳನ್ನು ವಶಕ್ಕೆ ಪಡೆಯಲಾಗಿದೆ.

ಹಾಸ‌ನ,ಅರಸೀಕೆರೆ, ತಿಪಟೂರು ,ಗಂಡಸಿ, ದುದ್ದ ಸೇರಿದಂತೆ 9 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು ಸುಮಾರು ರೂಪಾಯಿ 3 .93 ಲಕ್ಷ ರೂಗಳನ್ನು ಲಪಟಾಯಿಸಿದ್ದಾನೆ ಎಂದು ಮಾಹಿತಿ ನೀಡಿದ ಅವರು ಆರೋಪಿಯಿಂದ ಮಾರುತಿ ಸ್ವಿಫ್ಟ್ ಕಾರನ್ನು ಅಮಾನತು ಪಡಿಸಿಕೊಳ್ಳಲಾಗಿದೆ ಎಂದು ಶ್ರೀನಿವಾಸಗೌಡ ತಿಳಿಸಿದರು.

# ಬಡವರು ಹಾಗೂ ವೃದ್ಧರೆ ಈತನ ಟಾರ್ಗೆಟ್;
ಎಟಿಎಂ ಗಳಲ್ಲಿ ಹಣ ಪಡೆಯಲು ಆಗಮಿಸುತ್ತಿದ್ದ ವೃದ್ದರು ಹಾಗೂ ಬಡವರನ್ನು ಗಮನಿಸುತ್ತಿದ್ದ ಆರೋಪಿ ಆನಂದ್ ಎಟಿಎಂ‌ ನಿಂದ ಹಣ‌ ಪಡೆಯಲು ಸಹಾಯ ಮಾಡುವ ನೆಪದಲ್ಲಿ ಹಣ ದೂಚುತ್ತಿದ್ದ ಆನಂದ್ ಎಟಿಎಂನಿಂದ ಹಣ ದೋಚಿ ಪರಾರಿಯಾಗುತ್ತಿದ್ದ ಈ ಮೂಲಕ ಇವನು ಲಕ್ಷಾಂತರ ರೂ ಲಪಟಾಯಿಸಿದ್ದಾನೆ ಎಂದು ಎಸ್ಪಿ ತಿಳಿಸಿದರು‌.

# ಘಟನೆ ವಿವರ ;
ಅಕ್ಟೋಬರ್ 3ರಂದು ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ಹುಚ್ಚೇಗೌಡ ಎಂಬವರು ಸೈಬರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ ಅವರು ಬಿಎಂ‌ ರಸ್ತೆಯ ಎಚ್ ಡಿಸಿ ಸಿ ಬ್ಯಾಂಕ್ನಲ್ಲಿ ತಮ್ಮ ಉಳಿತಾಯ ಖಾತೆಯಿಂದ ಸೆಪ್ಟೆಂಬರ್ 4 ರಂದು ಹಣ ಪಡೆಯುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ತಾನು ನಿಮಗೆ ಹಣ ತೆಗೆದುಕೊಡುತ್ತೇನೆಂದು ಹೇಳಿ ನಂಬಿಸಿ ಅವರ ಎಟಿಎಂ ಕಾರ್ಡ್ ಮತ್ತು ಸೀಕ್ರೆಟ್ ನಂಬರನ್ನು ಪಡೆದು 7000 ಹಣವನ್ನು ಡ್ರಾ ಮಾಡಿಕೊಟ್ಟಿದ್ದಾನೆ ನಂತರ ಬದಲಿ ಎಟಿಎಂ ಕಾರ್ಡ್ ಅನ್ನು ಕೊಟ್ಟು ಹೋಗಿದ್ದು ನಂತರ ಹುಚ್ಚೆಗೌಡ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಲು ಹೋದಾಗ 23 ಸಾವಿರ ಹಣವನ್ನು ಆನಂದ್ ದೂಚಿರುವುದು ಪತ್ತೆಯಾಗಿದೆ.

# ವಿಶೇಷ ತಂಡ ರಚನೆ ;
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ವಿಶೇಷ ತಂಡವನ್ನು ರಚಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಂದಿನಿ ಅವರ ಉಸ್ತುವಾರಿಯಲ್ಲಿ ಸಿಇಎನ್ ಪೊಲೀಸರ ನಿರೀಕ್ಷಕ ದೇವೇಂದ್ರಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡರು.

ಅಕ್ಟೋಬರ್ 31 ಸಂಜೆ 5 ಗಂಟೆ ಸಮಯದಲ್ಲಿ ಕರ್ನಾಟಕ ಬ್ಯಾಂಕ್ ಎಟಿಎಂ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆನಂದನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣಗಳು ಹೊರಬಂದಿದ್ದು ಈತನ ವಿರುದ್ಧ ಹುಬ್ಬಳ್ಳಿಯಲ್ಲಿ ಸಹ ಕೊಲೆ ಪ್ರಕರಣ ದಾಖಲಾಗಿದೆ ಎಂದು ಶ್ರೀನಿವಾಸಗೌಡ ಮಾಹಿತಿ ನೀಡಿದರು .

ಈ ಸಂದರ್ಭದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಶ್ರಮಿಸಿದ ಪಿಐ ದೇವೇಂದ್ರ ಎಂ.ಎಸ್ ,ಗಿರೀಶ್, ಶ್ರೀನಾಥ್ ,ರಂಗಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳಿಗೆ ಪ್ರಶಂಸೆ ಪತ್ರವನ್ನು ಎಸ್ಪಿ ವಿತರಿಸಿದರು.

Facebook Comments

Sri Raghav

Admin